6 ತಿಂಗಳಲ್ಲೂ ಚೇತರಿಕೆ ಕಾಣದ ಮದ್ಯ ಮಾರಾಟ: ಮದ್ಯ ಪ್ರಿಯರಿಂದ ಭರ್ಜರಿ ಶಾಕ್!
Liquor Sales: ಕಳೆದ ಒಂದು ವರ್ಷದಿಂದ ಮದ್ಯ ಪ್ರಿಯರು ಸರ್ಕಾರಕ್ಕೆ ಸರಿಯಾಗಿ ಶಾಕ್ ನೀಡುತ್ತಿದ್ದಾರೆ. ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಾಣುತ್ತಿದ್ದು, ಅದರಲ್ಲೂ ಮುಖ್ಯವಾಗಿ ಬಿಯರ್ ಮಾರಾಟ ಭರ್ಜರಿ ಇಳಿಕೆ ಕಂಡಿದೆ. ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಮೂರು ಬಾರಿ ಬಿಯರ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಏರಿಕೆಯಾಗಿದ್ದು, ಮದ್ಯದಿಂದ ಸರ್ಕಾರಕ್ಕೆ ಬರುವ ಆದಾಯದ ಮೇಲೆ ಪರಿಣಾಮ ಬೀರಿದೆ. ಇನ್ನು ಕಳೆದ ಆರು ತಿಂಗಳ ಅವಧಿಯಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಆಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕಳೆದ ಕೆಲವು ದಿನಗಳಿಂದ ಮದ್ಯ ಪ್ರಿಯರು ಬಿಯರ್ ಸೇರಿದಂತೆ ವಿವಿಧ ಮದ್ಯಗಳನ್ನು ಖರೀದಿ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಮದ್ಯ / ಅಬಕಾರಿಯಿಂದ ಭರ್ಜರಿ ಆದಾಯ ಗಳಿಸಬಹುದು ಎಂದು ನಿರೀಕ್ಷೆ ಮಾಡಿದ್ದ ಸರ್ಕಾರಕ್ಕೆ ಶಾಕ್ ಆಗಿದೆ. ಅದರಲ್ಲೂ ಮುಖ್ಯವಾಗಿ ಕಳೆದ ಆರು ತಿಂಗಳಿನಿಂದಲೂ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆ ಮುಂದುವರಿದಿದೆ.

ಅಬಕಾರಿ ಇಲಾಖೆಯ ಅರ್ಧ ವಾರ್ಷಿಕ / ಆರು ತಿಂಗಳಿನ ವಹಿವಾಟಿನ ಅಂಕಿ-ಸಂಖ್ಯೆಗಳು ಇದನ್ನು ಬಹಿರಂಗಪಡಿಸಿವೆ. ಈ ಅಂಕಿ - ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಮದ್ಯ ಮಾರಾಟ ಇಳಿಕೆ ಪ್ರಮಾಣ ಮುಂದುವರಿದಿದೆ. 2023 ಮತ್ತು 2024ನೇ ಸಾಲಿಗೆ ಹೋಲಿಕೆ ಮಾಡಿದರೆ, ಈ ವರ್ಷದಲ್ಲಿ ಮದ್ಯ ಮಾರಾಟ ಭಾರೀ ಇಳಿಕೆಯ ಹಾದಿಯಲ್ಲಿದೆ. ಇನ್ನು ವರ್ಷಾಂತ್ಯ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯಲ್ಲಿ ಭರ್ಜರಿ ಮದ್ಯ ಮಾರಾಟವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆಯಾದರೂ ಇದರಿಂದ ವರ್ಷ ಪೂರ್ತಿ ಆಗಿರುವ ನಷ್ಟವನ್ನು ಸರಿದೂಗಿಸಲು ಸಾಧ್ಯವೇ ಎನ್ನುವುದು ಅನುಮಾನವಾಗಿದೆ.
Liquor Sales: ಕರ್ನಾಟಕದಲ್ಲಿ ಮದ್ಯ ಮಾರಾಟ ಇಳಿಕೆಗೆ ಕಾರಣವೇನು ?
ಮದ್ಯದ ಮೇಲೆ ಅಬಕಾರಿ ಸುಂಕ ಸೇರಿದಂತೆ ವಿವಿಧ ಟ್ಯಾಕ್ಸ್ ಹೆಚ್ಚಳ ಮಾಡಿರುವುದೇ ಮದ್ಯ ಮಾರಾಟ ಕುಸಿತಕ್ಕೆ ಮುಖ್ಯ ಕಾರಣಗಳಲ್ಲೊಂದಾಗಿದೆ. ಇನ್ನು ಬಿಯರ್ ಬೆಲೆಯನ್ನು ಹೆಚ್ಚಳ ಮಾಡಬಾರದು. ಕರ್ನಾಟಕಕ್ಕೆ ಹೋಲಿಕೆ ಮಾಡಿದರೆ ಬೇರೆ ರಾಜ್ಯಗಳಲ್ಲಿ ಮದ್ಯದ ಬೆಲೆ / ಬಿಯರ್ ಬೆಲೆ ಕಡಿಮೆ ಇದೆ. ಕರ್ನಾಟಕದಲ್ಲಿ ನಿರಂತರವಾಗಿ ಬಿಯರ್ ಬೆಲೆಯನ್ನು ಹೆಚ್ಚಳ ಮಾಡುವುದರಿಂದ ಮದ್ಯ ಮಾರಾಟ ಕುಸಿತವಾಗಬಹುದು ಎಂದು ಮದ್ಯ ತಯಾರಿಕ ಕಂಪನಿಗಳು ಒಂದು ವರ್ಷ ಮುಂಚೆಯೇ ಎಚ್ಚರಿಕೆ ನೀಡಿದ್ದವು.
2023ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಒಟ್ಟಾರೆ 352.83 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ಗೆ 8.64 ಲೀಟರ್) ಐಎಂಎಲ್ ಮದ್ಯ ಮಾತ್ರ ಮಾರಾಟವಾಗಿದೆ. ಇನ್ನು 2024ನೇ ಸಾಲಿನಲ್ಲಿ ಇದೇ ಅವಧಿಯಲ್ಲಿ 345.76 ಲಕ್ಷ ಬಾಕ್ಸ್ ಮಾತ್ರ ಮದ್ಯ ಮಾರಾಟವಾಗಿದೆ. ಇದೇ ಈ ವರ್ಷದಲ್ಲಿ (2025)ರಲ್ಲಿ 342.93 ಲಕ್ಷ ಬಾಕ್ಸ್ ಮಾರಾಟವಾಗಿದೆ. ಕಳೆದ ವರ್ಷಗಳಿಗೆ ಹೋಲಿಕೆ ಮಾಡಿ ನೋಡಿದರೆ, 2.83 ಲಕ್ಷ ಬಾಕ್ಸ್ ಮದ್ಯ ಮಾರಾಟದಲ್ಲಿ ಕೊರತೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ.












Click it and Unblock the Notifications