Liquor Price: ದರ ಇಳಿಕೆ ಬಗ್ಗೆ ಮದ್ಯಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ
ಬೆಂಗಳೂರು, ಜೂನ್ 21: ರಾಜ್ಯದ ಮದ್ಯಪ್ರಿಯರಿಗೆ ಕರ್ನಾಟಕ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮದ್ಯಪ್ರಿಯರ ಕುರಿತು ಫೆಬ್ರವರಿಯಲ್ಲಿ ಬಜೆಟ್‌ನಲ್ಲಿ ಕೊಟ್ಟಿದ್ದ ಭರವಸೆಯನ್ನು ಉಳಿಸಿಕೊಳ್ಳುವುದಾಗಿ ತಿಳಿಸಿರುವ ರಾಜ್ಯ ಸರ್ಕಾರ, ಜುಲೈ 1ರಿಂದ ವಿವಿಧ ಮದ್ಯದ ಬೆಲೆ ಇಳಿಕೆ ಜಾರಿಗೆ ತರಲಿದೆ. ಇದರಿಂದ ಪಾನಪ್ರಿಯರು ಫುಲ್ ಖುಷ್ ಆಗಿದ್ದಾರೆ.
ಜುಲೈ 1ರಿಂದ ವಿವಿಧ ದುಬಾರಿ ಪ್ರಿಮಿಯಂ ಮದ್ಯದ ಅಬಕಾರಿ ತೆರಿಗೆಯನ್ನು ಕಡಿಮೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇಂಧನ ಬೆಲೆ ಹಾಗೂ ದಿನಸಿ ವಸ್ತುಗಳು ಬೆಲೆ ಏರಿಕೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮದ್ಯದ ಬೆಲೆ ಇಳಿಸುವ ನಿರ್ಧಾರ ಕೆಲವರಿಗೆ ಅಚ್ಚರಿ ತರಿಸಿದೆ. ಎಲ್ಲ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ನಿರ್ಧಾರ ಕೈಗೊಳ್ಳಬೇಕಿತ್ತು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ಬೇರೆ ರಾಜ್ಯಗಳ ಬೆಲೆ ನೋಡಿ ದರ ಪರಿಷ್ಕರಣೆ
ಯಾವೆಲ್ಲ ಮದ್ಯದ ಬೆಲೆ ಇಳಿಕೆ ಆಗಲಿದೆ, ಯಾವ ಬ್ರ್ಯಾಂಡ್ ಎಂಬ ಮಾಹಿತಿ ನೋಡುವುದಾದರೆ, ದುಬಾರಿ ಮದ್ಯದ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಅಬಕಾರಿ ಬ್ರ್ಯಾಂಡ್ ಗಳ ಮದ್ಯದ ತೆರಿಗೆ ಇಳಿಕೆ ಆಗಲಿದೆ. ನೆರೆ ಹೊರೆಯ ರಾಜ್ಯಗಳಲ್ಲಿನ ಮದ್ಯದ ಬೆಲೆ ನೋಡಿಕೊಂಡು ಇಲ್ಲಿ ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದೆ.
ದುಬಾರಿ ಮದ್ಯ ಇನ್ನು ಅಗ್ಗ
ಇದರಿಂದ ಮದ್ಯ ಪ್ರಿಯರು ಖಷಿಯಾಗಿದ್ದಾರೆ. ದುಬಾರಿ ಬ್ರ್ಯಾಂಡ್ ಆಲ್ಕೋಹಾಲ್ ಮತ್ತಷ್ಟು ಅಗ್ಗವಾಗಲಿದೆ. ಇದೇ ವರ್ಷದ ಆರಂಭದಲ್ಲಿ ರಾಜ್ಯ ಸರ್ಕಾರಬಿಯರ್ ಮೇಲಿನ ಎಇಡಿ ಹೆಚ್ಚಳ ಮಾಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 2023ರ ಜುಲೈ ಬಳಿಕ ಈ ಎಇಡಿ ದರ ಏರಿಕೆ ಆಗುತ್ತಲೇ ಬಂದಿದೆ.
ಇದೀಗ ಮೊದಲ ಬಾರಿಗೆ ಎಇಡಿ ಕಡಿಮೆ ಮಾಡುವ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ಅಬಕಾರಿ ತೆರಿಗೆ ಇಳಿಕೆ ಕುರಿತು ಕರಡು ಅಧಿಸೂಚನೆ ಹೊರಡಿಸಿದೆ. ಇದಕ್ಕೇನಾದರೂ ಆಕ್ಷೇಪಣೆಗಳು, ವಿರೋಧಗಳಿದ್ದ ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದ್ದು, ಅದಕ್ಕಾಗಿ ಒಂದು ವಾರದ ಕಾಲಾವಕಾಶ ನೀಡಿದೆ.

ಎಇಡಿ ದರ ಏರಿಕೆ, ಕಡಿಮೆ ಬೆಲೆ ಬಿಯರ್ ಹೆಚ್ಚು ಸೇಲ್
ಸತತವಾಗಿ ಬಿಯರ್ ಬೆಲೆ ಏರಿಕೆ ಆಗಿದ್ದರಿಂದ ಮದ್ಯಪ್ರಿಯರು, ಅದರಲ್ಲೂ ಬಿಯರ್‌ಪ್ರಿಯರು ಕಡಿಮೆ ಬೆಲೆಯ ಬಿಯರ್‌ನತ್ತ ಮುಖ ಮಾಡಿದ್ದರು. ಇದರಿಂದ 250 ರೂ. ದಾಟಿ ಬಿಯರ್ ಬಿಟ್ಟು, ಅಗ್ಗದ 120-140ರವರೆಗೆ ಬಿಯರ್ ಹೆಚ್ಚುವು. ಮಾರಾಟವಾಗುತ್ತಿವೆ.
ಇದರ ಬೆನ್ನಲ್ಲೆ ದುಬಾರಿ ಮದ್ಯದ ಬೆಲೆ ಇಳಿಕೆಯ ಮಾಹಿತಿ ಹೊರ ಬಿದ್ದಿದೆ. ಎಇಡಿ ಪ್ರಮಾಣ ಏರಿಕೆ ಆಗುತ್ತಾ ಬಂದ ಪರಿಣಾಮ ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಗಿಂತಲೂ ಪ್ರೀಮಿಯಂ ಬ್ರ್ಯಾಂಡ್ ಎಣ್ಣೆ (ಮದ್ಯ) ದರ ಹೆಚ್ಚಿತ್ತು. ಹೀಗಾಗಿ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಮದ್ಯ ತರಿಸಲಾಗುತ್ತದೆ.
ಮದ್ಯ ಖರೀದಿಗೆ ಬೆರೆ ರಾಜ್ಯದತ್ತ ಗ್ರಾಹಕ
ಕರ್ನಾಟಕ ಗಡಿ ಭಾಗದಲ್ಲಿ ನೆಲೆಸಿರುವ ಮದ್ಯಪ್ರಿಯರು ಹತ್ತಿರ ರಾಜ್ಯಗಳಿಗೆ ಹೋಗಿ ಎಣ್ಣೆ ಖರೀಸಿಕೊಂಡು ಬರುತ್ತಿದ್ದಾರೆ. ಇದರಿಂದ ರಾಜ್ಯದ ಅಬಕಾರಿ ಇಲಾಖೆಗೆ ನಷ್ಟವಾಗುತ್ತಿರುವುದು ಗೊತ್ತಾಗಿದೆ. ಹೀಗಾಗಿ ನೆರೆ ರಾಜ್ಯಗಳನ್ನು ನೋಡಿಕೊಂಡು ಎಣ್ಣೆ ಇಳಿಕೆಗೆ ಸರ್ಕಾರ ನಿರ್ಧರಿಸಿದೆ.












Click it and Unblock the Notifications