ಜಾಧವ್ ಪರ ಪ್ರಚಾರ ಮಾಡ್ಬೇಡಿ: ಚಿಂಚನಸೂರ್‌ಗೆ ಜೀವ ಬೆದರಿಕೆ ಕರೆ
ಬೆಂಗಳೂರು, ಮಾರ್ಚ್ 25: ಉಮೇಶ್ ಜಾಧವ್ ಪರ ಪ್ರಚಾರ ಮಾಡಬೇಡಿ ಎಂದು ಮಾಜಿ ಸಚಿವ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ್ ಅವರಿಗೆ ಬೆದರಿಕೆ ಕರೆ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಉಮೇಶ್ ಜಾಧವ್ ಪರ ಪ್ರಚಾರ ಮಾಡಿದರೆ ನಿಮ್ಮ ಕೈ-ಕಾಲನ್ನು ಕತ್ತರಿಸುತ್ತೇವೆ ಎಂದು ಬಾಬುರಾವ್ ಚಿಂಚನಸೂರ್ ಅವರಿಗೆ ಭಾನುವಾರ ನಾಲ್ಕು ಬಾರಿ ಬೆದರಿಕೆ ಕರೆ ಬಂದಿದೆ ಇಂದು ದೂರು ನೀಡುವುದಾಗಿ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರೇ ನನಗೆ ಕರೆ ಮಾಡಿ ಬೆದರಿಕೆ ಹಾಕಿರುವುದು ಎಂದು ಚಿಂಚನಸೂರ್ ಆರೋಪಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ಕಾಂಗ್ರೆಸ್‌ನಿಂದ ಉಮೇಶ್ ಜಾಧವ್ ಬಿಜೆಪಿಗೆ ಸೇರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವರು ಪ್ರಬಲ ವ್ಯಕ್ತಿ ಎನ್ನುವುದು ಎಲ್ಲರಿಗೂ ತಿಳಿಸಿದೆ. ಇದರ ಮಧ್ಯೆ ಜಾಧವ್ ಪರ ಪ್ರಚಾರ ಮಾಡಬೇಡಿ ಎಂದು ಬೆದರಿಕೆ ಕರೆ ಮಾಡಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.












Click it and Unblock the Notifications