ಬೆಂಗಳೂರು ಬಿಟ್ಟು ಒಳ್ಳೆಯದಾಯ್ತು, ಹೈದರಾಬಾದ್ ಓಕೆ ಯುವತಿ ಪೋಸ್ಟ್ ವೈರಲ್: ಕನ್ನಡಿಗರು ಹೇಳಿದ್ದೇನು
ಬೆಂಗಳೂರು: ಬೆಂಗಳೂರಿನ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವ್ಯಂಗ್ಯವಾಗಿ ಟ್ವೀಟ್ ಮಾಡುವುದನ್ನು ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲಿ ವಲಸೆ ಸಮಸ್ಯೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರವೂ ಸಹ ಮೂಲಸೌಕರ್ಯ ವಿಚಾರದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ ಎನ್ನುವ ಜನಾಗ್ರಹದ ನಡುವೆ ವಲಸಿಗರ ವಿಷಯವು ಗಂಭೀರ ಚರ್ಚೆಗೆ ಕಾರಣವಾಗಿದೆ. ಇದೀಗ ಯುವತಿಯೊಬ್ಬರು 2025ನೇ ಸಾಲಿನಲ್ಲಿ ನಾನು ಮಾಡಿದ ಅತ್ಯಂತ ಒಳ್ಳೆಯ ಕೆಲಸ ಎಂದರೆ ಬೆಂಗಳೂರು ಬಿಟ್ಟು ಹೈದರಾಬಾದ್‌ಗೆ ಬಂದು ನೆಲೆಸಿದ್ದು ಎಂದು ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿಗೆ ನಿತ್ಯವೂ ಸಾವಿರಾರು ಜನ ಬರುತ್ತಾರೆ. ಈ ರೀತಿ ಬರುವ ಸಾವಿರಾರು ಜನರಲ್ಲಿ ಹಲವರು ಬೆಂಗಳೂರು ಬಿಟ್ಟು ಹೋಗುವುದು ಸಹ ಇದೆ. ಆದರೆ ಈ ರೀತಿ ಬಂದು ಇಲ್ಲಿ ಉದ್ಯೋಗ ಮತ್ತು ಶಿಕ್ಷಣ ಪಡೆದುಕೊಂಡು ಹೋಗುವವರಲ್ಲಿ ಕೆಲವರು ಬೆಂಗಳೂರಿನ ಬಗ್ಗೆ ವ್ಯಂಗ್ಯವಾಗಿ ಪೋಸ್ಟ್ ಮಾಡುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಇದೀಗ ಯುವತಿಯೊಬ್ಬರು ಮಾಡಿರುವ ಪೋಸ್ಟ್ ಹೊಸ ಸೇರ್ಪಡೆಯಾಗಿದೆ. ಆದರೆ ಯುವತಿಯ ಪೋಸ್ಟ್‌ನಲ್ಲಿರುವ ಕೆಲವು ವಿಚಾರಗಳ ಬಗ್ಗೆ ಕನ್ನಡಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಐಟಿ ಉದ್ಯೋಗಿ ಶ್ರೇಯಾ ಎನ್ನುವವರು, 2025ನೇ ಸಾಲಿನಲ್ಲಿ ಬೆಂಗಳೂರಿನಿಂದ ಹೊರಗೆ ಹೋಗುವುದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಾಗಿತ್ತು. ಇನ್ನು ಮುಂದೆ ರಸ್ತೆಗಳಲ್ಲಿ ಗುಂಡಿಗಳು ಇರಲ್ಲ, ಕಡಿಮೆ ದೂರಕ್ಕೆ ಪ್ರಯಾಣದ ಸಮಯ ಬೇಕಾಬಿಟ್ಟಿ ಇರಲ್ಲ, ಕ್ಯಾಬ್ ಬುಕ್ ಮಾಡಲು ಕಾಯುವ ಸಮಯ, ಹುಚ್ಚು ಟ್ರಾಫಿಕ್, ಗಡಸು / ಅಶುದ್ಧ ನೀರು, ಕಡಿಮೆ ಗುಣಮಟ್ಟದ ಆಹಾರ ಮತ್ತು ಆರೋಗ್ಯ ರಕ್ಷಣೆ ಹಾಗೂ ದುಬಾರಿ ಜೀವನ ವೆಚ್ಚ ಯಾವುದೂ ಇರಲ್ಲ. ಹೈದರಾಬಾದ್‌ನಲ್ಲಿ ಜೀವನವು ತುಂಬಾ ಶಾಂತ, ಸಂತೋಷದಾಯಕ ಮತ್ತು ಆರೋಗ್ಯಕರವಾಗಿದೆ. ಇತ್ತೀಚೆಗೆ ನಾನು ಸೋಷಿಯಲ್ ಮೀಡಿಯಾವನ್ನು ಬಳಸುವುದನ್ನು ಮರೆತಿದ್ದೇನೆ. ಅಷ್ಟು ಸಂತೋಷವಾಗಿದ್ದೇನೆ ಎಂದೂ ಅವರು ಬರೆದುಕೊಂಡಿದ್ದಾರೆ.
ಒಳ್ಳೆಯ ನಿರ್ಧಾರ ಧನ್ಯವಾದ ಎಂದ ಕನ್ನಡಿಗರು
ಶ್ರೇಯಾ ಅವರ ಪೋಸ್ಟ್‌ಗೆ ಕನ್ನಡಿಗರು ಸಹ ವ್ಯಂಗ್ಯವಾಗಿಯೇ ತಿರುಗೇಟು ನೀಡಿದ್ದಾರೆ. ನೀವು ಬೆಂಗಳೂರು ಬಿಟ್ಟು ಒಳ್ಳೆಯದು ಮಾಡಿದಿರಿ, ನಿಮಗೆ ಧನ್ಯವಾದ ಎಂದು ಕನ್ನಡಿಗರು ಹೇಳಿದ್ದಾರೆ. ಇನ್ನೂ ಕೆಲವರು ಬೆಂಗಳೂರು ಬಿಟ್ಟು ಹೋಗುತ್ತಿದ್ದೀರಿ ತುಂಬಾ ಥ್ಯಾಂಕ್ಸ್ ಬೇಕಾದರೆ ನಿಮ್ಮವರನ್ನೂ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಸೂರಜ್ ಎನ್ನುವವರು ದಯವಿಟ್ಟು ಪುಣೆಯನ್ನು ಪರಿಗಣಿಸಬೇಡಿ, ನೀವು ಹೇಳಿದ ಎಲ್ಲದರಿಂದಲೂ ನಾವು ತುಂಬಾ ಸಂತೋಷವಾಗಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.
ನಮ್ಮ ಬೆಂಗಳೂರು ನಗರವನ್ನು ತೊರೆದಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಂತಹ ಇತರ ಜನರು ಕೂಡ ನಮ್ಮ ನಗರವನ್ನು ಬೇಗನೆ ತೊರೆಯಲಿ, ಆಗ ನಾವು ಹೆಚ್ಚು ವಲಸಿಗರಿಲ್ಲದೆ ಶಾಂತಿಯುತವಾಗಿ ಬದುಕುತ್ತೇವೆ ಎಂದೂ ಕೆಲವರು ಹೇಳಿದ್ದಾರೆ.
ಪೋಸ್ಟ್ ವೈರಲ್ ಬೆನ್ನಲ್ಲೇ ಮತ್ತೊಂದು ಪೋಸ್ಟ್
ಶ್ರೇಯಾ ಎನ್ನುವವರು ತಮ್ಮ ಮೊದಲ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಜನರು ದ್ವೇಷವನ್ನು ಬೇಗನೆ ಹೊರಹಾಕುತ್ತಾರೆ. ಆದರೆ ಬೆಂಗಳೂರಿನಲ್ಲಿ ಮೊದಲು ಇಷ್ಟೊಂದು ಸಮಸ್ಯೆಗಳಿವೆ ಅಥವಾ ಅವುಗಳನ್ನು ನಿಜವಾಗಿಯೂ ಹೇಗೆ ಪರಿಹರಿಸಬಹುದು ಎಂದು ಯೋಚಿಸುವುದು ಅಪರೂಪ. ಸಮಸ್ಯೆಗಳನ್ನು ಎಣಿಸುವುದು ಸರಿ, ಆದರೆ ಯಾರಾದರೂ ಹಾಗೆ ಮಾಡಿದ ತಕ್ಷಣ, ಅವರು ಕೇಳುವ ಬದಲು ದಾಳಿಗೆ ಒಳಗಾಗುತ್ತಾರೆ.
Moving out of Bengaluru was the best decision I made in 2025.
— Shreya (@shreyacasmalert) December 29, 2025
No more
- potholes on road
- absurd travelling time for short distances
- waiting hours to get cab booked
- insane traffic
- hard water
- low quality food & healthcare
- expensive cost of living
Life has become so…
ಬೆಂಗಳೂರಿನಲ್ಲಿ ವಾಸಿಸುವ ಬಗ್ಗೆ ಅನೇಕ ಜನರು ನಿಜವಾಗಿಯೂ ಉತ್ಸುಕರಾಗಿದ್ದರೆ, ಆ ಶಕ್ತಿಯು ಅದನ್ನು ಸುಧಾರಿಸಲು ಏಕೆ ಬಳಕೆ ಆಗುತ್ತಿಲ್ಲ ಎಂದು ಯುವತಿ ಪ್ರಶ್ನೆ ಮಾಡಿದ್ದಾರೆ. ಪರಿಹಾರಗಳು ಅಥವಾ ಜಾಗೃತಿಯ ಬಗ್ಗೆ ಚರ್ಚೆಗಳು ಯಾಕೆ ಇಲ್ಲ. ಇನ್ನು ಮುಂದೆ ಅಲ್ಲಿ ವಾಸಿಸದ ವ್ಯಕ್ತಿಯನ್ನು ದ್ವೇಷಿಸುವುದರಿಂದ ಏನೂ ಸಾಧಿಸುವುದಿಲ್ಲ. ಪ್ರತಿಯೊಂದು ನಗರವು ಅದರ ಸಾಧಕ - ಬಾಧಕಗಳನ್ನು ಹೊಂದಿರುತ್ತವೆ. ಪ್ರತಿಯೊಂದು ನಗರವು ಎಲ್ಲರಿಗೂ ಹೊಂದುವುದಿಲ್ಲ ಎಂದು ಒಪ್ಪಿಕೊಳ್ಳುವುದು ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಟ್ಟು ಹೋಗುವಾಗ ಕೊಂಕು ಯಾಕೆ ?
ಬೆಂಗಳೂರಿಗೆ ಬಂದು ನೆಲೆಸಿ ಇಲ್ಲಿ ಎಲ್ಲವನ್ನೂ ಪಡೆದುಕೊಂಡು ಇಲ್ಲಿಂದ ಹೋಗುವಾಗ ಮಾತ್ರ ಈ ನಗರದ ಬಗ್ಗೆ ಕೊಂಕು ನುಡಿಯುವುದು ಯಾಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಇದೊಂದು ಪ್ರಚಾರದ ತಂತ್ರವಾಗಿ ಬದಲಾಗಿದೆ ಎಂದೂ ಕೆಲವರು ದೂರಿದ್ದಾರೆ.
-
Bengaluru Waste: ಬೆಂಗಳೂರಲ್ಲಿ ಕಸ ಸಂಗ್ರಹ ವ್ಯವಸ್ಥೆಯಲ್ಲಿ ಹೊಸ ಸುಧಾರಣೆ -
ಬೆಂಗಳೂರು ಉತ್ತರ: ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ, ರಸ್ತೆ ಅಗಲೀಕರಣ, ಟಿ.ಡಿ.ಆರ್ ಬಗ್ಗೆ ಮಹತ್ವದ ಚರ್ಚೆ -
Bengaluru Rent: ಬೆಂಗಳೂರು ಬಾಡಿಗೆ, ಅಡ್ವಾನ್ಸ್ ದುಬಾರಿ: ದೆಹಲಿ, ಮುಂಬೈನಲ್ಲಿ ಇಷ್ಟಿಲ್ಲ, ನಾರ್ಥಿ ಯುವತಿ ವೈರಲ್ ವಿಡಿಯೋ -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
Bengaluru Second Airport: 5 ತಿಂಗಳಲ್ಲಿ ಬೆಂಗಳೂರು 2ನೇ ವಿಮಾನ ನಿಲ್ದಾಣ ಸ್ಥಳ ಫೈನಲ್: 3 ತಾಣಗಳಿಗೆ ಕಾರ್ಯಸಾಧ್ಯತಾ ವರದಿ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ











Click it and Unblock the Notifications