ಮಾರ್ಚ್‌ನಲ್ಲಿ ಬೆಂಗಳೂರಿನ ಎಲ್ಲಾ ಬೀದಿಗಳಲ್ಲಿ ಎಲ್‌ಇಡಿ ಬೆಳಕು
ಬೆಂಗಳೂರು, ಜನವರಿ 30: ಬೆಂಗಳೂರು ಬೀದಿಗಳು ಇನ್ನು ಎಲ್‌ಇಡಿ ದೀಪಗಳಿಂದ ಬೆಳಗಲಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲಾ ಬೀದಿಗಳಲ್ಲಿ ಎಲ್‌ಇಡಿ ದೀಪ ಅಳವಡಿಸಲು ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿರುವ ಒಟ್ಟು 4.7 ಲಕ್ಷ ಬೀದಿದೀಪಗಳ ಜಾಗದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಈಗಾಗಲೇ 10 ಸಾವಿರ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ.
ನಗರದಲ್ಲಿ 4,70,648 ಬೀದಿ ದೀಪಗಳಿವೆ. ಈ ಬೀದಿದೀಪಗಳಿಂದ ಪ್ರತಿ ತಿಂಗಳು ಬೆಸ್ಕಾಂಗೆ 12 ಕೋಟಿ ರೂ ನೀಡುತ್ತಿದೆ. ವರ್ಷಕ್ಕೆ 140 ಕೋಟಿ ನೀಡುತ್ತಿದೆ. ಪ್ರತಿ ವರ್ಷವೂ ಸುಮಾರು 200 ಕೋಟಿ ರೂನಷ್ಟು ವಿದ್ಯುತ್ ಶುಲ್ಕಕ್ಕೆ ಬಿಬಿಎಂಪಿ ವೆಚ್ಚ ಮಾಡುತ್ತಿದೆ.

ಈ ಎಲ್‌ಇಡಿ ದೀಪಗಳನ್ನು ಅಳವಡಿಸುವುದರಿಂದ ಸುಮಾರು 3.5 ಕೋಟಿ ರೂವನ್ನು ಉಳಿಸಬಹುದಾಗಿದೆ.ಈ ಯೋಜನೆಗೆ ಬಿಬಿಎಂಪಿಯು ಬಂಡವಾಳ ಹೂಡಬೇಕಾಗಿಲ್ಲ, ಬದಲಾಗಿ ಬಿಬಿಎಂಪಿಗೆ ಹಣ ದೊರೆಯಲಿದೆ. ಒಟ್ಟು 30 ತಿಂಗಳೊಳಗಾಗಿ ನಗರದಲ್ಲಿರುವ 4.6 ಬೀದಿದೀಪಗಳ ಜಾಗದಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಒಟ್ಟು 10 ವರ್ಷಗಳ ಕಾಲ ಡಿಬಿಎಫ್ ಓ ಸಂಸ್ಥೆಯೇ ನೋಡಿಕೊಳ್ಳಳಿದೆ.












Click it and Unblock the Notifications