ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿದ್ದಕ್ಕೆ ಉಪನ್ಯಾಸಕನ ಅಮಾನತು: ಯಾಕೀ ಶಿಕ್ಷೆ?

ಬೆಂಗಳೂರು, ಜೂನ್‌ 14: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ದಬ್ಬಾಳಿಕೆ ಹಾಗೂ ಕನ್ನಡಿಗರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ಹೆಚ್ಚಾಗಿವೆ. ಕನ್ನಡ ಗೊತ್ತಿಲ್ಲ ಎನ್ನುವವರಿಗಿಂತ ಅನ್ಯ ಭಾಷೆಯನ್ನ ಮಾತನಾಡಿ ಎಂದು ಒತ್ತಡ ಹಾಕುವವರ ಸಂಖ್ಯೆಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ತಿಂಗಳಷ್ಟೇ ಬ್ಯಾಂಕ್‌ ಸಿಬ್ಬಂದಿಯೊಬ್ಬರು ನಾನು ಕನ್ನಡ ಮಾತನಾಡಲ್ಲ ಎಂದು ಸುದ್ದಿಯಾಗಿದ್ರು. ಅಲ್ಲದೆ ಇದಕ್ಕೆ ಕನ್ನಡಿಗರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು.

ಇದೀಗ ಬೆಂಗಳೂರಿನಲ್ಲಿ ಮತ್ತೊಮ್ಮೆ ಅನ್ಯ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ. ವಿಪರ್ಯಾಸ ಅಂದರೆ ಕಾಲೇಜು ಒಂದರಲ್ಲಿ ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಉಪನ್ಯಾಸಕರು ಕನ್ನಡದಲ್ಲಿ ಉತ್ತರ ಹೇಳಿದ್ದಕ್ಕೆ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಕೋಣನಕುಂಟೆಯಲ್ಲಿರುವ ಆರ್ ವಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಉಪನ್ಯಾಸಕರಿಗೆ ಕನ್ನಡದಲ್ಲಿ ಉತ್ತರ ಹೇಳಿದ್ದಕ್ಕೆ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರೆ.

Lecturer suspended for speaking in Kannada in Karnataka

ಉಪನ್ಯಾಸಕರು ಪಾಠ ಮಾಡುವ ಸಂದರ್ಭದಲ್ಲಿ ಕನ್ನಡದಲ್ಲಿ ವಿದ್ಯಾರ್ಥಿ ಪ್ರಶ್ನೆ ಕೇಳಿದ್ದ ಅದಕ್ಕೆ ಉಪನ್ಯಾಸಕ ಕನ್ನಡದಲ್ಲಿ ಉತ್ತರಿಸಿದ್ದರು. ಕನ್ನಡದಲ್ಲಿ ಉತ್ತರ ನೀಡಿದ್ದಕ್ಕೆ ಉಪನ್ಯಾಸಕನ ವಿರುದ್ಧ ಕಾಲೇಜು ಆಡಳಿತ ಮಂಡಳಿಗೆ ಓರ್ವ ವಿದ್ಯಾರ್ಥಿ ದೂರು ನೀಡಿದ್ದಾನೆ.ಉಪನ್ಯಾಸಕ ರಾಜೀನಾಮೆಗೆ ಕಾಲೇಜು ಆಡಳಿತ ಮಂಡಳಿ ಆಗ್ರಹಿಸಿದೆ.

ಉಪನ್ಯಾಸಕನ ಪುತ್ರಿ ಅದೇ ಕಾಲೇಜಿನ ಬೇರೆ ಬ್ರ್ಯಾಂಚ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಹೀಗಾಗಿ ರಾಜೀನಾಮೆ ಕೊಡಲು ನಿರಾಕರಿಸಿದಕ್ಕೆ ಉಪನ್ಯಾಸಕನಿಗೆ ಬೆದರಿಕೆ ಹಾಕಿದ್ದಾರೆ. ಮಗಳ ಟಿ.ಸಿ ಹಾಗು ದಾಖಲೆಗಳನ್ನು ಕೊಡಲ್ಲ ಅಂತ ಉಪನ್ಯಾಸಕನಿಗೆ ಬೆದರಿಕೆ ಹಾಕಿದ್ದಾರೆ. ತಮ್ಮ ಮಕ್ಕಳ ಭವಿಷ್ಯ ಮತ್ತು ಒತ್ತಡಕ್ಕೆ ಮಣಿದು ಉಪನ್ಯಾಸಕ ರಾಜೀನಾಮೆ ನೀಡಿದ್ದಾರೆ. ಕನ್ನಡ ಮಾತಾಡಿದಕ್ಕೆ ಹೀಗೆಲ್ಲ ಆಯ್ತು ಅಂತ ಉಪನ್ಯಾಸಕರು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+