Lawyer Jagadish: ನಟ ದರ್ಶನ್ ಪ್ರಕರಣದ ತನಿಖಾಧಿಕಾರಿ ಎಸ್‌ಸಿಪಿ ಚಂದನ್ ಕುಮಾರ್ ಬಗ್ಗೆ ಲಾಯರ್ ಜಗದೀಶ್ ಹೀಗ್ ಅಂದ್ಬಿಟ್ರು
Lawyer Jagadish: ಲಾಯರ್ ಜಗದೀಶ್ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಟೋಲ್ ವಿಚಾರಕ್ಕೆ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಇದೀಗ ನೆಲಮಂಗಲ ಟೋಲ್ ಬಳಿ ವಾಹನ ಸವಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಇದೇ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ಅವರ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ.
ಈಗ ನಾನು ಬೆಳ್ಳೂರು ಕ್ರಾಸ್ ಶ್ರೀ ಶ್ರೀ ನಿರ್ಮಲಾನಂದ ಗುರೂಜಿ ಅವರನ್ನು ನೋಡಲು ಹೋಗುತ್ತಿದ್ದೇನೆ. ಅವರ ಆಶೀರ್ವಾದ ಬೇಕು ಎಂದು ಹೇಳುತ್ತಲೇ ಬಾಲಗಂಗಾಧರ ಮಠದ ಬಗ್ಗೆ ಗುಣಗಾನ ಮಾಡಿದ್ದಾರೆ. ಅಲ್ಲದೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಚಂದನ್ ಕುಮಾರ್ ಅವರು ಇದೇ ಮಠದಲ್ಲಿ ಓದಿದ್ದಾರೆ ಅಂತಾಲೂ ಹೇಳಿದ್ದಾರೆ.

ಇನ್ನು ನಿಯಮ ಬಗ್ಗೆ ತಿಳಿಸಿದ ಲಾಯರ್ ಕೆ.ಎನ್.ಜಗದೀಶ್ ಅವರಿಗೆ ಒಂದೆಡೆ ನೆಟ್ಟಿಗರು ಧನ್ಯವಾದ ಸಲ್ಲಿಸುತ್ತಿದ್ದರೆ, ಮತ್ತೊಂದೆಡೆ ಇನ್ನೂ ಕೆಲವರು ನೀವು ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರನ್ನು ಚಲಾಯಿಸಿದ್ದೀರಿ. ಟೋಲ್ ಫ್ರೀ ನಿಯಮದ ಬಗ್ಗೆ ಮಾತನಾಡುವ ಲಾಯರ್‍ಗೆ ಫೋನ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸಬಾರದೆಂದು ಗೊತ್ತಿಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ.
ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಭಾರೀ ಸದ್ದು ಮಾಡಿದ್ದರು. ಇನ್ನು ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗಡೆ ಹಾಕಲಾಗಿತ್ತು. ಮತ್ತೊಂದೆಡೆ ಲಾಯರ್ ಜಗದೀಶ್ ಅವರ ಮೇಲೆ ಕೈ ಮಾಡಿದ್ದಾರೆ ಎನ್ನುವ ಕಾರಣಕ್ಕೆ ರಂಜಿತ್ ಅವರನ್ನು ಕೂಡ ಹೊರಹಾಕಲಾಯಿತು.
ಬಳಿಕ ಹೊರಗಡೆಯೂ ಕೂಡ ಅನ್ಯಾಯದ ಪರ ಧ್ವನಿ ಎತ್ತುವ ಮೂಲಕ ಅಷ್ಟೇ ಸೌಂಡ್ ಮಾಡುತ್ತಿದ್ದಾರೆ. ಈ ಮೂಲಕ ಲಾಯರ್ ಜಗದೀಶ್ ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ.
ಮಹತ್ವದ ಮಾಹಿತಿ: ಟೋಲ್ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಈಗ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಬಳಸುವ ಖಾಸಗಿ ವಾಹನ ಚಾಲಕರು ಟೋಲ್ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಚಾಲಕರು 20 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಮಾತ್ರ ಟೋಲ್ ರಸ್ತೆಗಳನ್ನು ಬಳಸಿದರೆ. ಅಂತಹವರು ಯಾವುದೇ ಟೋಲ್ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಈ ಹೊಸ ನಿಯಮದ ಪ್ರಕಾರ, ಜಿಎನ್‌ಎಸ್‌ಎಸ್ ವ್ಯವಸ್ಥೆಯನ್ನು ಬಳಸುವ ಖಾಸಗಿ ವಾಹನ ಚಾಲಕರು ಪ್ರತಿದಿನ 20 ಕಿಲೋ ಮೀಟರ್‌ವರೆಗಿನ ಪ್ರಯಾಣಕ್ಕೆ ಯಾವುದೇ ಟೋಲ್ ಪಾವತಿಸಬೇಕಾಗಿಲ್ಲ.
ಆದರೆ, ಅವರು 20 ಕಿಲೋ ಮೀಟರ್‌ಗಿಂತ ಹೆಚ್ಚು ಪ್ರಯಾಣ ಮಾಡಿದರೆ ಮಾತ್ರ, ಪ್ರಯಾಣ ದೂರದ ಆಧಾರದ ಮೇಲೆ ಟೋಲ್ ಪಾವತಿಸಬೇಕಾಗುತ್ತದೆ. ಈ ನಿಯಮ ಇಡೀ ದೇಶದಲ್ಲಿ ಅನ್ವಯ ಆಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಕೇಂದ್ರ ಸಚಿವಾಲಯವು ಕೆಲವು ದಿನಗಳ ಹಿಂದೆ ಫಾಸ್ಟ್ಯಾಗ್ ಜೊತೆಗೆ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್‌ಎಸ್‌ಎಸ್) ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಿತ್ತು. ಇದೀಗ ಈ ವ್ಯವಸ್ಥೆಯನ್ನು ಕೆಲವು ರಾಜ್ಯಗಳಲ್ಲಿ ಮಾತ್ರ ಪ್ರಾಯೋಗಿಕ ಯೋಜನೆಯಾಗಿ ಜಾರಿಗೆ ತರಲಾಗಿದೆ.
ಪ್ರಸ್ತುತ ಇದನ್ನು ಕರ್ನಾಟಕದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಮತ್ತು ಹರಿಯಾಣದ ಪಾಣಿಪತ್-ಹಿಸಾರ್ ರಾಷ್ಟ್ರೀಯ ಹೆದ್ದಾರಿ 709ರಲ್ಲಿ ಪರೀಕ್ಷಿಸಲಾಗುತ್ತಿದೆ. ಇದರ ಯಶಸ್ಸಿನ ನಂತರ, ದೇಶಾದ್ಯಂತ ಇತರ ಹೆದ್ದಾರಿಗಳಲ್ಲಿ ಇದನ್ನು ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸುತ್ತಿದೆ.












Click it and Unblock the Notifications