ಅಕ್ರಮ ಡಿನೋಟಿಫಿಕೇಷನ್, ಎಚ್ಡಿಕೆ ದಂಪತಿ ಇನ್ ಟ್ರಬಲ್!
ನವದೆಹಲಿ/ ಬೆಂಗಳೂರು, ಸೆ. 27: ವಿಶ್ವ ಭಾರತಿ ಹೌಸ್ ಬಿಲ್ಡಿಂಗ್ ಕೋ ಆಪರೇಟಿವ್ ಸೊಸೈಟಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿದ ಆರೋಪ ಎದುರುಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ವಿಚಾರಣೆ ಭೀತಿ ಎದುರಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ(ಅಂದಿನ ಮಧುಗಿರಿ ಶಾಸಕಿ) ಅನಿತಾ ಕುಮಾರಸ್ವಾಮಿ ಅವರು ವಿಚಾರಣೆ ಎದುರಿಸಲಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಈ ಮುಂಚೆ ಎಚ್ಡಿಕೆ ದಂಪತಿ ವಿರುದ್ಧ ಇದ್ದ ಕ್ರಿಮಿನಲ್ ಪ್ರಕರಣದ ತನಿಖೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಆದರೆ, ಕರ್ನಾಟಕ ಹೈಕೋರ್ಟ್ 2011ರಲ್ಲಿ ನೀಡಿದ ಆದೇಶವನ್ನು ಅದೇಶವನ್ನು ಸುಪ್ರೀಂಕೋರ್ಟ್ ಇದೀಗ ರದ್ದು ಮಾಡಿದೆ.
ಏನಿದು ಪ್ರಕರಣ: ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅಕ್ರಮವಾಗಿ 80 ಎಕರೆ ಪ್ರದೇಶದ ಭೂಮಿಯನ್ನು ಬೆಂಗಳೂರಿನ ವಿಶ್ವಭಾರತಿ ಹೌಸಿಂಗ್ ಸೊಸೈಟಿಗೆ ಅಕ್ರಮವಾಗಿ ಮಂಜೂರು ಮಾಡಿದ್ದರು.
ಇದೇ ಸೊಸೈಟಿಯಿಂದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರಿಗೆ ನಿವೇಶನ ಮಂಜೂರಾಗಿತ್ತು. ಇದಲ್ಲದೆ ಜಂತಕಲ್ ಎಂಟರ್ ಪ್ರೈಸಸ್ ಗೆ ಅಕ್ರಮವಾಗಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಎಚ್ಡಿ ಕುಮಾರಸ್ವಾಮಿ ಸಹಕರಿಸಿದ್ದರು ಎಂಬ ಆರೋಪಿಸಲಾಗಿದೆ.
ಬಿಜೆಪಿಯ ವಿನೋದ್ ಕುಮಾರ್ ಅವರು ಸಲ್ಲಿಸಿದ್ದ ದೂರು ರಾಜಕೀಯ ದ್ವೇಷದಿಂದ ಕೂಡಿದೆ ಎಂದು ಜಸ್ಟೀಸ್ ಜಗನ್ನಾಥನ್ ಅವರು ಪ್ರಕರಣವನ್ನು ರದ್ದುಗೊಳಿಸಿದ್ದರು.












Click it and Unblock the Notifications