ಕೊತ್ತನೂರು, ಹೆಬ್ಬಗೋಡಿ ಮೆಟ್ರೋ ಮಾರ್ಗದಲ್ಲಿದ್ದ ಎಲ್ಲಾ ಅಡೆತಡೆಗಳು ದೂರ

ಬೆಂಗಳೂರು, ಮಾರ್ಚ್ 18: ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯ ನಾಗವಾರ-ಗೊಟ್ಟಿಗೆರೆ ಮಾರ್ಗದಲ್ಲಿದ್ದ ಎಲ್ಲಾ ಅಡೆತಡೆಗಳು ದೂರವಾಗಿವೆ.

ನಾಗವಾರ- ಗೊಟ್ಟಿಗೆರೆ ಮಾರ್ಗದ ಕೊತ್ತನೂರಿನಲ್ಲಿ 31.5 ಎಕರೆ ಹಾಗೂ ಆರ್‌ವಿ ರಸ್ತೆ ಬೊಮ್ಮಸಂದ್ರ ಮಾರ್ಗದ ಹೆಬ್ಬಗೋಡಿ(39.3) ಎಕರೆ ಪ್ರದೇಶದಲ್ಲಿ ಡಿಪೋ ನಿರ್ಮಾಣ ಮಾಡಲು ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಯಲಚೇನಹಳ್ಳಿ-ಅಂಜನಾಪುರ ಮಾರ್ಗದಲ್ಲಿ ಅಂಜನಾಪುರದಲ್ಲಿ ಡಿಪೋ ನಿರ್ಮಾಣ, ಮೈಸೂರು ರಸ್ತೆ ಕೆಂಗೇರಿ ಮಾರ್ಗದ ಚೆಲ್ಲಘಟ್ಟದಲ್ಲಿ ಡಿಪೋ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.

Land hurdles cleared for Metro depots at Kothanur, Hebbagodi

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ಡಿಪೋ ನಿರ್ಮಾಣ ಮಾಡಲು ಇನ್ನೂ ಎರಡು ತಿಂಗಳ ಅವಧಿ ಬೇಕಾಗುತ್ತದೆ. ಕೊತ್ತನೂರು ಹಾಗೂ ಹೆಬ್ಬಗೋಡಿ ಡಿಪೋಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ.

ಚೆಲ್ಲಘಟ್ಟದಲ್ಲಿ 25 ಎಕರೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಅರಣ್ಯ ಇಲಾಖೆ ಜಮೀನನ್ನು ಸ್ವಾಧೀನ ಪಡಿಸಿಕೊಂಡರ ಅದಕ್ಕೆ ಪ್ರತಿಯಾಗಿ ಜಮೀನನ್ನು ಬೇರೆ ಪ್ರದೇಶದಲ್ಲಿ ನೀಡಲಾಗುತ್ತದೆ. ದಾಂಡೇಲಿಯ ಕಾಳಿ ಅರಣ್ಯದಲ್ಲಿ 29 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ.

ಎರಡನೇ ಹಂತದ ನಮ್ಮ ಮೆಟ್ರೋದ ಭೂಸ್ವಾಧೀನಕ್ಕೆ 6,300 ಕೋಟಿ ರೂಗಳನ್ನು ವ್ಯಯಿಸಲಾಗುತ್ತಿದೆ. ಮೆಟ್ರೋ ಡಿಪೋ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+