ಗಣರಾಜ್ಯೋತ್ಸವ ಪುಷ್ಪ ಪ್ರದರ್ಶನ: ಗಾಂಧಿ, ಚರಕ, 3 ಕೋತಿಗಳು
ಬೆಂಗಳೂರು, ಡಿಸೆಂಬರ್ 18: ಲಾಲ್‌ಬಾಗ್‌ನ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮಹಾತ್ಮಾ ಗಾಂದೀಜಿ, ಚರಕ ಹಾಗೂ ಮೂರು ಕೋತಿಗಳು ಅರಳಲಿವೆ.
ತೋಟಗಾರಿಕೆ ಇಲಾಖೆಯು ಜನವರಿಯಲ್ಲಿ ತಿಂಗಳಲ್ಲಿ ನಡೆಸುವ 209ನೇ ಫಲಪುಷ್ಪ ಪ್ರದರ್ಶನದಲ್ಲಿ ಮಹಾತ್ಮ ಗಾಂಧಿ ಅವರನ್ನು ಕೇಂದ್ರೀಕರಿಸಿ ಪ್ರದರ್ಶನ ರೂಪಿಸಲಾಗುತ್ತಿದೆ. ಗಾಂಧೀಜಿಯವರು ಕರ್ನಾಟಕದಲ್ಲಿ ಹೈನುಗಾರಿಕೆ ತರಬೇತಿ ಪಡೆದ ವಿಚಾರ ಸೇರಿದಂತೆ ಅವರ ಕುರಿತು ಅನೇಕ ಕುತೂಹಲಕಾರಿ ಸಂಗತಿಗಳ ಮೇಲೆ ಪುಷ್ಪಪ್ರದರ್ಶನ ಬೆಳಕು ಚೆಲ್ಲಲಿದೆ.
ಸಾರ್ವಜನಿಕ ಸಮಾರಂಭಗಳಲ್ಲಿ ಗಾಂಧೀಜಿಯವರ ಭಾಷಣ, ಅದರಿಂದ ಪ್ರೇರಣೆಗೊಂಡು ಜನ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಪರಿ, ಗಾಂಧೀಜಿಯವರು 1935 ನಂದಿ ಗಿರಿದಾಮದಲ್ಲಿ ತಂಗಿದ್ದ ದಿನಗಳು, 1924ರಲ್ಲಿ ಬೆಳಗಾವಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕಾಂಗ್ರೆಸ್ ಸಮಾವೇಶದಲ್ಲಿ ಭಾಷಣದ ಕುರಿತು ಮಾಹಿತಿಯನ್ನು ಪ್ರದರ್ಶನ ಮಾಡಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ.

ಮೂರು ಕೋತಿಗಳ ರೂಪಕ, ಬಾಪು ಕುಟೀರ, ಗಾಂಧಿ ಚರಕ, ಸಬರಮತಿ ಆಶ್ರಮ, ರಾಜ್‌ಘಾಟ್ ದಂಡಿ ಸತ್ಯಾಗ್ರಹ ಸೇರಿದಂತೆ ಬಾಪು ಅವರನ್ನು ಹಲವು ನೆನಪುಗಳು ವಿವಿಧ ಜಾತಿಯ ಪುಷ್ಪಗಳಿದ ಅನಾವರಣಗೊಳ್ಳಲಿದೆ.
ಗಾಜಿನ ಮನೆ ಹೊರಾಂಗಣದಲ್ಲಿ ಗಾಂಧಿ ಕುರಿತು ಛಾಯಾಚಿತ್ರಗಳ ಪ್ರದರ್ಶನ, ಸಿರಿಧಾನ್ಯ, ಹುಲ್ಲಿನಲ್ಲಿ ಬಾಪೂಜಿ ಪ್ರತಿಮೆ ಹಾಗೂ ಸ್ವಚ್ಛ ಭಾರತವನ್ನು ಪ್ರತಿನಿಧಿಸುವ ಗಾಂಧಿ ಕನ್ನಡಕ ರೂಪಿಸುವುದು ಯೋಜನೆಯಾಗಿದೆ.












Click it and Unblock the Notifications