ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಗರದ ಕರೆಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕಿದೆ

|
Google Oneindia Kannada News

ಬೆಂಗಳೂರು ಜು.10: ಕೊಳಚೆ ನೀರು, ವ್ಯಾಪಕ ಅತಿಕ್ರಮಣದಿಂದಾಗಿ ನಗರದಲ್ಲಿರುವ ಹಾಳಾಗುತ್ತಿರುವ ಕೆರೆಗಳನ್ನು ಬಿಬಿಎಂಪಿ ತುರ್ತು ಸಂರಕ್ಷಿಸುವ ಕಾರ್ಯ ಮಾಡಬೇಕಿದೆ. ಮೂಲಗಳ ಪ್ರಕಾರ ಬೆಂಗಳೂರಿನಲ್ಲಿರುವ 210ಕರೆಗಳಲ್ಲಿ 21ಅತಿಕ್ರಮಣದಿಂದ ಮುಕ್ತವಾಗಿದ್ದು, ಸುಮಾರು 19ಕೆರೆಗಳು ತನ್ನ ಮೂಲ ಅಸ್ತಿತ್ವ ಕಳೆದುಕೊಂಡಿವೆ. ಕೆರೆಗಳ ಸಂರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ.

ನಗರದ ಕೆರೆಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಇನ್ನು ಕೆಲವೆಡೆ ಕೆರೆಗಳು ಕೊಳೆಗೇರಿಗಳಾಗಿ ತಲೆ ಎತ್ತಿವೆ. ಸಮರ್ಪಕ ನಿರ್ವಹಣೆ ಇಲ್ಲದೇ ಕೆರೆಗಳು ಕಾಲ ಕಾಲಕ್ಕೆ ಪುನಶ್ಚೇತನ ಬಯಸುತ್ತಿವೆ. ದುರಾಸೆಯ ಅತಿಕ್ರಮಣದ ಜತೆಗೆ ಕೆರೆಗಳಲ್ಲಿ ನೀರು ತುಂಬಿಕೊಂಡಾಗ ಕಳೆ, ಬಳಳಿ ದಟ್ಟವಾದ ಬೆಳೆಯುತ್ತಿವೆ. ಪಾಚಿಯ ಹೂವುಗಳು (ಯೂಟ್ರೋಫಿಕೇಶನ್) ಕೆರೆಗಳಂತಹ ಜಲಮೂಲಗಳ ಮೇಲೆ ಸಾಕಷ್ಟು ಹಾನಿ ಮಾಡುತ್ತವೆ.

ಈ ಕೆರೆಗಳ ಪುನರುಜ್ಜೀವನ ಮತ್ತು ಅವುಗಳ ಸ್ಥಿತಿಗತಿ ಕುರಿತು ಕೆರೆ ಸಂರಕ್ಷಣಾಧಿಕಾರಿ ಮತ್ತು ಪುಟ್ಟೇನಹಳ್ಳಿ ನೈಬರ್‌ಹುಡ್ ಲೇಕ್ ಇಂಪ್ರೂವ್ಮೆಂಟ್ ಟ್ರಸ್ಟ್ ನ (ಪಿಎನ್ಎಲ್ಐಟಿ) ಟ್ರಸ್ಟಿ ಉಷಾ ರಾಜಗೋಪಾಲನ್ ಮಾತನಾಡಿದ್ದಾರೆ. ಕಳೆಗಳ ಬೆಳವಣಿಗೆಯು ಕಳಪೆ ಗುಣಮಟ್ಟದ ನೀರಿನಲ್ಲಿ ಹೆಚ್ಚಿರುತ್ತದೆ. ಕೊಳಚೆ ನೀರು ಹೆಚ್ಚಿದಷ್ಟು ಕಳೆ, ಬಳ್ಳಿ ಬೆಳೆದು ಕೆರೆ ನಿರುಪಯುಕ್ತ ವಾಗುತ್ತದೆ. ಕೆರೆಗಳನ್ನು ಸಂರಕ್ಷಿಸಬೇಕಾದವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ರಸ್ಟ್ ನಿಂದ ಕರೆ ಸರಂಕ್ಷಣೆಗೆ ಕ್ರಮ

ಟ್ರಸ್ಟ್ ನಿಂದ ಕರೆ ಸರಂಕ್ಷಣೆಗೆ ಕ್ರಮ

ಜಲಮೂಲಗಳಲ್ಲಿನ ನೀರಿನ ಗುಣಮಟ್ಟ ಸುಧಾರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ವಸತಿ ಸಮುಚ್ಚಯ ಅಥವಾ ಇನ್ನಿತರ ಚರಂಡಿ ನೀರು ಕೆರೆ ಸೇರದಂತೆ ನಿಗಾವಹಿಸಿರುತ್ತೇವೆ. ಕೊಳಚೆ ನೀರು ಪ್ರವೇಶಿಸುವ ಮೂಲ ಸ್ಥಳ ಗುರುತಿಸಿ ಟ್ರಸ್ಟ್ ವತಿಯಿಂದ ಬೆಂಗಳುರು ಜಲಮಂಡಳಿಗೆ ಕರೆ ಮಾಡುತ್ತೇವೆ. ಕೆರೆಗಳಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸುತ್ತೇವೆ. ಅಲ್ಲದೇ ಕೆರೆಗಳಲ್ಲಿನ ಸಮಸ್ಯೆ, ಪುನರುಜ್ಜಿವನ ಕುರಿತು ಬಿಬಿಎಂಪಿ ಹಾಗೂ ಬೆಂಗಳೂರು ಜಲಮಂಡಳಿ ಜತೆಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಅವರು ವಿವರಿಸಿದ್ದಾರೆ.

ನೀರಿನ ಗುಣಮಟ್ಟ ಸುಧಾರಿಸಬೇಕು

ನೀರಿನ ಗುಣಮಟ್ಟ ಸುಧಾರಿಸಬೇಕು

ಕಾರಂಜಿಗಳ ಸ್ಥಾಪನೆಯಂತಹ ಹಲವು ವಿಧಾನಗಳ ಮೂಲಕ ಕೆರೆಗಳಲ್ಲಿನ ನೀರಿನ ಗುಣಮಟ್ಟವನ್ನು ಸುಧಾರಿಸಬಹುದು. ವಿವಿಧ ವಿಧಾನಗಳ ಮೂಲಕ ಸಸ್ಯಗಳು, ಕಳೆ ಬೆಳೆಯದಂತೆ ತಡೆಯಲಾಗುತ್ತದೆ. ಇದಕ್ಕಾಗಿ ತರಬೇತಿ ಪಡೆದ ತೋಟಗಾರರ ಕೆಲಸ ಮಾಡುತ್ತಾರೆ. ಕೆರೆಗಳು ಹಾಳಾದರೆ ಅದರ ಸುತ್ತಮುತ್ತಲಿನ ನಿವಾಸಿಗಳಿಗೆ ಆರೋಗ್ಯ ಉಂಟಾಗಬಹುದು. ಕಾರಣ ಹಾಳಾದ, ಕೊಳಚೆ ನೀರು ತುಂಬಿಕೊಂಡ ಸೊಳ್ಳೆ ಮೊಟ್ಟೆ ಇಟ್ಟು ಮರಿ ಮಾಡುತ್ತೇವೆ. ಇದರಿಂದ ಕೆರೆಗಳು ಹಂತ ಹಂತವಾಗಿ ರೋಗ ರುಜಿನಗಳ ಆವಾಸ ಸ್ಥಾನವಾಗಿ ಬಿಡಬಹುದು.

ಕೊಳಚೆ ನೀರಿನಲ್ಲಿ ಸೊಳ್ಳೆ ಸಂತಾನೋತ್ಪತ್ತಿ ಅಧಿಕ

ಕೊಳಚೆ ನೀರಿನಲ್ಲಿ ಸೊಳ್ಳೆ ಸಂತಾನೋತ್ಪತ್ತಿ ಅಧಿಕ

ಕೆರೆಗಳಿಗೆ ನಿರಂತರವಾಗಿ ಒಳಚರಂಡಿ ನೀರು ಸೇರಿಕೊಂಡು ಹಾಳಾಗುತ್ತದೆ. ಅದನ್ನು ತಡೆಯದಿದ್ದರೆ ಗುಣಮಟ್ಟವಲ್ಲದ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಪ್ರಮಾಣ ಅಧಿಕ ಎನ್ನಲಾಗುತ್ತದೆ. ಇದನ್ನು ತಪ್ಪಿಸಲು ಕೆರೆಯಲ್ಲಿನ ನೀರಿನ ಗುಣಮಟ್ಟ ಕಾಪಾಡಿಕೊಳ್ಳಬೇಕು. ಗುಪ್ಪಿ (ಪೊಸಿಲಿಯಾ ರೆಟಿಕ್ಯುಲಾಟಾ) ನಂತಹ ಮೀನುಗಳನ್ನು ಕೆರೆಗೆ ಬಿಡಬೇಕು. ಕೆರೆಯಲ್ಲಿನ ಕಳೆ, ಸೊಳ್ಳೆ ಸಂತಾನೋತ್ಪತ್ತಿ ಸಂಪೂರ್ಣವಾಗಿ ತಡೆಯದಿದ್ದರು ಕೆಲವು ಕ್ರಮಗಳ ಮೂಲಕ ನಿಯಂತ್ರಿಸಬಹುದು ಎಂದು ಅವರು ತಿಳಿಸಿದ್ದಾರೆ.

ಪ್ಲಾಸ್ಟಿಕ್ ತ್ಯೆಜಿಸಬೇಕು

ಪ್ಲಾಸ್ಟಿಕ್ ತ್ಯೆಜಿಸಬೇಕು

ಕೆರೆಗಳ ಸುತ್ತ ನಿರ್ಮಿಸಲಾದ ಕಾಂಪೌಂಡ್ ಅಥವಾ ತಂತಿ ಬೇಲಿ ಡಂಪಿಂಗ್ ಯಾರ್ಡ ಆಗಿ ಮಾರ್ಪಾಡಾಗಿವೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಲಾಗಿರುತ್ತದೆ. ಪ್ಲಾಸ್ಟಿಕ್‌ನ ಅನಿಯಂತ್ರಿತ ವಿಲೇವಾರಿ ಪರಿಸರದ ಮೇಲೆ ಭಾರಿ ಪರಿಣಾ ಬೀರುತ್ತದೆ. ಉತ್ತಮ ಜೀವನ, ಪರಿಸರಕ್ಕಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕಿದೆ. ಸಾಧ್ಯವಾದಷ್ಟು ಪ್ಲಾಸ್ಟಿಕ್ ತ್ಯೆಜಿಸಬೇಕಿದೆ. ಪ್ಲಾಸ್ಟಿಕ್ ಮರಬಳಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಪರಿಸರ ಕಾಳಜಿ ಕುರಿತು ವಿವರಿಸಿದರು.

ಮನುಷ್ಯರಾದ ನಾವು ಕೆರೆ, ಪರಿಸರ ಸಂರಕ್ಷಣೆ ಯಂತ ವಿಚಾರಗಳಲ್ಲಿ ಇತರರನ್ನು ದೂರುವುದನ್ನು ಬಿಟ್ಟು ರಕ್ಷಣೆಗೆ ಕಾರ್ಯಪ್ರವೃತ್ತರಾಗಬೇಕು. ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ತಮ್ಮ ಜವಾಬ್ದಾರಿ ಮೆರೆಯಬೇಕು. ಅಂದಾಗ ಕೆರೆ ಪುನರುಜ್ಜಿವನ ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

English summary
Out of totle 210 lakes in Bengaluru, 21 lakes are free from encroachment and about 19lakes have lost their original existance. Efforts should be made to protect the deteriorating lakes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X