Get Updates
Get notified of breaking news, exclusive insights, and must-see stories!

ವಾಲೀ ವಧೆ ತಂಡದಿಂದ ಕುರುಕ್ಷೇತ್ರ ನಾಟಕ, ತಪ್ಪದೇ ನೋಡಿ

ಬೆಂಗಳೂರು, ಜೂನ್ 01: "ಅಶ್ವಘೋಷ ಥಿಯೇಟರ್ ಟ್ರಸ್ಟ್ " ಅರ್ಪಿಸುವ, "ವಾಲೀ ವಧೆ" ನಾಟಕದ ಯಶಸ್ಸಿನ ನಂತರ ಡಾ|| ಎಂ. ಗಣೇಶ್ ನಿರ್ದೇಶನದಲ್ಲಿ ಮತ್ತೊಂದು ಸಂಗೀತಮಯ ಮಹೋನ್ನತ ನಾಟಕ ಕುರುಕ್ಷೇತ್ರ ಭಾನುವಾರ(ಜೂನ್ 03)ದಂದು ಪ್ರದರ್ಶನಗೊಳ್ಳಲಿದೆ.

ಬಿ. ಪುಟ್ಟಸ್ವಾಮಯ್ಯ, ಕುವೆಂಪು ಮತ್ತು ಕಲ್ಲೂರು ಶ್ರೀನಿವಾಸ್ ರವರ ಕೃತಿ ಆಧಾರಿತ ಡಾ|| ಎಂ. ಗಣೇಶ್ ನಿರ್ದೇಶನದ ಶ್ರೀ ಸತ್ಯ ಶೋಧನಾ ರಂಗ ಸಮುಧಾಯ ಹೆಗ್ಗೋಡು ಮತ್ತು ಜನಮನದಾಟ ಅಭಿನಯಿಸುವ ಸಂಗೀತಮಯ ಮಹೋನ್ನತ ನಾಟಕ "ಕುರುಕ್ಷೇತ್ರ".

ವಿರಾಟ ನಗರದಿಂದ ಬರುವ ಕೃಷ್ಣನು ಮುಂದೆ ಒದಗಬಹುದಾದ ಭಾರತ ಸಂಗ್ರಾಮದ ಮುನ್ಸೂಚನೆಯನ್ನು ನೀಡುತ್ತಾನೆ. ಮಹಾಭಾರತದ ಅತಿ ಮುಖ್ಯ ಘಟನೆಗಳ ಪುಂಜವೇ ಈ ಕುರುಕ್ಷೇತ್ರ. ನಾಟಕವು ಪೂರ್ವಾರ್ಧದಲ್ಲಿ ಯುದ್ಧವೇ ಅಥವಾ ಸಂಧಿಯೇ ಎಂಬ ಪ್ರಶ್ನೆ ಇಟ್ಟುಕೊಂಡು ಸಾಗುತ್ತದೆ.

 Kurukshetra Kannada Drama by M Ganesh KH Kala Soudha Bengaluru

ಇಲ್ಲಿ ಕೃಷ್ಣ ಧರ್ಮ ಸಂಸ್ಥಾಪನೆಗಾಗಿ ಪಾಂಡವರು ಮತ್ತು ಕೌರವರ ನಡುವೆ ಸಂಧಿ ಮಾಡಲು ಹಸ್ತಿನಾವತಿಗೆ ಹೋಗುತ್ತಾನೆ. ಅಲ್ಲಿ ಆತನಿಗೆ ಅವಮಾನವಾಗುತ್ತದೆ. ಹೀಗೆ ನಾಟಕವು ತನ್ನೊಳಗೆ ದಾಯಾದಿ ಕಲಹ, ಅಸೂಯೆ, ಮತ್ಸರ, ಸೇಡು ಮೊದಲಾದ ಮನಸ್ಸಿನ ಹಲವು ಪಲ್ಲಟಗಳನ್ನು ಹುದುಗಿಸಿಕೊಂಡಿದೆ.

ಜೊತೆಗೆ ರಾಜಕೀಯ, ಆಸ್ತಿ ಪಾಲು, ದುರ್ಯೋಧನನ ದರ್ಪ, ದ್ರೌಪದಿಯ ಹತಾಶೆ, ಶಕುನಿಯ ನೋವು , ಕುತಂತ್ರ, ಕುಂತಿ ಗಾಂಧಾರಿಯ ಪುತ್ರ ವ್ಯಾಮೋಹ ಹೀಗೆ ಮಾನವೀಯ ಭಾವನೆಗಳ ಸೇತುವೆಯನ್ನು ನಾಟಕ ನಿರ್ಮಿಸುತ್ತಾ ಹೋಗುತ್ತದೆ.

ಕಂಪನಿ ನಾಟಕದ ಮೂಲ ಆಹಾರ್ಯ. ಅಂದರೆ, ಝಗಮಗಿಸುವ ರಂಗ ಸಜ್ಜಿಕೆಯನ್ನು ಸರಳಗೊಳಿಸಿಕೊಂಡು ಆಧುನಿಕ ರಂಗಕರ್ಮಿಗಳು ಕಂಪನಿ ನಾಟಕ ಮಾಡಿದರೆ ಅದಕ್ಕೆ ಏನೆಲ್ಲಾ ಆಯಾಮ ನೀಡಬಹುದು? ಮತ್ತು ಅಭಿನಯದ ಮೇಲೆ ಹೇಗೆ ಒತ್ತು ಕೊಡಬೇಕು ಎಂಬುದನ್ನು ಈ ನಾಟಕ ಪ್ರಯೋಗದಲ್ಲಿ ಪ್ರಯತ್ನಿಸಲಾಗಿದೆ.

 Kurukshetra Kannada Drama by M Ganesh KH Kala Soudha Bengaluru

ನಿರ್ವಹಣೆ : ಮಂಜು ಸಿರಿಗೆರೆ

ಪಾತ್ರಧಾರಿಗಳು.
ಮಂಜು ಸಿರಿಗೆರೆ, ನಾಗರಾಜ್ ಸಿರಸಿ, ಶರತ್ ಎಸ್ ನೀನಾಸಂ, ಉಮಾ ವೈ ಜಿ, ಮಂಜಪ್ಪ ಹುಲಿಗಿ, ವಾಣಿ ರೆಡ್ಡಿ, ಅಲೆ ಬಸಪ್ಪ, ಸಲ್ಮಾ ದಂಡೀಸ್, ಮಹಾಂತೇಶ್, ನವೀನ ಪ್ರತಾಪ್ ಹೆಚ್ ಕೆ, ರವಿಕುಮಾರ್ ಬೆಣ್ಣೆ, ಡಿಂಗ್ರಿ ಭರತ್ ಮತ್ತು ಕರಿಯಪ್ಪ ಕವಲೂರು.

ಸ್ಥಳ : ಕೆ ಹೆಚ್ ಕಲಾಸೌಧ
ಹನುಮಂತನಗರ
ಬಸವನಗುಡಿ , ಬೆಂಗಳೂರು
ಶ್ರೀ ರಾಮಾಂಜನೇಯ ಗುಡ್ಡ ಹತ್ತಿರ

ಜೂನ್ 3 ಭಾನುವಾರ ಸಂಜೆ 7 ಗಂಟೆಗೆ

ಟಿಕೆಟ್ ದರ - ₹200/-

ನಾಟಕದ ಟಿಕೆಟ್ ಗಳನ್ನು ಬುಕ್ ಮೈ ಶೋ ಲಿಂಕ್. ಕಾಂ ನಲ್ಲಿ ಬುಕ್ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+