ಸೋಮವಾರ ದೆಹಲಿಗೆ ಕುಮಾರಸ್ವಾಮಿ, ರಾಹುಲ್-ಸೋನಿಯಾ ಭೇಟಿ
ಬೆಂಗಳೂರು, ಮೇ 20: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನಾಳೆ (ಸೋಮವಾರ) ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ, ಅಲ್ಲಿ ಕಾಂಗ್ರೆಸ್ ಹಿರಿತಲೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅವರು ಭೇಟಿ ಆಗಲಿದ್ದಾರೆ.
ಈ ಸಂದರ್ಭದಲ್ಲಿ ಮಹತ್ವದ ವಿಷಯಗಳ ಚರ್ಚೆಯಾಗುವ ಸಂಭವ ಇದೆ. ಖಾತೆ ಹಂಚಿಕೆ, ಸರ್ಕಾರದ ನೀತಿಗಳು, ಶಿಸ್ತು ಸಮಿತಿ, ಪ್ರವರ್ತನೆಗಳು ಇನ್ನುಳಿದ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

ಸೋಮವಾರ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಇರುವ ಕಾರಣ ಸೋಮವಾರ ಮಾಡಬೇಕಿದ್ದ ಪ್ರಮಾಣವಚನ ಕಾರ್ಯಕ್ರಮವನ್ನು ಬುಧವಾರ (ಮೇ 20) ಕ್ಕೆ ಮುಂದೂಡಲಾಗಿದೆ. ಪ್ರಮಾಣ ವಚನ ಸ್ವೀಕರಿಸದ 24 ಗಂಟೆಗಳ ನಂತರ ಬಹುಮತ ಸಾಬೀತು ಮಾಡುತ್ತೇನೆಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications