ಸ್ವಂತ ಅಣ್ಣನನ್ನೇ ಬಿಡದ ಕುಮಾರಸ್ವಾಮಿ, ಇನ್ನು ನನ್ನನ್ನು ಬಿಡ್ತಾರಾ?

ಮೈಸೂರು, ಸೆ 22: ಜೆಡಿಎಸ್ ನಿಂದ ಬಹುತೇಕ ದೂರವಾಗಿ, ಬಿಜೆಪಿ ಹೊಸ್ತಿಲ ಬಳಿ ನಿಂತಿರುವ ಚಾಮುಂಡೇಶ್ವರಿ ಶಾಸಕ ಜಿ.ಟಿ,ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

" ತನ್ನ ಸ್ವಂತ ಅಣ್ಣ ಎಚ್.ಡಿ.ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಆಗಲು ಬಿಡದ ಕುಮಾರಸ್ವಾಮಿ, ಇನ್ನು ನನ್ನನ್ನು ಮುಖ್ಯಮಂತ್ರಿ ಮಾಡಲು ಬಿಡುತ್ತಿದ್ದರಾ" ಎಂದು ಜಿಟಿಡಿ ಪ್ರಶ್ನಿಸಿದ್ದಾರೆ.

" ವಿಶ್ರಾಂತಿಗಾಗಿ ಅಮೆರಿಕಾ ಸೇರಿದಂತೆ ವಿದೇಶ ಪ್ರವಾಸ ಮಾಡಿದ್ದ ಕುಮಾರಸ್ವಾಮಿ, ಪ್ರತೀ ಬಾರಿ ಸಾ.ರಾ.ಮಹೇಶ್ ಅವರನ್ನು ಕರೆದುಕೊಂಡು ಹೋದರು. ಆಗ ಅವರಿಗೆ ನನ್ನ ನೆನಪಾಗಲಿಲ್ಲವೇ" ಎಂದು ಜಿಟಿಡಿ ಬೇಸರ ವ್ಯಕ್ತ ಪಡಿಸಿದ್ದಾರೆ.

Kumaraswamy Not Allowed His Brother To Become DCM: JDS Leader GT Devegowda Statement

" ಸಿದ್ದರಾಮಯ್ಯ ಅಥವಾ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ರೇವಣ್ಣ ಅವರನ್ನು ಡಿಸಿಎಂ ಮಾಡುವ ಆಯ್ಕೆ ಕುಮಾರಸ್ವಾಮಿ ಅವರಿಗಿತ್ತು. ಅದಕ್ಕೆ ಕುಮಾರಸ್ವಾಮಿ ಒಪ್ಪಿರಲಿಲ್ಲ. ಒಪ್ಪಿದ್ದರೆ ಸಮ್ಮಿಶ್ರ ಸರಕಾರ ಉಳಿಯುತ್ತಿತ್ತು" ಎಂದು ಜಿ.ಟಿ.ದೇವೇಗೌಡ ಹೇಳಿದರು.

" ಮಹೇಶ್ ಗೆ ಇದ್ದಕ್ಕಿದ್ದಂತೇ ನನ್ನ ಮಗನ ಮೇಲೆ ಪ್ರೀತಿ ಬಂದಿದೆ. ನಾನು, ಕುಮಾರಸ್ವಾಮಿ ಅಥವಾ ಸಾ.ರಾ.ಮಹೇಶ್ ರಾಜಕೀಯ ಬೆಳವಣಿಗೆಗೆ ಅಡ್ಡಿ ಬರುವುದಿಲ್ಲ" ಎಂದು ಜಿಟಿಡಿ ಭರವಸೆ ನೀಡಿದ್ದಾರೆ.

"ನೀವು ಉಳಿದರೆ ಮಾತ್ರ ಪಕ್ಷ ಉಳಿಯುತ್ತೆ., ನನ್ನ ಹಾಗೇ, ನಿಮ್ಮಂತಹ ಲಕ್ಷಾಂತರ ಕಾರ್ಯಕರ್ತರು ಇದ್ದರೆ ಮಾತ್ರ ಪಕ್ಷ ಉಳಿದುಕೊಳ್ಳೋಕೆ ಸಾಧ್ಯ" ಎಂದು, ಮೈಸೂರಿನಲ್ಲಿ ನಡೆದ ಚಿಂತನ - ಮಂಥನ ಸಭೆಯಲ್ಲಿ, ಕುಮಾರಸ್ವಾಮಿ, ಪರೋಕ್ಷವಾಗಿ ಜಿಟಿಡಿಗೆ ಟಾಂಗ್ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+