ಕೆಎಸ್‌ಟಿಡಿಸಿಯಿಂದ ತಿರುಪತಿ ಪ್ಯಾಕೇಜ್ ಟೂರ್ ಘೋಷಣೆ
Recommended Video

ಬೆಂಗಳೂರು, ಜುಲೈ 16 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ತಿರುಪತಿ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ. ಬೆಂಗಳೂರಿನ ದಕ್ಷಿಣ ಭಾಗದ ಜಯನಗರ, ಜೆ.ಪಿ. ನಗರ, ಬನಶಂಕರಿ, ಬಿ.ಟಿ. ಎಂ.ಲೇಔಟ್ ಪ್ರದೇಶಗಳ ಜನರಿಗೆ ಅನುಕೂಲ ಮಾಡಿಕೊಡಲು ಈ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
ಕೆಎಸ್‌ಟಿಡಿಸಿ ರಾಜ್ಯ ಮತ್ತು ರಾಜ್ಯಕ್ಕೆ ಆಗಮಿಸುವ ಹೊರ ರಾಜ್ಯದ ಪ್ರವಾಸಿಗರಿಗಾಗಿ ಹಲವು ಪ್ಯಾಕೇಜ್ ಟೂರ್‌ಗಳನ್ನು ಆಯೋಜಿಸುತ್ತದೆ. ಸಂಸ್ಥೆ ಆಯೋಜಿಸುವ ತಿರುಪತಿ ಪ್ಯಾಕೇಜ್ ಟೂರ್‌ಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಆಗಸ್ಟ್ 1ರಿಂದ ಬೆಂಗಳೂರು ನಗರದ ದಕ್ಷಿಣ ಭಾಗದ ಜಯನಗರ, ಜೆ.ಪಿ.ನಗರ, ಬನಶಂಕರಿ, ಬಿ.ಟಿ.ಎಂ,ಲೇಔಟ್ ಮುಂತಾದ ಬಡಾವಣೆಗಳ ಜನರಿಗೆ ಅನುಕೂಲ ಮಾಡಿಕೊಡಲು ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿದೆ. ಜಯನಗರದ 5ನೇ ಬಡಾವಣೆಯ ಜಯನಗರ ದೂರವಾಣಿ ಕೇಂದ್ರದಿಂದ ಈ ಪ್ರವಾಸ ಆರಂಭವಾಗಲಿದೆ.

ಪ್ರವಾಸದ ದರ : ಈ ಪ್ಯಾಕೇಜ್ ಅಡಿ ಸಂಚರಿಸುವವರು ಮಲ್ಟಿ ಆಕ್ಸೆಲ್ ಐಷಾರಾಮಿ ಬಸ್ಸಿನ ಮೂಲಕ ತಿರುಪತಿಗೆ ಪ್ರಯಾಣ ಬೆಳೆಸಬಹುದಾಗಿದೆ. ವಾರದ ದಿನಗಳಲ್ಲಿ (ಭಾನುವಾರ-ಗುರುವಾರ) ಒಬ್ಬರಿಗೆ 1,900 ರಿಂದ 2 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ವಾರಂತ್ಯದಲ್ಲಿ (ಶುಕ್ರವಾರ-ಶನಿವಾರ) ಒಬ್ಬರಿಗೆ 2 ದಿಂದ 2,100 ರೂ. ದರವಿರಲಿದೆ. ಹಿರಿಯ ನಾಗರಿಕರಿಗೆ ಸದರಿ ಪ್ರವಾಸದ ಸಾರಿಗೆ ವೆಚ್ಚದಲ್ಲಿ ಶೇಕಡಾ 20 ರಷ್ಟು ವಿಶೇಷ ರಿಯಾಯಿತಿ ಇರತ್ತದೆ.
ಮಾರ್ಗದ ವಿವರ : ಈ ಪ್ರವಾಸದ ವಾಹನ ಯಶವಂತಪುರ ಬಸ್ ನಿಲ್ದಾಣದಿಂದ ಸಂಜೆ 7.30ಕ್ಕೆ ಹೊರಟು, ಜಯನಗರ 5ನೇ ಹಂತದಿಂದ ರಾತ್ರಿ 8.30ಕ್ಕೆ ಪ್ರವಾಸವನ್ನು ಆರಂಭಿಸುತ್ತದೆ. ನಂತರ ಕಾರ್ಪೋರೇಷನ್ ವೃತ್ತ, ಗುರುದ್ವಾರ, ಕೆ.ಆರ್. ಪುರಂ ಹಾಗೂ ಹೊಸಕೋಟೆ ಪಿಕ್‍ಅಪ್ ಪಾಯಿಂಟ್‍ಗಳಲ್ಲಿ ಪ್ರವಾಸಿಗರನ್ನು ಕರೆದುಕೊಂಡು, ಮರುದಿನ ಬೆಳಗ್ಗೆ 3.00 ಗಂಟೆಗೆ ತಿರುಪತಿ ತಲುಪಲಿದೆ.
ಈ ಪ್ಯಾಕೇಜ್‌ನಲ್ಲಿ ಪ್ರಯಾಣಿಸಲು ಬಯಸುವವರು ಮುಂಗಡ ಬುಕ್ಕಿಂಗ್ ಹಾಗೂ ಆನ್‍ಲೈನ್ ಬುಕ್ಕಿಂಗ್‍ಗಾಗಿ ಯಶವಂತಪುರದಲ್ಲಿರುವ ನಿಗಮದ ಪ್ರಧಾನ ಬುಕ್ಕಿಂಗ್ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಎಸ್‌ಟಿಡಿಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications