ಬಸವೇಶ್ವರ ಬಸ್ ನಿಲ್ದಾಣಕ್ಕೆ 60 ಬಸ್ ವರ್ಗಾಯಿಸಿದ ಕೆಎಸ್ಆರ್‌ಟಿಸಿ
ಬೆಂಗಳೂರು, ಮೇ 29 : ಕೆಎಸ್ಆರ್‌ಟಿಸಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ 60 ಬಸ್ಸುಗಳನ್ನು ವರ್ಗಾಯಿಸಿದೆ. ನಗರದಲ್ಲಿ ವಾಹನ ದಟ್ಟಣೆಯನನ್ನು ಕಡಿಮೆ ಮಾಡಲು ಸಂಸ್ಥೆಯು ಮೊದಲ ಹೆಜ್ಜೆ ಇಟ್ಟಿದೆ.
60 ಬಸ್ಸುಗಳನ್ನು ಸ್ಥಳಾಂತರ ಮಾಡಿರುವುದರಿಂದ ಪ್ರತಿದಿನ ಸುಮಾರು 250ಲೀಟರ್ ಡೀಸೆಲ್ ಮತ್ತು 1 ರಿಂದ 1.30 ಗಂಟೆಯ ಪ್ರಯಾಣದ ಅವಧಿ ಉಳಿತಾಯವಾಗಲಿದೆ. ಮೆಜೆಸ್ಟಿಕ್ ಸುತ್ತಮತ್ತಲಿನ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ.
'ಕರ್ನಾಟಕ ಸಾರಿಗೆ' ಬಸ್ಸುಗಳು ಮಾತ್ರ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ಸಂಚಾರ ನಡೆಸಲಿವೆ. 2014ರಲ್ಲಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಕಾರ್ಯಾರಂಭ ಮಾಡಿತ್ತು. 2015ರಲ್ಲಿ ನಷ್ಟದ ನೆಪದಿಂದಾಗಿ ಬಸ್ ನಿಲ್ದಾಣವನ್ನು ಪುನಃ ಆರಂಭಿಸಲಾಗಿದೆ.

ಮೆಜೆಸ್ಟಿಕ್‌ನಿಂದ ಇನ್ನೂ ಹಲವು ಬಸ್ಸುಗಳನ್ನು ವರ್ಗಾವಣೆ ಮಾಡಲು ಹೊಸ ಸರ್ಕಾರ ಒಪ್ಪಿಗೆ ನೀಡಿದರೆ ಸಂಚಾರ ದಟ್ಟಣೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಷ್ಟದ ನೆಪ ಹೇಳಿ ಬಂದ್ ಮಾಡಲಾಗಿದ್ದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಏ.14ರಂದು ಪುನಃ ಆರಂಭಿಸಲಾಗಿದೆ. ಬಸ್ ನಿಲ್ದಾಣಕ್ಕೆ ತೆರಳುವ ಜನರಿಗೆ ಅನುಕೂಲವಾಗಲಿ ಎಂದು ಬಿಎಂಟಿಸಿ ಸಂಪರ್ಕ ಬಸ್ಸುಗಳನ್ನು ಆರಂಭಿಸಿದೆ.












Click it and Unblock the Notifications