ಜ.23ರಿಂದ ಸಾಲು ರಜೆ, ಕೆಎಸ್‌ಆರ್‌ಟಿಸಿಯಿಂದ ಹೆಚ್ಚು ಬಸ್
ಬೆಂಗಳೂರು, ಜ. 17 : ಶನಿವಾರ, ಭಾನುವಾರ ಮತ್ತು ಗಣರಾಜ್ಯೋತ್ಸವದ ಸಾಲು-ಸಾಲು ರಜೆ ಇರುವುದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ಜ.23ರಿಂದ 25ರ ವರೆಗೆ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ.
ಮೆಜೆಸ್ಟಿಕ್‌ನಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾರಣ ನಗರದ ವಿವಿಧ ಟಿಟಿಎಂಸಿಗಳಿಂದ ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ಗಂಗಾನಗರ, ಮಲ್ಲೇಶ್ವರ 18ನೇ ಕ್ರಾಸ್, ಜಯನಗರ 4ನೇ ಬ್ಲಾಕ್ ಮತ್ತಿತರ ಮುಂತಾದ ಸ್ಥಳಗಳಿಂದ ಹೆಚ್ಚುವರಿ ಬಸ್ ಸಂಚರಿಸಲಿವೆ. [ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ]

ಹೆಚ್ಚುವರಿ ಬಸ್ಸುಗಳಿಗೆ ಮುಂಗಡ ಟಿಕೆಟ್ ಪಡೆಯುವ ಪ್ರಯಾಣಿಕರು ಈ ಸ್ಥಳಗಳಿಂದ ಪ್ರಯಾಣಿಸಬೇಕು. ಮುಂಗಡಟಿಕೆಟ್ ರಹಿತ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದಲೇ ಸಂಚರಿಸಲಿವೆ ಎಂದು ಕೆಎಸ್ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. [2015ರ ಸರ್ಕಾರಿ ರಜೆ ಪಟ್ಟಿ]
ಎಲ್ಲಿಗೆ ಬಸ್ : ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದಿಂದ ಗಂಗಾವತಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಚಳ್ಳಕೆರೆ, ಬಳ್ಳಾರಿ, ಸಿರಗುಪ್ಪ, ಸಿಂಧನೂರು, ಮಾನ್ವಿ, ರಾಯಚೂರು, ಬೀದರ್, ಕಲಬುರ್ಗಿ ಮುಂತಾದ ಸ್ಥಳಗಳಿಗೆ ಹೆಚ್ಚುವರಿ ಬಸ್ ತೆರಳಲಿವೆ. [ಬಳ್ಳಾರಿ, ಹೊಸಪೇಟೆ ಬಸ್ ಹತ್ತಲು ಪೀಣ್ಯಕ್ಕೆ ಹೋಗಿ]
ಶಿವಮೊಗ್ಗ ಮಾರ್ಗದ ಮುಂಗಡರಹಿತ ಹಾಗೂ ಹೆಚ್ಚುವರಿ ಬಸ್ಸುಗಳು ಮೆಜೆಸ್ಟಿಕ್ ಮುಂಭಾಗದ ಬಿಎಂಟಿಸಿ ಸರ್ವಿಸ್ ರಸ್ತೆಯ ಮೂಲಕ ಹೊರಡಲಿವೆ. ಜ.24 ಶನಿವಾರ, ಜ.25 ಭಾನುವಾರ, ಜ.26 ಸೋಮವಾರವಾಗಿದ್ದು ಸಾಲು-ಸಾಲು ರಜೆಗಳಿವೆ. ಗುರುವಾರ ಮತ್ತು ಶುಕ್ರವಾರದಿಂದಲೇ ಜನರು ಹೊರ ಉರುಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.












Click it and Unblock the Notifications