ಗಣೇಶೋತ್ಸವ: 1,200 ಹೆಚ್ಚುವರಿ ಬಸ್ ಓಡಿಸಲು ಮುಂದಾದ ಕೆಎಸ್ಆರ್ ಟಿಸಿ

ಬೆಂಗಳೂರು, ಸೆಪ್ಟೆಂಬರ್ 8: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಗೌರಿ-ಗಣೇಶ ಹಬ್ಬದ ಅಂಗವಾಗಿ ಸೆಪ್ಟೆಂಬರ್ 11 ಹಾಗೂ 12ರಂದು ಬೆಂಗಳೂರಿನಿಂದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಪ್ರದೇಶಗಳಿಗೆ ಹೆಚ್ಚುವರಿಯಾಗಿ 1200 ಕ್ಕೂ ಅಧಿಕ ಬಸ್‌ಗಳನ್ನು ವ್ಯವಸ್ಥೆ ಮಡಲಾಗಿದೆ.

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹೊರನಾಡು, ದಾವಂಗೆರೆ, ಹುಬ್ಬಳ್ಳಿ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಕೊಪ್ಪಳ, ಬಳ್ಳಾರಿ, ಬೀದರ್, ಯಾದಗಿರಿ, ಬೀದರ್, ತಿರುಪತಿ ಕಡೆಗೆ ಸಂಚರಿಸಲಿದೆ. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಮಡಿಕೇರಿ ಕಡೆಗೆ ಹಾಗೂ ಶಾಂತಿನಗರದ ಟಿಟಿಎಂಸಿ ಯಿಂದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಕಡೆಗೆ ಬಸ್‌ಗಳು ಹೊರಡಲಿವೆ. ಹೆಚ್ಚಿನ ವಿವರಕ್ಕಾಗಿ www.ksrtc.in ಸಂಪರ್ಕಿಸಬಹುದಾಗಿದೆ.

KSRTC to run 1,200 additional buses during Ganesha festival

ಬಸವೇಶ್ವರ ನಿಲ್ದಾಣ, ವಿಜಯನಗರ, ಜಯನಗರ ನಾಲ್ಕನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್, ಮಲ್ಲೇಶ್ವರ 18ನೇ ಅಡ್ಡರಸ್ತೆ, ಬನಶಂಕರಿ, ಜೀವನ್ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರದಿಂದ ಪ್ರಯಾಣಿಕರ ಬೇಡಿಕೆ ಅನುಗುಣವಾಗಿ, ಶಿವಮೊಗ್ಗ, ದಾವಣಗೆರೆ ಇನ್ನಿತರೆ ಸ್ಥಳಗಳಿಗೆ ಬಿಡಲು ನಿಗಮ ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+