KSRTC ಸಾರಿಗೆ ನೌಕರರ ಮುಷ್ಕರ, ನಮ್ಮ ಮೆಟ್ರೋಗೆ ವರದಾನ...Namma Metro
ಬೆಂಗಳೂರು, ಆಗಸ್ಟ್ 05: ಹೈಕೋರ್ಟ್ ಕ್ರಮದ ಎಚ್ಚರಿಕೆ ಮೇಲೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಸೇರಿದಂತೆ ಸಾರಿಗೆ ನಿಗಮದ ನೌಕರರ ಸಂಘಟನೆಗಳ ಒಕ್ಕೂಟವು ಮುಷ್ಕರ (KSRTC Strike) ನಡೆಸಿವೆ. ಹೀಗಾಗಿ ಮಂಗಳವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಸ್ ಸಂಚಾರದಲ್ಲಿ ವ್ಯತ್ಯಯವಾಯಿತು. ಇತ್ತ ಬೆಂಗಳೂರಿನಲ್ಲಿ ಬಸ್ ಮುಷ್ಕರವು ನಮ್ಮ ಮೆಟ್ರೋಗೆ ವರದಾನದಂತೆ ಪರಿಣಮಿಸಿತು.
ಸಾರಿಗೆ ನೌಕರರ ವೇತನ ಹೆಚ್ಚಳ, ಸಾರಿಗೆ ನೌಕರರ ಹಿಂಬಾಕಿ ಸೇರಿ ಕೆಲವು ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸಲು ಮುಂದಾದ ನೌಕರರ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗಿನ ಮಾತುಕತೆ ವಿಫಲವಾಯಿತು. ಸಾರಿಗೆ ನೌಕರರು ಸಂಧಾನ ವಿಫಲಗೊಳಿಸಿದರು. ಮುಷ್ಕರ ನಡೆಸಲು ನಿರ್ಧರಿಸಿದರು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲುಕೆಎಸ್‌ಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರಕ್ಕೆ ಮುಂದಾಗಿದ್ದರು. ಆದೇಶ ಮೀರಿದರೆ ಎಸ್ಮಾ ಮೂಲಕ ಕ್ರಮ ಜರುಗಿಸುವ ಬಗ್ಗೆ ಒಂದು ದಿನ ಮುಷ್ಕ ತಡೆ ಹಿಡಿಯುವ ಬಗ್ಗೆ ಹೈಕೊರ್ಟ್ ಸೂಚಿಸಿತ್ತು.ಇಷ್ಟಾದರೂ ಆರಂಭವಾದ ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರದಿಂದ ನಮ್ಮ ಮೆಟ್ರೋ ರೈಲಿನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಹೌದು, ಅನಿರ್ದಿಷ್ಟಾವಧಿ ಮುಷ್ಕರವು ರಾಜ್ಯಾದ್ಯಂತ ಬಸ್ ಸೇವೆಗಳ ವ್ಯತ್ಯಯಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಡೆಗೆ ತಿರುಗುವ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) ಸೀಮಿತ ಸೇವೆಗಳಿಂದಾಗಿ ನಮ್ಮ ಮೆಟ್ರೋ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಜನಸಂಖ್ಯೆ ಕಂಡು ಬಂತು. ಪ್ರಯಾಣಿಕರ ಹರಿವು ಮೆಟ್ರೋ ಕಡೆಗೆ ಇದ್ದಿದ್ದರಿಂದ ರೈಲುಗಳು ತುಂಬಿ ತುಳುಕಿದ್ದು ಕಂಡು ಬಂತು. ಒಂದೇ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.
ನಮ್ಮ ಮೆಟ್ರೋ ದರ ಏರಿಕೆ ಬಳಿಕ ಲಕ್ಷಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಂತಹ ಕಾರಣಗಳಿಂದ ಆಗಾಗ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಒಟ್ಟು 76 ಕಿಲೋ ಮೀಟರ್ ಜಾಲ ಹೊಂದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವ್ಯಾಪ್ತಿಯಲ್ಲಿ ಒಟ್ಟು 55ಕ್ಕೂ ಹೆಚ್ಚು ರೈಲುಗಳು ಕಾರ್ಯಾಚರಣೆ ಮಾಡುತ್ತವೆ. ಒಟ್ಟು 66 ನಿಲ್ದಾಣಗಳ ವ್ಯಾಪ್ತಿಯಲ್ಲಿ ಜನರಿಗೆ ಮೆಟ್ರೋ ಅನುಕೂಲ ಒದಗಿಸಿದೆ. ಈ ಮುಷ್ಕರ ವೇಳೆಯಲ್ಲೂ ಮೆಟ್ರೋ ಸಂಚಾರಕ್ಕೆ ಜನರಿಗೆ ವರದಾನವಾಗಿದೆ. ಇದರಿಂದ ಮೆಟ್ರೋಗೂ ಆದಾಯ ಹೆಚ್ಚಾಗುತ್ತದೆ.
ಬೆಂಗಳೂರಿನಲ್ಲಿ ಶಿವಾಜಿನಗರದಿಂದ ಬಸ್‌ಗಳು ಎಂದಿನಂತೆ ಸಂಚರಿಸಿದವು. ಸಾರಿಗೆ ಮುಷ್ಕರವು ಅಂತಾರಾಜ್ಯ ಮತ್ತು ಅಂತಾರಾಜ್ಯ ಬಸ್ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹುಬ್ಬಳ್ಳಿ, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ, ಹೊಸಕೋಟೆ, ಬಾಗಲಕೋಟೆ, ಬೆಳಗಾವಿ ಹಾಗೂ ರಾಮನಗರ ಸೇರಿದಂತೆ ಕರ್ನಾಟಕದ ಅನೇಕ ಭಾಗಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಇಂದಿನಿಂದ ಬೇರೆ ಬೇರೆ ಕಡೆಗಳಲ್ಲಿ ತೆರಳಲು ಪ್ಲಾನ್ ಹಾಕಿಕೊಂಡವರಿಗೆ ಸಾರಿಗೆ ಅಡಚಣೆ ಉಂಟಾಗಿದೆ.












Click it and Unblock the Notifications