ರಾಮನಗರದಲ್ಲಿ ಗುರುವಾರದಿಂದ ನಗರಸಾರಿಗೆ ಬಸ್ಸಿಗೆ ಚಾಲನೆ
ಬೆಂಗಳೂರು, ಆಗಸ್ಟ್ 31: ರೇಷ್ಮೆನಾಡು ರಾಮನಗರದಲ್ಲಿ ಗುರುವಾರ ಕೆಎಸ್ಆರ್ ಟಿಸಿಯ ಹೊಸ ಬಸ್ ಘಟಕ ಹಾಗೂ ನಗರ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಚಾಲನೆ ದೊರೆಯುತ್ತದೆ. ಜೆಎನ್ ನರ್ಮ್ ಯೋಜನೆ ಅಡಿಯಲ್ಲಿ ಎರಡು ಎಕರೆ ಹತ್ತು ಗುಂಟೆ ವಿಸ್ತೀರ್ಣದಲ್ಲಿ 5.75 ಕೋಟಿ ವೆಚ್ಚದಲ್ಲಿ ಬಸ್ ಘಟಕ ನಿರ್ಮಾಣವಾಗಿದೆ.
ಗುರುವಾರ ಬೆಳಗ್ಗೆ 11ಕ್ಕೆ ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸ್ತಾರೆ. ಡಿ.ಕೆ.ಶಿವಕುಮಾರ್ ದೀಪ ಬೆಳಗುತ್ತಾರೆ. ವಿವಿಧ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.[ಹಬ್ಬಕ್ಕೆ ಹೆಚ್ಚುವರಿ ಬಸ್, ಪಿಕಪ್ ಪಾಯಿಂಟ್ ನೋಡಿಕೊಳ್ಳಿ]

ಬಸ್ ಘಟಕದಲ್ಲಿ ಮೂರು ರಿಪೇರಿ ಯೂನಿಟ್, ಘಟಕ ವ್ಯವಸ್ಥಾಪಕರ ಕೊಠಡಿ, ಆಡಳಿತ-ಉಗ್ರಾಣ-ತಾಂತ್ರಿಕ-ನಗದು ಶಾಖೆ ಕೊಠಡಿ, ಕ್ಯಾಂಟೀನ್, ಸಿಬ್ಬಂದಿ ವಿಶ್ರಾಂತಿಗೃಹ, ಶೌಚಾಲಯ ಮತ್ತಿತರೆ ಸೌಲಭ್ಯ ಇರಲಿವೆ. ನಗರ ಸಾರಿಗೆಗಾಗಿ 20 ನೂತನ ಬಸ್ಸುಗಳನ್ನು ಇದೇ ಸಂದರ್ಭದಲ್ಲಿ ಬಿಡಲಾಗುವುದು.












Click it and Unblock the Notifications