KSRTC Tour Package: ಪ್ರವಾಸಿಗರಿಗೆ ಗುಡ್‌ನ್ಯೂಸ್! ಬೆಂಗಳೂರಿನಿಂದ ಇಲ್ಲಿಗೆ ವಾರಾಂತ್ಯದ ಟೂರ್ ಪ್ಯಾಕೇಜ್ ಘೋಷಣೆ
ಬೆಂಗಳೂರು, ಜೂನ್ 26: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬೆನ್ನಲ್ಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಸಹ ಪ್ರಯಾಣಿಕರಿಗೆ ವಿವಿಧ ಸ್ಥಳಗಳನ್ನು ಅಲ್ಪ ಸಮಯದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಧಾರ್ಮಿಕ ಮತ್ತು ಪ್ರವಾಸಿ ಸ್ಥಳ ತೋರಿಸುವ ಉದ್ದೇಶದಿಂದ ವಿಶೇಷ ಟೂರ್ ಪ್ಯಾಕೇಜ್ (KSRTC Tour Package) ಘೋಷಿಸಿದೆ. ಬೆಂಗಳೂರಿನಿಂದ ಹೊರಡುವ ಅಶ್ವಮೇಧ ಬಸ್ (KSRTC Ashwamedha Bus) ಕೋಲಾರ ಜಿಲ್ಲೆ ವ್ಯಾಪ್ತಿಯ ಬಹುತೇಕ ಎಲ್ಲ ಧಾರ್ಮಿಕ ಸ್ಥಳಗಳನ್ನು ಕವರ್ ಮಾಡಲಿದೆ. ಈ ಪ್ಯಾಕೇಜ್ ದರ, ಸಮಯ, ಬಸ್ ನಿಲ್ದಾಣ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
KSRTC ಟೂರ್ ಪ್ಯಾಕೇಜ್ ವಿಶೇಷ್ ಬಸ್ ಪ್ರಯಾಣಿಕರ ಅನುಕೂಲ ದೃಷ್ಟಿಯಲ್ಲಿಟ್ಟುಕೊಂಡು 'ಬೆಂಗಳೂರು-ಚಿಕ್ಕತಿರುಪತಿ-ಕೋಟಿಲಿಂಗೇಶ್ವರ- ಬಂಗಾರು ತಿರುಪತಿ-ಆವಣಿ-ಮುಳಬಾಗಿಲು-ಕುರುಡುಮಲೆ-ಕೋಲಾರ' ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿದೆ. ಅಶ್ವಮೇಧ ಕ್ಲಾಸಿಕ್ ಸಾರಿಗೆ ಬಸ್ ಇದಾಗಿದ್ದು, ವಾರಾಂತ್ಯದಲ್ಲಿ ಅಂದರೆ (ಜೂನ್ 28ರಿಂದ) ಭಾನುವಾರ ಮತ್ತು ಶನಿವಾರ ಸೇವೆ ನೀಡಲಿದೆ.

ಊಟ, ತಿಂಡಿ ಇರುತ್ತಾ?
KSRTC ಈ ಟೂರ್ ಪ್ಯಾಕೇಜ್‌ನಲ್ಲಿ ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ ಪ್ರವಾಸ ಟಿಕೆಟ್ ಶುಲ್ಕ ನಿಗದಿ ಮಾಡಲಾಗಿದೆ. ಇದೇ ಶನಿವಾರ ಜೂನ್ 28ರಿಂದ ಈ ಟೂರ್ ಪ್ರಯಾಣ ಆರಂಭವಾಗಲಿದ್ದು, ಈ ಕೆಳಗಿನ ವೇಳಾಪಟ್ಟಿಯಡಿ ಒಟ್ಟು 270 ಕಿಲೋ ಮೀಟರ್ ಅಶ್ವಮೇಧ ಬಸ್ ಸಂಚರಿಸಲಿದೆ ಎಂದು ನಿಗಮದ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.
ಪ್ರಯಾಣದ ಸಮಯ, ಸ್ಥಳ, ವೀಕ್ಷಣೆ ಅವಧಿ ವಿವರ ಹೀಗಿದೆ
ಒಟ್ಟು ಏಳು ಸ್ಥಳಗಳಿಗೆ ಬೆಂಗಳೂರಿನಿಂದ KSRTC ಬಸ್ ಹೊರಡಲಿದೆ. ಒಂದು ದಿನದ ಪ್ರವಾಸ ಇದಾಗಿದ್ದು, ನೀವು ಎಂದಿನಂತೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು. ವಾರಪೂರ್ತಿ ಕೆಲಸ, ಇತರ ಕಾರ್ಯಗಳಲ್ಲಿ ತೊಡಗಿ ಹೈರಾಣದಾಗಿದ್ದರೆ ಅಂತವರಿಗೆ ಮತ್ತು ಧಾರ್ಮಿಕ ಸ್ಥಳ ಭೇಟಿ ಮಾಡಲು ಇಚ್ಛಿಸುವವರಿಗೆ ಈ ಟೂರ್ ಪ್ಯಾಕೇಜ್ ಅವಕಾಶ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
* ಬೆಂಗಳೂರಿನಿಂದ ಚಿಕ್ಕತಿರುಪತಿ ಶ್ರೀ.ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ವೀಕ್ಷಣೆ/ ಉಪಾಹಾರದ ಸಮಯ: 06:30 ಗಂಟೆಯಿಂದ 08.00 (08.00-09.30) ಗಂಟೆವರೆಗೆ
* ಚಿಕ್ಕತಿರುಪತಿಯಿಂದ ಬಂಗಾರುಪೇಟೆ ಕೋಟಿಲಿಂಗೇಶ್ವರ ದೇವಸ್ಥಾನ ವೀಕ್ಷಣೆ ಸಮಯ: 09.30-10.30 (10.30-12.30) ಗಂಟೆವರೆಗೆ
* ಬಂಗಾರುಪೇಟೆ ಬಂಗಾರು ತಿರುಪತಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ವೀಕ್ಷಣೆ/ಮಧ್ಯಾಹ್ನದ ಊಟದ ಸಮಯ: 12.30-01.00 (01.00-14.30) ಗಂಟೆ.
* ಬಂಗಾರು ತಿರುಪತಿ-ಆವಣಿ ರಾಮಲಿಂಗೇಶ್ವರ ದೇವಸ್ಥಾನ ವೀಕ್ಷಣೆ ಸಮಯ: 14.30-15.00 (15.00-15.30) ಗಂಟೆ
* ಆವಣಿ - ಮುಳಬಾಗಿಲು ಶ್ರೀ.ವೀರಾಂಜನೇಯ ಸ್ವಾಮಿ ದೇವಸ್ಥಾನ ವೀಕ್ಷಣೆ ಸಮಯ: 15.30-16.05 (16.05-16.30) ಗಂಟೆ.
* ಮುಳಬಾಗಿಲು- ಕುರುಡುಮಲೆ ಶ್ರೀ.ಗಣೇಶ ದೇವಸ್ಥಾನ ವೀಕ್ಷಣೆ ಸಮಯ: 16.30-16.55 (16.55-17.30) ಗಂಟೆ.
* ಕುರುಡುಮಲೆಯಿಂದ ಕೋಲಾರ ತೆರಳಿ ಕೋಲಾರಮ್ಮ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ವೀಕ್ಷಣೆ ಸಮಯ: 17.30-18.15 (18.15-19.00) ಗಂಟೆವರೆಗೆ
* ಕೋಲಾರದಿಂದ - ಬೆಂಗಳೂರು ಮರಳಿ ಬರುವ ಸಮಯ: 19.00 ಗಂಟೆಯಿಂದ 20.30 ಗಂಟೆಗೆ ಬೆಂಗಳೂರಿಗೆ ಬರಲಿದೆ.
ಪ್ರಯಾಣ ಶುಲ್ಕ ಮಾಹಿತಿ
ಈ ಕೆಎಸ್‌ಆರ್‌ಟಿಸಿ ಟೂರ್ ಪ್ಯಾಕೇಜ್ ನಡಿ ಪ್ರಯಾಣ ಮಾಡುವ ವಯಸ್ಕರಿಗೆ ಮುಂಗಡ ಬುಕ್ಕಿಂಗ್ ಸೇರಿ 600 ರೂಪಾಯಿ, ಇನ್ನು 06ರಿಂದ 12ವರ್ಷದ ಮಕ್ಕಳು ಜತೆ ಕರೆತರುವುದಾದರೆ ಅವರಿಗೆ 450 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ.
ಟಿಕೆಟ್ ಬುಕ್ಕಿಂಗ್, ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಆಸಕ್ತರಿಗೆ ಟೂರ್ ಪ್ಯಾಕೇಜ್ ಸೌಲಭ್ಯ ಪಡೆಯಲು ಟಿಕೆಟ್ ಅನ್ನು ಅಧಿಕೃತ ವೆಬ್‌ಸೈಟ್ www.ksrtc.in ಮತ್ತು www.ksrtc.karnataka.gov.in ನಲ್ಲಿ ಆನ್‌ಲೈನ್ ಬುಕ್ಕಿಂಗ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 080 26252625/ 7760990100/ 77609905060 ಅಥವಾ 7760990287 ಗೆ ಕರೆ ಮಾಡಿಯು ನೀವು ಮಾಹಿತಿ ಪಡೆಯುಬಹುದು ಎಂದು KSRTC ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications