ಬಸ್ ನಿಲ್ದಾಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಚಾಲಕ

ಬೆಂಗಳೂರು, ನ. 23 : ವರ್ಗಾವಣೆಯಿಂದ ಬೇಸರಗೊಂಡ ಕೆಎಸ್ ಆರ್ ಟಿಸಿ ಚಾಲಕ ಮೈಸೂರು ರಸ್ತೆಯ ಸಾಟ್ ಲೈಟ್ ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಅಸ್ವಸ್ಥ ಚಾಲಕ ಮೋಹನ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಎಸ್ ಆರ್ ಟಿಸಿ 6 ನೇ ಘಟಕದ ಚಾಲಕರಾಗಿರುವ ಮೋಹನ್ ಅವರನ್ನು ನೆಲಮಂಗಲ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ಮೋಹನ್ ಬೆಂಗಳೂರು ವಿರಾಜಪೇಟೆ ಮಾರ್ಗದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.[ಸುನಂದಾ ಸಾವಿನ ಹಿಂದೆ ವಿದೇಶಿಗನ ಕೈವಾಡ?]

sucide

ಬೆಂಗಳೂರು ಘಟಕದಿಂದ ವರ್ಗಾವಣೆ ಮಾಡಿದಕ್ಕೆ ಬೇಸರಗೊಂಡ ಮೋಹನ್ ಭಾನುವಾರ ಬೆಳಗ್ಗೆ 10.45 ರ ಸುಮಾರಿಗೆ ಸಾಟ್ ಲೈಟ್ ನಿಲ್ದಾಣದಲ್ಲಿಯೇ ವಿಷ ತೆಗೆದುಕೊಂಡಿದ್ದಾರೆ.

ಅಸ್ವಸ್ಥ ಮೋಹನ್ ಅವರನ್ನು ಗಮನಿಸಿದ ರಘುಕುಮಾರ್ ಎಂಬುವರು ಬಸ್ ನಲ್ಲಿಯೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ದಾರೆ. ಇಲಾಖೆಯಲ್ಲಿ ವರ್ಗಾವಣೆ ಸಾಮಾನ್ಯ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ತರವಲ್ಲ. ಹಾಗಾಗಿ ವರ್ಗಾವಣೆಯೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೆ ಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+