KSRTC Ashwamedha: ಸಾಮಾನ್ಯ ಬಸ್‌ಗಳಿಗಿಂತ ಅಧಿಕ ಆದಾಯ ತರುತ್ತಿರುವ 'ಅಶ್ವಮೇಧ' ಬಸ್
ಬೆಂಗಳೂರು, ಜೂನ್ 17: ರಾಜ್ಯ ಸರ್ಕಾರ ಕೆಲವೇ ತಿಂಗಳ ಹಿಂದೆ ಲೋಕಾರ್ಪಣೆಗೊಳಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಶ್ವಮೇಧ ಬಸ್‌ಗಳಿಂದ (Ashwamedha Bus) ನಿಗಮಕ್ಕೆ ಹೆಚ್ಚಿನ ಆದಾಯ ಸಂದಾಯವಾಗುತ್ತಿದೆ.
ಹೌದು, ಈ ಬಸ್‌ಗಳು ರಸ್ತೆಗೆ ಇಳಿದ ಬೆನ್ನಲ್ಲೆ ಸಾಮಾನ್ಯ ಸಾರಿಗೆ ಬಸ್‌ಗಿಂತಲೂ ಹೆಚ್ಚಾಗಿ ಈ ಕೆಂಪು ಬಣ್ಣದ 'ಅಶ್ವಮೇಧ' ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಓಡಾಡುತ್ತದ್ದಾರೆ. ಹೀಗಾಗಿ ಸಾರಿಗೆ ಬಸ್‌ಗಳಿಗಿಂತಲೂ ಪ್ರತಿ ಕಿಲೋ ಮಿಟರ್‌ಗೆ 10 ರೂಪಾಯಿ ಹೆಚ್ಚಿನ ಹಣ ಸಂಪಾದನೆ ಆಗುತ್ತಿದೆ ಎಂದು 'ಪ್ರಜಾವಾಣಿ' ವರದಿ ಮಾಡಿದೆ.

ಆರಂಭದಲ್ಲಿ ಮೈಸೂರು, ಹಾಸನ ಜಿಲ್ಲೆಗಳಿಗೆ ಬೆಂಗಳೂರಿನಿಂದ ನೇರ ಸಂಪರ್ಕಕ್ಕಾಗಿ ಈ ಬಸ್‌ಗಳನ್ನು ಬಿಡಲಾಯಿತು. ನಂತರ ತುಮಕೂರು KSRTC ಘಟಕಕ್ಕೂ ಈ ಅಶ್ವಮೇಧ ಬಸ್ ಬಿಡಲಾಯಿತು. ಅದಾದ ಬಳಿಕ ಪ್ರಯಾಣಿಕರು ಸಂಚಾರಕ್ಕೆ ಈ ಬಸ್‌ಗಳನ್ನು ಹೆಚ್ಚು ಬಳಸುತ್ತಿರುವುದರಿಂದ ಆದಾಯ ಹೆಚ್ಚಾಗಿದೆ.
1ಕಿ.ಮೀ.ಗೆ ಸಾಮಾನ್ಯ ಬಸ್‌ಗಳಿಗಿಂತ ಅಧಿಕ ಆದಾಯ
KSRTC ಸಾಮಾನ್ಯ ಬಸ್‌ಗಳು ಪ್ರತಿ ಕಿಲೋ ಮೀಟರ್ 44 ರೂ.ನಿಂದ 50 ರೂ.ವರೆಗೆ ಆದಾಯ ಬರುತ್ತದೆ. ಈ ಅಶ್ವಮೇಧ ಬಸ್‌ಗಳು ಇದೇ ಪ್ರತಿ ಒಂದು ಕಿಲೋ ಮೀಟರ್‌ಗೆ 52 ರಿಂದ 62 ರೂಪಾಯಿ ಗಳಿಕೆ ಮಾಡುತ್ತಿವೆ.
ಈ ಬಸ್‌ಗಳನ್ನು ಪಾಯಿಂಟ್ ಟು ಪಾಯಿಂಟ್ ಬಸ್‌ಗಳಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಅಲ್ಲದೇ ತಡೆ ರಹಿತ ಸೇವೆ ನೀಡುತ್ತಿರುವುದರಿಂದ ನಿರ್ವಾಹಣಕರು ಇದಕ್ಕೆ ಬೇಕಾಗಿಲ್ಲ. ಉದಾಹರಣೆಗೆ ಬೆಂಗಳೂರಿನಿಂದ ಹಾಸನಕ್ಕೆ ತೆರಳುವ ತಡೆ ರಹಿತ 'ಅಶ್ವಮೇಧ ಬಸ್' ಚಾಲಕರೊಬ್ಬರೇ ಇರುತ್ತಾರೆ. ಇವರು ಬೆಂಗಳೂರಿನಿಂದ ಬಸ್ ಹೊರಡುತ್ತಿದ್ದಾರೆ. ಸ್ವಲ್ಪ ದೂರದ ನಂತರ ನಿಲ್ಲಿಸಿ ಟಿಕೆಟ್ ನೀಡುತ್ತಾರೆ. ಅವರ ಚಾಲನೆ ಮಾಡುವುದರಿಂದ ಇಲ್ಲಿ ನಿರ್ವಹಣೆಯ ಖರ್ಚು ಕಡಿಮೆ ಆಗುತ್ತದೆ.

ಅಲ್ಲದೇ ಎಲ್ಲಿಯೂ ನಡುವೆ ಸ್ಟಾಪ್ ಇಲ್ಲದ ಕಾರಣ ಈ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಶ್ವಮೇಧದಲ್ಲಿ ಬಸ್ ಫುಲ್ ಆದ ಬಳಿಕವೇ ಬೇರೆ ಸಾರಿಗೆ ಬಸ್‌ಗಳಲ್ಲಿ ಜನ ಸಂಚಾರ ಮಾಡುತ್ತಿದ್ದಾರೆ.
ಬಸ್‌ಗಳ ವಿಶೇಷತೆ ಏನೇನು?
ಇದೇ ವರ್ಷ ಫೆಬ್ರುವರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂದೆ KSRTCಯ 507 ಅಶ್ವಮೇಧ ಬಸ್‌ಗಳಿಗೆ ಚಾಲನೆ ನೀಡಿದ್ದರು. 52 ಆಸನಗಳನ್ನು ಈ ಬಸ್‌ಗಳು ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿವೆ.
ಈ ಬಸ್ 3.42 ಮೀಟರ್ ಎತ್ತರದಲ್ಲಿದೆ. ಮುಂದೆ ವಿಶಾಲವಾದ ಗ್ಲಾಸ್, ವೈಪರ್ ಇದ್ದು, ದೊಡ್ಡದಾದ ಕಿಟಕಿ ಫ್ರೇಮ್, ಹಿಂಬದಿ ಬರುವ ವಾಹನಗಳುಕಾಣುವಂತೆ ಎರಡು ಬದಿ ದೊಡ್ಡ ಮಿರರ್‌ಗಳೂ, ವಿಶಾಲ ಒಳಾಂಗಣ, ಪ್ರಯಾಣಿಕರ ಲಗೇಜ್ ಇಡಲು ದೊಡ್ಡ ಸ್ಪೇಸ್ ಇದೆ. ಇದೆಲ್ಲ ಕಾರಣಗಳಿಂದ ಈ ಬಸ್ ವಿಶೇಷ ಎನ್ನಿಸಿಕೊಂಡಿದೆ.
ಲೋಕಾರ್ಪಣೆಗೊಂಡ ಅಶ್ವಮೇಧ ಬಸ್‌ಗಳನ್ನು ಹಂತ ಹಂತವಾಗಿ ಅಗತ್ಯ ಇರುವ ಮಾರ್ಗಗಳಿಗೆ ಬಿಡಲಾಗಿದೆ. ಆಯಾ ಜಿಲ್ಲೆಗಳ ಘಟಕಗಳಿಗೆ ಬಸ್‌ಗಳನ್ನು ನೀಡಲಾಗಿದೆ. ಸದ್ಯ ಈ ಬಸ್‌ಗಳಿಗೆ ಡಿಮ್ಯಾಂಡ್ ಇದ್ದು, ಇವು ಫುಲ್ ಆದ ಬಳಿಕ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಜನರು ಸಂಚರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಸ್‌ಗಳ ಸಂಖ್ಯೆ ಹೆಚ್ಚಿಸುವ ಸಾಧ್ಯತೆಗಳು ಇವೆ.












Click it and Unblock the Notifications