KSRP:ಮಹಿಳಾ ಸಿಬ್ಬಂದಿಗಳಿಗೆ ವಾಹನಗಳಲ್ಲಿ ಶೌಚಾಲಯ ವ್ಯವಸ್ಥೆ

ಬೆಂಗಳೂರು, ಏಪ್ರಿಲ್ 02: ಕೆಎಸ್ಆರ್ ಪಿ ಮಹಿಳಾ ಸಿಬ್ಬಂದಿಗಳು ತರಬೇತಿ ಪಡೆಯುವ ಜಾಗದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಪರದಾಡುತ್ತಿದ್ದರು. ಹಾಗಾಗಿ ಕೆಎಸ್ಆರ್ ಪಿ ವಾಹನದಲ್ಲಿಯೇ ಶೌಚಾಲಯ ನಿರ್ಮಿಸಲಾಗಿದೆ.

ಸುಮಾರು 6330 ಮಹಿಳಾ ಸಿಬ್ಬಂದಿಗಳು ತರಬೇತಿ ಪಡೆಯುವ ಜಾಗದಲ್ಲಿ ಶೌಚಾಲಯವಿರಲಿಲ್ಲ. ಮೊದಲ ಶೌಚಾಲಯ ಕೊಯಮತ್ತೂರಿನಲ್ಲಿ 1.5ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದು ಶೀಘ್ರದಲ್ಲಿ ಇನ್ನುಳಿದ ವಾಹನಗಳಿಗೂ ವಿಸ್ತರಿಸಲಾಗುತ್ತದೆ ಎಂದು ಕೆಎಸ್ಆರ್ ಪಿ ತಿಳಿಸಿದೆ.

ಸದ್ಯಕ್ಕೆ ಒಂದು ವಾಹನದಲ್ಲಿ ಶೌಚಾಲಯ ನಿರ್ಮಿಸಿದ್ದು ಶೀಘ್ರದಲ್ಲಿ ಐದು ವಾಹನಗಳಿಗೆ ವಿಸ್ತರಿಸಲಾಗುತ್ತದೆ. ಮಹಿಳೆಯರು ಹಾಗೂ ಪುರುಷ ಪೊಲೀಸ್ ಸಿಬ್ಬಂದಿಗಳ ಬೇಡಿಕೆ ಮೇರೆಗೆ ನಿರ್ಮಿಸಲಾಗುತ್ತದೆ. ಈಗಿರುವ ವಾಹನಗಳ ಪೈಕಿ ಶೇ.50ರಷ್ಟು ವಾಹನಗಳಿಗೆ ಶೌಚಾಲಯ ಅಳವಡಿಸುವ ಗುರಿ ಹೊಂದಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

KSRP vehicle fitted with toilet

ವಾಹನದ ಹಿಂಭಾಗ 12 ಚದರಡಿ ವಿಸ್ತೀರ್ಣದಲ್ಲಿ ಶೌಚಾಲಯ ನಿರ್ಮಿಸಲಾಗುತ್ತದೆ. ಹಾಗೆಯೇ 300 ಲೀಟರ್ ವಾಟರ್ ಟ್ಯಾಂಕ್ ಅಳವಡಿಸಲಾಗಿರುತ್ತದೆ. ಎರಡು ಹತ್ತಿರದಲ್ಲಿರುವ ಮ್ಯಾನ್ ಹೋಲ್‌ನಿಂದ ಎರಡು ಒಳಚರಂಡಿ ಪೈಪ್‌ಗಳನ್ನು ಅಳವಡಿಸಲಾಗಿರುತ್ತದೆ.

ದೊಂಬಿ, ಗಲಾಟೆ, ಬಂದ್ ಗಳು ನಡೆದಾಗ ಶುಚಿತ್ವದ ಕೊರತೆ ಉಂಟಾಗುತ್ತದೆ. ಕೆಲವೊಂದು ವಾಹನಗಳಲ್ಲಿ ಅಡುಗೆ ತಯಾರಿಸಲು ಸಲಕರಣೆ, ಬುಲೆಟ್ ಪ್ರೂಫ್ ಜಾಕೆಟ್ ಗಳು, ಟಿಯರ್ ಗ್ಯಾಸ್ ಹೀಗೆ ಎಲ್ಲಾ ಸೌಕರ್ಯಗಳು ಇರುವಾಗ ಶೌಚಾಲಯ ಮಾತ್ರ ಯಾಕೆ ಇಲ್ಲ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+