ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ತುಮಕೂರು ನಡುವೆ ಹೆಚ್ಚುವರಿ ರೈಲು; ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 05; ಬೆಂಗಳೂರು- ತುಮಕೂರು ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಉಭಯ ನಗರಗಳ ನಡುವೆ ಪ್ರಯಾಣಿಕರ ಬೇಡಿಕೆಯಂತೆ ಹೆಚ್ಚುವರಿ ರೈಲನ್ನು ಓಡಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ. ಏಪ್ರಿಲ್ 8ರಿಂದ ಹೆಚ್ಚುವರಿ ರೈಲು ಸಂಚಾರ ನಡೆಸಲಿದೆ.

ಬೆಂಗಳೂರಿನ ಯಶವಂತಪುರ ಮತ್ತು ತುಮಕೂರು ನಗರಗಳ ನಡುವೆ ಇದುವರೆಗೂ 8 ಬೋಗಿಗಳ ಡೆಮು ರೈಲು ಸಂಚಾರ ನಡೆಸುತ್ತಿತ್ತು. ಈಗ ನೈಋತ್ಯ ರೈಲ್ವೆ ಡೆಮು ರೈಲು ರದ್ದುಗೊಳಿಸಿ 16 ಬೋಗಿಗಳ ಮೆಮು ರೈಲು ಓಡಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಉಭಯ ನಗರಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ನೂರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ತುಮಕೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿತುಮಕೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ

ಬೆಂಗಳೂರು-ತುಮಕೂರು ನಡುವೆ ಹೆಚ್ಚುವರಿ ರೈಲು ಸಂಚಾರ ನಡೆಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆ ಆಗಿತ್ತು. ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ಹೆಚ್ಚು ರೈಲುಗಳ ಸಂಚಾರದ ಕುರಿತು ತೀರ್ಮಾನಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದರು.

ಹೊಸಪೇಟೆ-ದಾವಣಗೆರೆ, ಹೊಸಪೇಟೆ-ಬಳ್ಳಾರಿ ಡೆಮು ರೈಲು; ವೇಳಾಪಟ್ಟಿ ಹೊಸಪೇಟೆ-ದಾವಣಗೆರೆ, ಹೊಸಪೇಟೆ-ಬಳ್ಳಾರಿ ಡೆಮು ರೈಲು; ವೇಳಾಪಟ್ಟಿ

ಚಿಕ್ಕಬಣಾವರ-ಹುಬ್ಬಳ್ಳಿ ರೈಲು ಮಾರ್ಗದ ವಿದ್ಯುದೀಕರಣದ ಭಾಗವಾಗಿ ಬೆಂಗಳೂರು-ತುಮಕೂರು ನಡುವಿನ 69.47 ಕಿ. ಮೀ. ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ಪ್ರಾಯೋಗಿಕ ಸಂಚಾರವೂ ಪೂರ್ಣಗೊಂಡಿದ್ದು, ಕೆಲವು ದಿನಗಳ ಹಿಂದೆ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಪರಿಶೀಲನೆ ಸಹ ಪೂರ್ಣಗೊಳಿಸಿದ್ದಾರೆ. ಈಗ ಮಾರ್ಗದಲ್ಲಿ ಡೆಮು ಬದಲು ಮೆಮು ರೈಲು ಸಂಚಾರ ನಡೆಸಲಿದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ಶೀಘ್ರವೇ ಓಡಲಿದೆ ಮೆಮು ರೈಲು ಕೆಂಪೇಗೌಡ ಏರ್‌ಪೋರ್ಟ್‌ಗೆ ಶೀಘ್ರವೇ ಓಡಲಿದೆ ಮೆಮು ರೈಲು

ಏಪ್ರಿಲ್ 8ರಿಂದ ಮೆಮು ರೈಲು ಸಂಚಾರ

ಏಪ್ರಿಲ್ 8ರಿಂದ ಮೆಮು ರೈಲು ಸಂಚಾರ

ತುಮಕೂರು-ಯಶವಂತಪುರ ನಡುವೆ 8 ಬೋಗಿಗಳ ಡೆಮು (Diesel-electric multiple unit) ರೈಲು ಸಂಚಾರ ನಡೆಸುತ್ತಿದೆ. ಈಗ ನೈಋತ್ಯ ರೈಲ್ವೆ ಏಪ್ರಿಲ್ 8ರಿಂದ 16 ಬೋಗಿಗಳ ಮೆಮು ರೈಲು ಸಂಚಾರ ನಡೆಸಲು ತೀರ್ಮಾನಿಸಿದೆ. ಇದರಿಂದಾಗಿ ನೂರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ರೈಲು ವೇಳಾಪಟ್ಟಿ

ರೈಲು ವೇಳಾಪಟ್ಟಿ

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಬೆಳಗ್ಗೆ 9.30ಕ್ಕೆ ಹೊರಡುವ ರೈಲು ತುಮಕೂರಿಗೆ 11 ಗಂಟೆಗೆ ತಲುಪಲಿದೆ. ಇದೇ ರೈಲು 11.15ಕ್ಕೆ ತುಮಕೂರಿನಿಂದ ಹೊರಟು 1.25ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.

ಮಧ್ಯಾಹ್ನ 1.50ಕ್ಕೆ ಬೆಂಗಳೂರಿನ ಕೆಎಸ್ಆರ್ ನಿಲ್ದಾಣದಿಂದ ಹೊರಡುವ ರೈಲು ಮಧ್ಯಾಹ್ನ 3.20ಕ್ಕೆ ತುಮಕೂರು ತಲುಪಲಿದೆ. ತುಮಕೂರಿನಿಂದ ಮಧ್ಯಾಹ್ನ 3.50ಕ್ಕೆ ಹೊರಡುವ ರೈಲು 5.25ಕ್ಕೆ ಕೆಎಸ್ಆರ್‌ ನಿಲ್ದಾಣವನ್ನು ರೈಲು ತಲುಪಲಿದೆ.

ಸಾಂಪ್ರದಾಯಿಕ ರೈಲು ಸಂಚಾರ

ಸಾಂಪ್ರದಾಯಿಕ ರೈಲು ಸಂಚಾರ

ಏಪ್ರಿಲ್ 8ರಿಂದ ಬೆಂಗಳೂರು-ಅರಸೀಕೆರೆ ನಡುವೆ 8 ಬೋಗಿಗಳ ಡೆಮು ರೈಲು ಬದಲಾಗಿ 17 ಐಸಿಎಫ್ ಕೋಚ್‌ಗಳ ಸಂಪ್ರದಾಯಿಕ ರೈಲುಗಳು ಸಂಚಾರ ನಡೆಸಲಿವೆ. ಅರಸೀಕೆರೆ-ಕೆಎಸ್ಆರ್ ಬೆಂಗಳೂರು ನಡುವೆ ಮಾತ್ರ ಸಂಚಾರ ನಡೆಸುತ್ತಿದ್ದ ರೈಲನ್ನು ಚನ್ನಪಟ್ಟಣದ ತನಕ ವಿಸ್ತರಣೆ ಮಾಡಲಾಗಿದೆ. ಇದೇ ರೈಲು ಸಂಜೆ 4.50ಕ್ಕೆ ಚನ್ನಪಟ್ಟಣದಿಂದ ಹೊರಟು ಅರಸೀಕೆರೆಗೆ ತಲುಪಲಿದೆ.

ಅರಸೀಕೆರೆ-ತುಮಕೂರು-ಬೆಂಗಳೂರು ಡೆಮು ರೈಲು ಸದಾ ಪ್ರಯಾಣಿಕರ ದಟ್ಟಣೆಯಿಂದ ತುಂಬಿರುತ್ತಿತ್ತು. ಈಗ 17 ಕೋಚ್‌ಗಳ ಸಂಪ್ರದಾಯಿಕ ಐಸಿಎಫ್ ಕೋಚ್ ರೈಲು ಓಡಿಸುವುದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲು ಚನ್ನಪಟ್ಟಣ ತನಕ ಸಂಚಾರ ನಡೆಸುವುದರಿಂದ ಹೆಚ್ಚಿನ ಪ್ರಯಾಣಿಕರು ಸಂಚಾರ ನಡೆಸುವ ನಿರೀಕ್ಷೆ ಇದೆ.

Recommended Video

Basavaraj Bommai ನಿವಾಸಕ್ಕೆ ಭೇಟಿ ನೀಡಿದ Smriti Irani | Oneindia Kannada
ಸಂಸದರಿಗೆ ಅಭಿನಂದನೆ

ಸಂಸದರಿಗೆ ಅಭಿನಂದನೆ

ತುಮಕೂರು-ಬೆಂಗಳೂರು ನಡುವೆ ಹೆಚ್ಚಿನ ರೈಲು ಸಂಚಾರ ನಡೆಸಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಇತ್ತು. ಸಾಮಾಜಿಕ ತಾಲತಾಣಗಳಲ್ಲಿಯೂ ಈ ಕುರಿತು ಸರಣಿ ಟ್ವೀಟ್‌ಗಳ ಮೂಲಕ ಅಭಿಯಾನ ನಡೆಸಲಾಗಿತ್ತು.

ಈ ಬೇಡಿಕೆಯನ್ನು ಗಮನಿಸಿದ ತುಮಕೂರು ಸಂಸದ ಜಿ. ಎಸ್. ಬಸವರಾಜು ವಿಭಾಗೀಯ ರೈಲ್ವೆ ಅಧಿಕಾರಿಗಳು, ರೈಲ್ವೆ ಸಚಿವರ ಜೊತೆ ಮಾತುಕತೆ ನಡೆಸಿದ್ದರು. ಸಂಸದರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು ಬೆಂಗಳೂರು-ತುಮಕೂರು ರೈಲ್ವೆ ಪ್ರಯಾಣಿಕರ ವೇದಿಕೆ ಸಂಸದರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.

English summary
The South western railways will run MEMU trains between KSR Bengaluru and Tumakuru from April 8, 2022. Here are the train schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X