ವಿಧಾನಸೌಧಕ್ಕೆ ಇನ್ನು ಕೆ‌ಎಸ್‌ಐ‌ಎಫ್ ಪಡೆಯ ಭದ್ರತೆ

ಬೆಂಗಳೂರು, ಅಕ್ಟೋಬರ್ 20 : ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ ಮತ್ತು ಅದರ ಪಕ್ಕದಲ್ಲಿರುವ ವಿಕಾಸಸೌಧಕ್ಕೆ ಮಂಗಳವಾರದಿಂದ ಗರಿಷ್ಠ ಭದ್ರತೆ ದೊರೆಯಲಿದೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಶಸ್ತ್ರಸಜ್ಜಿತ ಸಿಬ್ಬಂದಿ ಈ ಕಟ್ಟಡಗಳ ಭದ್ರತೆಯ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ‌ಎಸ್‌ಐ‌ಎಫ್ ಪಡೆಯ ಗೌರವರಕ್ಷೆಯನ್ನು ಸ್ವೀಕರಿಸುವ ಮೂಲಕ ಗರಿಷ್ಠ ಭದ್ರತೆಗೆ ಚಾಲನೆ ನೀಡಿದರು. ಹಲವು ದಿನಗಳಿಂದ ಈ ಕಟ್ಟಡಗಳಿಗೆ ಹೆಚ್ಚುವರಿ ಭದ್ರತೆ ಕಲ್ಪಿಸುವ ಚಿಂತನೆ ನಡೆದಿತ್ತು, ಇದೀಗ ಅದು ಕಾರ್ಯರೂಪಕ್ಕೆ ಬಂದಿದೆ.

ಇಷ್ಟು ದಿನ ಸಾಮಾನ್ಯ ಪೊಲೀಸರು ಈ ಕಟ್ಟಡಗಳ ಭದ್ರತೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಇಂದಿನಿಂದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ವಿಶೇಷ ತರಬೇತಿ ಪಡೆದ 83 ಸಿಬ್ಬಂದಿ ಭದ್ರತೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.

ಕೇಂದ್ರ ಕೈಗಾರಿಕಾ ಭದ್ರತೆ ಪಡೆ (ಸಿಐಎಸ್‌ಎಫ್) ಮಾದರಿಯಲ್ಲಿ 2012ರಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯನ್ನು ಸ್ಥಾಪನೆ ಮಾಡಲಾಗಿದೆ. 2013ರಲ್ಲಿ ಈ ಪಡೆಗೆ 1,731 ಕಾನ್ಸ್‌ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ವಿಶೇಷ ತರಬೇತಿ ನೀಡಲಾಗಿದೆ.

ವಿಧಾನಸೌಧ, ವಿಕಾಸೌಧಕ್ಕೆ ಹೆಚ್ಚಿನ ಭದ್ರತೆ

ವಿಧಾನಸೌಧ, ವಿಕಾಸೌಧಕ್ಕೆ ಹೆಚ್ಚಿನ ಭದ್ರತೆ

ಅಕ್ಟೋಬರ್ 20ರ ಮಂಗಳವಾರದಿಂದ ವಿಧಾನಸೌಧ ಮತ್ತು ಅದರ ಪಕ್ಕದಲ್ಲಿರುವ ವಿಕಾಸಸೌಧಕ್ಕೆ ಗರಿಷ್ಠ ಭದ್ರತೆ ದೊರೆಯಲಿದೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಶಸ್ತ್ರಸಜ್ಜಿತ ಸಿಬ್ಬಂದಿ ಈ ಕಟ್ಟಡಗಳಿಗೆ ಭದ್ರತೆ ಒದಗಿಸಲಿದ್ದಾರೆ.

ಗೌರವ ರಕ್ಷೆ ಸ್ವೀಕರಿಸಿದ ಸಿದ್ದರಾಮಯ್ಯ

ಗೌರವ ರಕ್ಷೆ ಸ್ವೀಕರಿಸಿದ ಸಿದ್ದರಾಮಯ್ಯ

ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ‌ಎಸ್‌ಐ‌ಎಫ್ ಪಡೆಯ ಗೌರವರಕ್ಷೆಯನ್ನು ಸ್ವೀಕರಿಸುವ ಮೂಲಕ ಗರಿಷ್ಠ ಭದ್ರತೆಗೆ ಚಾಲನೆ ನೀಡಿದರು. ಹಲವು ದಿನಗಳಿಂದ ಈ ಕಟ್ಟಡಗಳಿಗೆ ಹೆಚ್ಚುವರಿ ಭದ್ರತೆ ಕಲ್ಪಿಸುವ ಚಿಂತನೆ ನಡೆದಿತ್ತು, ಇದೀಗ ಅದು ಕಾರ್ಯರೂಪಕ್ಕೆ ಬಂದಿದೆ.

ವಿಶೇಷ ತರಬೇತಿ ಪಡೆದ ಸಿಬ್ಬಂದಿಗಳು

ವಿಶೇಷ ತರಬೇತಿ ಪಡೆದ ಸಿಬ್ಬಂದಿಗಳು

ಕೇಂದ್ರ ಕೈಗಾರಿಕಾ ಭದ್ರತೆ ಪಡೆ (ಸಿಐಎಸ್‌ಎಫ್) ಮಾದರಿಯಲ್ಲಿ 2012ರಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯನ್ನು ಸ್ಥಾಪನೆ ಮಾಡಲಾಗಿದೆ. ಈ ಪಡೆಯಲ್ಲಿನ 83 ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದ್ದು, ಅವರು ಎರಡೂ ಕಟ್ಟಡಗಳ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ.

23 ಮಹಿಳಾ ಕಮಾಂಡೋಗಳು

23 ಮಹಿಳಾ ಕಮಾಂಡೋಗಳು

ಎರಡೂ ಕಟ್ಟಡಗಳ ಭದ್ರತೆ ನೋಡಿಕೊಳ್ಳುತ್ತಿರುವ ಕೆ‌ಎಸ್‌ಐ‌ಎಫ್ ಪಡೆಯ ಸಿಬ್ಬಂದಿಗಳಲ್ಲಿ 23 ಮಹಿಳಾ ಕಮಾಂಡೋಗಳಿದ್ದಾರೆ. ಸಬ್‌ ಇನ್ಸ್‌ಪೆಕ್ಟರ್‌ಗಳು 83 ಸಿಬ್ಬಂದಿಗಳ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಕಠಿಣ ತರಬೇತಿ ನೀಡಲಾಗಿದೆ

ಕಠಿಣ ತರಬೇತಿ ನೀಡಲಾಗಿದೆ

2013ರಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಗೆ 1,731 ಕಾನ್ಸ್‌ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಒಂದು ವರ್ಷದ ಕಠಿಣ ತರಬೇತಿಯನ್ನು 4 ತಿಂಗಳ ಹಿಂದೆ ಈ ಪಡೆಗಳು ಪೂರ್ಣಗೊಳಿಸಿವೆ. ವಿಧಾನಸೌಧ ಹೊರತುಪಡಿಸಿದರೆ ಕೆಆರ್‌ಎಸ್ ಜಲಾಶಯದ ಭದ್ರತೆಗೆ ಮತ್ತೊಂದು ಪಡೆಯನ್ನು ನಿಯೋಜನೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+