Namma Metro: 'ಕೆಆರ್ ಪುರಂ' ಮೆಟ್ರೊ ನಿಲ್ದಾಣದ ಹೆಸರು ಬದಲಾವಣೆ
ಸದಾ ಜನದಟ್ಟಣೆಯಿಂದ ಕೂಡಿರುವ ಬೆಂಗಳೂರಿನ ಹೊರ ವಲಯದಲ್ಲಿರುವ ಕೆ.ಆರ್.ಪುರಂ ಮೆಟ್ರೊ ನಿಲ್ದಾಣದ ಹೆಸರನ್ನು ಬದಲಾಯಿಸಲಾಗಿದೆ ಎಂಬ ಅಧಿಕೃತ ಮಾಹಿತಿ ದೊರೆತಿದೆ.
ಬೆಂಗಳೂರು, ಮಾರ್ಚ್ 16: ಸದಾ ಜನದಟ್ಟಣೆಯಿಂದ ಕೂಡಿರುವ ಬೆಂಗಳೂರಿನ ಹೊರ ವಲಯದಲ್ಲಿರುವ ಕೆ.ಆರ್.ಪುರಂ ಮೆಟ್ರೊ ನಿಲ್ದಾಣದ ಹೆಸರನ್ನು ಬದಲಾಯಿಸಲಾಗಿದೆ ಎಂಬ ಅಧಿಕೃತ ಮಾಹಿತಿ ದೊರೆತಿದೆ.
ಇನ್ನೇನು ಕೆಲವೇ ದಿನಗಳಲ್ಲಿ ವೈಟ್‌ಫಿಲ್ಡ್‌ನಿಂದ ಕೆ.ಆರ್.ಪುರಂ ವರೆಗೆ ಮೆಟ್ರೋ ಮಾರ್ಗ ಸಾರ್ವಜನಿಕ ಬಳಕೆಗೆಂದು ಲೋಕಾರ್ಪಣೆಗೊಳ್ಳಲಿದೆ. ಈ ನಡುವೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಕೆ.ಆರ್ ಪುರಂ ಮೆಟ್ರೋ ನಿಲ್ದಾಣದ ಹೆಸರು ಬದಲಾಯಿಸಿರುವುದಾಗಿ ತಿಳಿಸಿದ್ದಾರೆ.

ಕೃಷ್ಣರಾಜಪುರ ಮೆಟ್ರೋ ನಿಲ್ದಾಣವನ್ನು ವಾಡಿಕೆಯಂತೆ ಈ ಮೊದಲು 'ಕೆ.ಆರ್. ಪುರಂ' (K.R.Puram) ಎಂದು ನಾಮಕರಣ ಮಾಡಲಾಗಿತ್ತು. ಇದೀಗ ಆ ನಿಲ್ದಾಣವನ್ನು 'ಕೆ.ಆರ್.ಪುರ' (K.R.Pura) ಎಂದು ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ.ಆರ್.ಪುರಂ ಇದೊಂದು ಬೆಂಗಳೂರು ನಗರ ಜಿಲ್ಲೆಯ ತಾಲೂಕು ಕೇಂದ್ರವೂ ಆಗಿದೆ. ಇದು ಹಳೆ ಮದ್ರಾಸ್ ರಸ್ತೆಗೆ ಸಮೀಪವಿದ್ದು, ರಿಂಗ್ ರಸ್ತೆಯ ಜಂಕ್ಷನ್, ರೈಲು ನಿಲ್ದಾಣ ಇಲ್ಲಿದೆ. ಬೆಂಗಳೂರಿನಿಂದ ಹೊಸ ಕೋಟೆ ಗೆ ಇದೇ ಮಾರ್ಗವಾಗಿ ಹೋಗಬೇಕು. ಈ ಪ್ರದೇಶದಲ್ಲಿ ಸಾಕಷ್ಟು ವ್ಯಾಪಾರ ವಹೀವಾಟು ನಡೆಯುತ್ತಿದೆ. ಇಲ್ಲಿ ಮೆಟ್ರೋ ಸಂಚಾರದ ಅವಶ್ಯಕತೆ ಇತ್ತು.
ಅದರಂತೆ ವೈಟ್ ಫಿಲ್ಡ್‌ನಿಂದ ಕೆ.ಆರ್.ಪುರಂ ವರೆಗಿನ 13 ಕಿಲೋ ಮೀಟರ್ ನೂತನ ಮೆಟ್ರೋ ಮಾರ್ಗ ಪೂರ್ಣಗೊಂಡಿದೆ. ಇಲ್ಲಿ ಪ್ರತಿ ಗಂಟೆಗೆ 80 ಕಿಲೋ ಮೀಟರ್ ವೇಗದಲ್ಲಿ ಪ್ರಾಯೋಗಿಕ ಸಂಚಾರ ಸೇರಿ ಗುಣಮಟ್ಟ, ಸುರಕ್ಷತೆ ಪರಿಶೀಲನೆ ಮುಗಿದಿದೆ. ಇದೇ ಮಾರ್ಚ್ 25ರಂದು ಈ ಮಾರ್ಗ ಲೋಕಾರ್ಪಣೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.












Click it and Unblock the Notifications