Namma Metro: ಮೆಟ್ರೋ ಪ್ರಯಾಣದ ಮೇಲೆ ಜನಪ್ರತಿನಿಧಿಗಳ ಒಲವು
ಬೆಂಗಳೂರು, ನವೆಂಬರ್ 09: ಬೆಂಗಳೂರಿನ ನಿವಾಸಿಗಳಿಗೆ ಉತ್ತಮ ಸಾರಿಗೆ ಸೇವೆ ನೀಡಲು ಸುಮಾರು 73 ಕಿಲೋ ಮೀಟರ್ ಜಾಲ ವಿಸ್ತರಿಸಿಕೊಂಡಿರುವ ನಮ್ಮ ಮೆಟ್ರೋ (Namma metro) ಮೇಲೆ ರಾಜಕೀಯ ನಾಯಕರಿಗೆ ಒಲವು ಹೆಚ್ಚಾಗಿದೆ.
ನಮ್ಮ ಮೆಟ್ರೋದ ಚಲ್ಲಘಟ್ಟ-ವೈಟ್‌ಫಿಲ್ಡ್‌ವರೆಗಿನ ಮಾರ್ಗವು ಅನೇಕ ಪ್ರಮಾಣಿಕರಿಗೆ ಅಚ್ಚುಮೆಚ್ಚಿನ ಮಾರ್ಗವೆಂದರೆ ತಪ್ಪಾಗಲಾರದು. ಇದೀಗ ಇದೇ ಮಾರ್ಗದಲ್ಲಿ ಕರ್ನಾಟಕ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಂಚರಿಸಿದರು.
ಈ ಮೂಲಕ ಗುರುವಾರ ಸಚಿವರು ಮೈಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ತಪ್ಪಿಸಿಕೊಂಡು ಸುಗಮ ಮತ್ತು ವೇಗದ ಸಾರಿಗೆಯಲ್ಲಿ ಸಾರ್ವಜನಿಕರೊಂದಿಗೆ ಸಂಚಾರ ಮಾಡಿದರು.

ಸಚಿವರು ತಮ್ಮ ಸಂಚಾರ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಚಿವರು ಮೊಬೈಲ್ ನಲ್ಲಿ ಮಾತನಾಡಿಕೊಂಡು ಫ್ಲಾಟ್ ಫಾಮ್‌ಗೆ ಬಂದು ನಿಲ್ಲುವ ನೇರಳೆ ಮಾರ್ಗದ ಮೆಟ್ರೋ ರೈಲು ಏರುತ್ತಾರೆ. ಬೋಗಿಯೊಳಗೆ ಸಹ ಪ್ರಮಾಣಿಕರಿಗೆ ಹೈ ಹೇಳುತ್ತಲೇ ಕುಳಿತುಕೊಳ್ಳುವ ದೃಶ್ಯ ವಿಡಿಯೋದಲ್ಲಿ ಕಾಣುತ್ತದೆ.
ಕೆಂಗೇರಿ-ವಿಧಾನಸೌಧವರೆಗೆ ಸಚಿವರ ಪ್ರಯಾಣ
ನೇರಳೆ ಮಾರ್ಗದ ಕೆಂಗೇರಿಯಿಂದ ವಿಧಾನಸೌಧವರೆಗೆ ಅವರು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಯಾಣ ಮಾಡಿದ್ದಾರೆ. ''ಬೆಂಗಳೂರು ನಮ್ಮ ಮೆಟ್ರೋ ಭವಿಷ್ಯದಲ್ಲಿ ನಮ್ಮ ಊರು'' ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಇಂದು ನಾನು ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದೇನೆ ಎಂದು ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸದ್ಯ ನೇರಳೆ ಮಾರ್ಗ (Metro Purple Line) ಮತ್ತು ಹಸಿರು ಮಾರ್ಗದಲ್ಲಿ (Metro Green Line) ನಲ್ಲಿ ಒಟ್ಟು ಸುಮಾರು 50ಕ್ಕೂ ಹೆಚ್ಚು ರೈಲುಗಳ ಸೇವೆ ನೀಡುತ್ತಿವೆ. ಅದರಲ್ಲಿ ಈ ನೇರಳೆ ಮಾರ್ಗ ವಿಶೇಷವೆನೆಂದರೆ ನಗರದ ಪೂರ್ವದಿಂದ ಪಶ್ಚಿಮವರೆಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೇ ಐಟಿ ಕಾರಿಡಾರ್‌ಗೆ ಸಂಪರ್ಕ ಪಡೆದ ಮೊದಲ ಲೈನ್ ಆಗಿದೆ.

ಪ್ರಮಾಣಿಕರಿಗೆ ನೇರಳೆ ಮಾರ್ಗ ಅಚ್ಚುಮೆಚ್ಚು
ಹೀಗಾಗಿ ಈ ನೇರಳೆ ಮಾರ್ಗ ಮೆಟ್ರೋ ಪ್ರಯಾಣಿಕರ ಪೈಕಿ ಬಹುತೇಕರಿಗೆ ಅಚ್ಚುಮೆಚ್ಚು ಎನ್ನಬಹುದು. ಬುಧವಾರಷ್ಟೇ ಸಂಸದ ತೇಜಸ್ವಿ ಸೂರ್ಯ ಅವರು ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಆರ್ ಪುರಂವರೆಗೆ ಇದೇ ನೇರಳೆ ಮಾರ್ಗದಲ್ಲಿ ಸಂಚರಿಸಿದ್ದರು.
ಮೆಟ್ರೊದಲ್ಲಿ ತೇಜಸ್ವಿ ಸೂರ್ಯ ಪ್ರಯಾಣ
ಪ್ರಯಾಣದ ಉದ್ದಕ್ಕೂ ಸಹ ಪ್ರಮಾಣಿಕರ ಜತೆಗೆ ಸಂವಾದ ನಡೆಸಿದರು. ಮೆಟ್ರೋ ಸಂಚಾರ, ಬೋಗಿಗಳು, ರೈಲುಗಳ ಆವರ್ತನ, ಸುಗಮ ಸಂಚಾರ, ಬದಲಾವಣೆಗಳ ಕುರಿತು ಮಾತನಾಡಿದರು. ತಾವು ತಂದಿದ್ದ ಚಾಕೋಲೆಟ್‌ಗಳನ್ನು ಸಹ ಪ್ರಯಾಣಿಕರಿಗೆ ಹಂಚಿದ ವಿಡಿಯೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಹಂಚಿಕೊಂಡಿದ್ದರು.
ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ತೆರಳಿದ್ದ ಎಂಬಿ ಪಾಟಿಲ್
ಈ ಹಿಂದೆ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಸಹ ವಿಧಾನಸೌಧದಿಂದ ಕೆಂಗೇರಿ ವರೆಗೆ ಮೆಟ್ರೋ ಪ್ರಯಾಣ ಬೆಳೆಸಿದ್ದರು. ಅಲ್ಲಿಂದ ಕಾರ್ಯಕ್ರಮವೊಂದಕ್ಕೆ ಅವರು ತೆರಳಿದ್ದರು. ಇದೆಲ್ಲ ನೋಡಿದರೆ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ರಾಜಕೀಯ ನಾಯಕರಿಗೆ ಮೆಟ್ರೋ ಪ್ರಯಾಣದ ಮೇಲೆ ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ನಮ್ಮ ಮೆಟ್ರೋದ ಮಹತ್ವ ತಿಳಿಸುತ್ತಿದ್ದಾರೆ.












Click it and Unblock the Notifications