ಕೆ.ಆರ್.ಪುರ- ವೈಟ್‌ಪಿಲ್ಡ್ ಮೆಟ್ರೋ ಮಾರ್ಗದಲ್ಲಿ ಒಂದೇ ವಾರಕ್ಕೆ ಅತ್ಯಧಿಕ ಮಂದಿ ಸಂಚಾರ, ದೈನಂದಿನ ಅಂಕಿಸಂಖ್ಯೆ ತಿಳಿಯಿರಿ
ಬೆಂಗಳೂರು, ಏಪ್ರಿಲ್ 06: ಬೆಂಗಳೂರು, ಏಪ್ರಿಲ್ 06: ಬೆಂಗಳೂರಿನ ಐಟಿ ಕಾರಿಡಾರ್ ಆದ ವೈಟ್‌ಫಿಲ್ಡ್‌ಗೆ ಇತ್ತೀಚೆಗಷ್ಟೇ 'ನಮ್ಮ ಮೆಟ್ರೋ' ಸಂಪರ್ಕ ಸಾಧ್ಯವಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡು ಬಂದಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ (BMRCL)ಮಾಹಿತಿ ನೀಡಿದೆ.
ಕೆ.ಆರ್,ಪುರಂ ನಿಂದ ವೈಟ್‌ಫಿಲ್ಡ್ ವರೆಗಿನ ಐಟಿಕಾರಿಡಾರ್ ಸಂಪರ್ಕದ ನೂತನ ಮೆಟ್ರೋ ಮಾರ್ಗವನ್ನು ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು. ಅದಾದ ಬಳಿಕ ವಾರದಿನಗಳಿಗಿಂತಲೂ ವಾರಾಂತ್ಯಕ್ಕೆ ಹೆಚ್ಚು ಮಂದಿ ಪ್ರಯಾಣಿಸುತ್ತಿರುವ ಅಂಕಿ ಅಂಶಗಳು ಲಭ್ಯವಾಗಿವೆ. ಒಟ್ಟು ಒಂದು ವಾರದ ಅವಧಿಯ ಪ್ರಯಾಣಿಕ ಮಾಹಿತಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.

ಐಟಿ ಕಾರಿಡಾರ್ ಆಗಿರುವ ವೈಟ್‌ಫಿಲ್ಡ್ ನಗದದ ಹೃದಯ ಭಾಗದಿಂದ ಬಹು ದೂರ ಇದೆ. ಇಲ್ಲಿಗೆ ಸಂಪರ್ಕ ಸಾಧಿಸುವುದು ಕಷ್ಟದ ಕೆಲಸವಾಗಿತ್ತು. ಆದರೆ ಮೆಟ್ರೋ ಆರಂಭವಾದಾಗಿನಿಂದ ಒಂದು ವರ್ಷದ ಜನರು ನಮ್ಮ ಮೆಟ್ರೋ ಬಳಸುತ್ತಿದ್ದಾರೆ. ಇನ್ನು ವಾರಾಂತ್ಯದಲ್ಲಿ ಉದ್ಯೋಗಿಗಳು ಸೇರಿದಂತೆ ಜಾಲಿರೈಡ್ ಹೋಗುವವರು, ಮೋಜು ಮಸ್ತಿಗೆ ನಗರದತ್ತು ಬರುವವರು, ಶಾಪಿಂಗ್ ಇನ್ನತರ ಕಾರ್ಯಗಳಿಗೆ ಮೆಟ್ರೋ ಬಳಸಿ ಸಂಚರಿಸುವವರ ಸಂಖ್ಯೆ ದೊಡ್ಡಾಗುತ್ತಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಹೇಳುವ ಪ್ರಕಾರ, ಕೆ.ಆರ್.ಪುರಂನಿಂದ ವೈಟ್‌ಫೀಲ್ಡ್ ವರೆಗೆ 13.7ಕಿಲೋ ಮೀಟರ್ ಇದೆ. ಈ ಮಾರ್ಗದಲ್ಲಿ ಕಳೆದ ಮಾರ್ಚ್ 26ರಿಂದ ಏಪ್ರಿಲ್ 1ರವರೆಗಿನ ಒಂದು ವಾರದ ಪ್ರಯಾಣಿಕರ ಸಂಖ್ಯೆಯನ್ನು ವಿಶ್ಲೇಷಿಸಲಾಗಿದೆ. ಅದರ ಪ್ರಕಾರ ಒಂದು ದಿನಕ್ಕೆ ಸರಾಸರಿ 23,771 ಮಂದಿ ಮೆಟ್ರೋದಲ್ಲಿ ಓಡಾಡಿದ್ದಾರೆ ಎಂದು ತಿಳಿಸಿದೆ.
ಏಳು ದಿನಗಳ ಪ್ರಯಾಣಿಕರ ಮಾಹಿತಿ
ಮಾರ್ಚ್ 26 ರಂದು (ಭಾನುವಾರ) ಉದ್ಘಾಟನೆಯಾದ ದಿನದಂದು ಈ ಮಾರ್ಗ ವಾಣಿಜ್ಯ ಕಾರ್ಯಾಚರಣೆಗಳಿಗೆ ತೆರೆದುಕೊಂಡಿತು. ಅಂದು 27,379 ಮಂದಿ ಹೊಸ ಮೆಟ್ರೋ ಮಾರ್ಗದಲ್ಲಿ ಸಂಚರಿಸಿ ನೂತನ ಅನುಭವ ಪಡೆದರು.
ಉಳಿದ ದಿನಗಳನ್ನು ನೋಡುವುದಾದರೆ, ಮಾರ್ಚ್ 27 ರಂದು ಸೋಮವಾರ ಸರಾಸರಿ 21,261 ಪ್ರಯಾಣಿಕರು, ಮಾರ್ಚ್ 28 ರಂದು ಮಂಗಳವಾರ 23,038 ಮಂದಿ, ಮಾರ್ಚ್ 29 ರಂದು ಬುಧವಾರ ಒಟ್ಟು 23,125 ಪ್ರಯಾಣಿಕರು, ಮಾರ್ಚ್ 30 ರಂದು ಗುರುವಾರ 21,968 ಜನರು, ಮಾರ್ಚ್ 31 ಶುಕ್ರವಾರದಂದು ಒಟ್ಟು 22.084 ಜನರು ಪ್ರಯಾಣ ಮಾಡಿದ್ದಾರೆ.
ಮರುದಿನ ವಾರಾಂತ್ಯವಾದ ಏಪ್ರಿಲ್ 1 ರಂದು ಶನಿವಾರ ಈ ಸಂಖ್ಯೆ ಹೆಚ್ಚಾಗಿದ್ದು, ಅಂದು ಒಂದೇ ದಿನ ಒಟ್ಟು 27,544 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಈ ಸಂಖ್ಯೆ ಒಂದು ವಾರದಲ್ಲಿಯೇ ಅತ್ಯಧಿಕ ಗರಿಷ್ಠ ಪ್ರಮಾಣವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಬಿ.ಎಲ್,ಯಶವಂತ್ ಚವಾಣ್ ಅವರು, ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ತೆರೆದ ನಂತರ ಇದುವರೆಗೆ ಸರಾಸರಿ ಪ್ರಯಾಣಿಕರ ಸಂಖ್ಯೆ 20,000 ದಷ್ಟು ಹೆಚ್ಚಾಗಿದೆ ಎಂದರು.
ಸದ್ಯ ಕೆ.ಆರ್.ಪುರಂ ನಿಂದ ವೈಟ್‌ಫಿಲ್ಡ್ ವರೆಗೆ ಸಂಪರ್ಕ ಸಾಧ್ಯವಾಗಿದೆ. ಇನ್ನೂ ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂ ವರೆಗೆ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಒಂದು ವೇಳೆ ಈ ಮಾರ್ಗವು ಪೂರ್ಣಗೊಂಡರೆ ಮೆಟ್ರೋ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದ್ದರೆ.
ಪ್ರಸ್ತುತದಲ್ಲಿ ವೈಟ್‌ಫಿಲ್ಡ್‌ಗೆ ಹೋಗುವವರು ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂವರೆಗೆ ಬಿಎಂಟಿಸಿಯ ಫಿಡರ್ ಬಸ್ ಗಳನ್ನು ಅವಲಂಬಿಸಿದ್ದಾರೆ. ಆ ಬಸ್‌ಗಳಲ್ಲಿ ಬಂದು ಕೆ.ಆರ್.ಪುರಂನಲ್ಲಿ ಮೆಟ್ರೋ ಏರಿಬೇಕಿದೆ. ನೇರವಾಗಿ ಮೆಟ್ರೋ ಸಂಪರ್ಕ ಇದುವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಫಿಡರ್ ಬಸ್‌ಗಳನ್ನೇ ನೆಚ್ಚಿಕೊಳ್ಳಬೇಕಿದೆ. ಹೀಗಾಗಿ ವೈಟ್‌ಫಿಲ್ಡ್ ಸುತ್ತಮುತ್ತ ಕೆಲಸ ಮಾಡುವವರಿಗೆ ಫಿಡರ್ ಬಸ್ ಹಿಡಿದು ಮೆಟ್ರೋ ಹತ್ತುವುದೇ ಒಂದು ದೊಡ್ಡ ಸವಾಲಾಗಿದೆ.
ಹಳೆಯ ಮಾರ್ಗದಲ್ಲಿ ಪ್ರಯಾಣಿಕ ಸಂಖ್ಯೆ ಹೆಚ್ಚಾಗಿಲ್ಲ
ವೈಟ್‌ಫಿಲ್ಡ್ ನೂತನ ಮಾರ್ಗದಲ್ಲಿ ಓಡಾಡುವವರ ಸಂಖ್ಯೆಯೆನೋ ಹೆಚ್ಚಾಗುತ್ತಿದೆ. ಆದರೆ ಹಳೆಯ ಮಾಗಗಗಳಾದ ಬೈಪ್ಪನಹಳ್ಳಿ -ಕೆಂಗೇರಿ ಮತ್ತು ನಾಗಸಂದ್ರ-ಸಿಲ್ಕ್ ಇನ್‌ಸ್ಟಿಟ್ಯೂಟ್ ಮಾರ್ಗ (ಕ್ರಮವಾಗಿ ನೇರಳ ಮತ್ತು ಹಸಿರು ಮಾರ್ಗ) ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ಏರಿಕೆ ಆಗಿಲ್ಲ. ಅಚ್ಚರಿ ಎನಿಸಿದರೂ ಇದು ಸಹ ಸತ್ಯ ಎಂದು ವಿಶ್ಲೇಷಿಸಲಾಗಿದೆ.
ವೈಟ್‌ಫಿಲ್ಡ್ ಮಾರ್ಗ ತೆರೆಯುವಮೊದಲು ಬೈಯಪ್ಪನಹಳ್ಳಿ-ಕೆಂಗೇರಿ (ನೇರಳೆ ಮಾರ್ಗ) ಮಾರ್ಗದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 2,02,194 ಇತ್ತು. ಅದೇ ಮಾರ್ಚ್ ಕೊನೆಯ ವಾರ 2,07,691ಕ್ಕೆ (ವೈಟ್‌ಫೀಲ್ಡ್ ಮೆಟ್ರೋ ಸವಾರರನ್ನು ಹೊರತುಪಡಿಸಿ) ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಂದರೆ ನೇರಳೆ ಮಾರ್ಗದಲ್ಲಿ ದೈನಂದಿನದ ಸಂಖ್ಯೆಗಿಂತ ಸುಮಾರು 5,500 ಹೆಚ್ಚು ಜನ ಪ್ರಯಾಣ ಮಾಡಿದ್ದಾರೆ.
ಅದೇ ರೀತಿ ನಾಗಸಂದ್ರ ದಿಂದ ಸಿಲ್ಕ ಇನ್ಸ್ಟಿಟ್ಯೂಟ್ ವರೆಗಿನ ಹಸಿರು ಲೈನ್ ಮಾರ್ಗದಲ್ಲಿ ಮಾರ್ಚ್ ಮೊದಲ ವಾರದಲ್ಲಿ 2,12,585 ಮಂದಿ ಪ್ರಯಾಣಿಸಿದ್ದರೆ, ಮಾರ್ಚ್ ಕೊನೆಯ 2,10,784 ಕ್ಕೆ ಇಳಿಕೆ ಆಗಿದೆ. ಇದಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಭೀತಿ, ಬೇಸಿಗೆ ರಜೆಗಳ ಕಾರಣದಿಂದ ಈ ಮಾರ್ಗದಲ್ಲಿ ಜನರ ಓಡಾಟ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
.ಕೆ.ಆರ್,ಪುರಂ ನಿಂದ ವೈಟ್‌ಫಿಲ್ಡ್ ವರೆಗಿನ ಐಟಿಕಾರಿಡಾರ್ ಸಂಪರ್ಕದ ನೂತನ ಮೆಟ್ರೋ ಮಾರ್ಗವನ್ನು ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು. ಅದಾದ ಬಳಿಕ ವಾರದಿನಗಳಿಗಿಂತಲೂ ವಾರಾಂತ್ಯಕ್ಕೆ ಹೆಚ್ಚು ಮಂದಿ ಪ್ರಯಾಣಿಸುತ್ತಿರುವ ಅಂಕಿ ಅಂಶಗಳು ಲಭ್ಯವಾಗಿವೆ. ಒಟ್ಟು ಒಂದು ವಾರದ ಅವಧಿಯ ಪ್ರಯಾಣಿಕ ಮಾಹಿತಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ.
ಐಟಿ ಕಾರಿಡಾರ್ ಆಗಿರುವ ವೈಟ್‌ಫಿಲ್ಡ್ ನಗದದ ಹೃದಯ ಭಾಗದಿಂದ ಬಹು ದೂರ ಇದೆ. ಇಲ್ಲಿಗೆ ಸಂಪರ್ಕ ಸಾಧಿಸುವುದು ಕಷ್ಟದ ಕೆಲಸವಾಗಿತ್ತು. ಆದರೆ ಮೆಟ್ರೋ ಆರಂಭವಾದಾಗಿನಿಂದ ಒಂದು ವರ್ಷದ ಜನರು ನಮ್ಮ ಮೆಟ್ರೋ ಬಳಸುತ್ತಿದ್ದಾರೆ. ಇನ್ನು ವಾರಾಂತ್ಯದಲ್ಲಿ ಉದ್ಯೋಗಿಗಳು ಸೇರಿದಂತೆ ಜಾಲಿರೈಡ್ ಹೋಗುವವರು, ಮೋಜು ಮಸ್ತಿಗೆ ನಗರದತ್ತು ಬರುವವರು, ಶಾಪಿಂಗ್ ಇನ್ನತರ ಕಾರ್ಯಗಳಿಗೆ ಮೆಟ್ರೋ ಬಳಸಿ ಸಂಚರಿಸುವವರ ಸಂಖ್ಯೆ ದೊಡ್ಡಾಗುತ್ತಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಹೇಳುವ ಪ್ರಕಾರ, ಕೆ.ಆರ್.ಪುರಂನಿಂದ ವೈಟ್‌ಫೀಲ್ಡ್ ವರೆಗೆ 13.7ಕಿಲೋ ಮೀಟರ್ ಇದೆ. ಈ ಮಾರ್ಗದಲ್ಲಿ ಕಳೆದ ಮಾರ್ಚ್ 26ರಿಂದ ಏಪ್ರಿಲ್ 1ರವರೆಗಿನ ಒಂದು ವಾರದ ಪ್ರಯಾಣಿಕರ ಸಂಖ್ಯೆಯನ್ನು ವಿಶ್ಲೇಷಿಸಲಾಗಿದೆ. ಅದರ ಪ್ರಕಾರ ಒಂದು ದಿನಕ್ಕೆ ಸರಾಸರಿ 23,771 ಮಂದಿ ಮೆಟ್ರೋದಲ್ಲಿ ಓಡಾಡಿದ್ದಾರೆ ಎಂದು ತಿಳಿಸಿದೆ.
ಏಳು ದಿನಗಳ ಪ್ರಯಾಣಿಕರ ಮಾಹಿತಿ
ಮಾರ್ಚ್ 26 ರಂದು (ಭಾನುವಾರ) ಉದ್ಘಾಟನೆಯಾದ ದಿನದಂದು ಈ ಮಾರ್ಗ ವಾಣಿಜ್ಯ ಕಾರ್ಯಾಚರಣೆಗಳಿಗೆ ತೆರೆದುಕೊಂಡಿತು. ಅಂದು 27,379 ಮಂದಿ ಹೊಸ ಮೆಟ್ರೋ ಮಾರ್ಗದಲ್ಲಿ ಸಂಚರಿಸಿ ನೂತನ ಅನುಭವ ಪಡೆದರು.

ಉಳಿದ ದಿನಗಳನ್ನು ನೋಡುವುದಾದರೆ, ಮಾರ್ಚ್ 27 ರಂದು ಸೋಮವಾರ ಸರಾಸರಿ 21,261 ಪ್ರಯಾಣಿಕರು, ಮಾರ್ಚ್ 28 ರಂದು ಮಂಗಳವಾರ 23,038 ಮಂದಿ, ಮಾರ್ಚ್ 29 ರಂದು ಬುಧವಾರ ಒಟ್ಟು 23,125 ಪ್ರಯಾಣಿಕರು, ಮಾರ್ಚ್ 30 ರಂದು ಗುರುವಾರ 21,968 ಜನರು, ಮಾರ್ಚ್ 31 ಶುಕ್ರವಾರದಂದು ಒಟ್ಟು 22.084 ಜನರು ಪ್ರಯಾಣ ಮಾಡಿದ್ದಾರೆ.
ಮರುದಿನ ವಾರಾಂತ್ಯವಾದ ಏಪ್ರಿಲ್ 1 ರಂದು ಶನಿವಾರ ಈ ಸಂಖ್ಯೆ ಹೆಚ್ಚಾಗಿದ್ದು, ಅಂದು ಒಂದೇ ದಿನ ಒಟ್ಟು 27,544 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಈ ಸಂಖ್ಯೆ ಒಂದು ವಾರದಲ್ಲಿಯೇ ಅತ್ಯಧಿಕ ಗರಿಷ್ಠ ಪ್ರಮಾಣವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಕೆ.ಆರ್.ಪುರ-ಬೈಯಪ್ಪನಹಳ್ಳಿ ಮಾರ್ಗ ಸಿದ್ಧವಾದರೆ ಪ್ರಯಾಣಿಕರ ಏರಿಕೆ
ಈ ಕುರಿತು ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಬಿ.ಎಲ್,ಯಶವಂತ್ ಚವಾಣ್ ಅವರು, ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ತೆರೆದ ನಂತರ ಇದುವರೆಗೆ ಸರಾಸರಿ ಪ್ರಯಾಣಿಕರ ಸಂಖ್ಯೆ 20,000 ದಷ್ಟು ಹೆಚ್ಚಾಗಿದೆ ಎಂದರು.
ಸದ್ಯ ಕೆ.ಆರ್.ಪುರಂ ನಿಂದ ವೈಟ್‌ಫಿಲ್ಡ್ ವರೆಗೆ ಸಂಪರ್ಕ ಸಾಧ್ಯವಾಗಿದೆ. ಇನ್ನೂ ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂ ವರೆಗೆ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಒಂದು ವೇಳೆ ಈ ಮಾರ್ಗವು ಪೂರ್ಣಗೊಂಡರೆ ಮೆಟ್ರೋ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದ್ದರೆ.
ಪ್ರಸ್ತುತದಲ್ಲಿ ವೈಟ್‌ಫಿಲ್ಡ್‌ಗೆ ಹೋಗುವವರು ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂವರೆಗೆ ಬಿಎಂಟಿಸಿಯ ಫಿಡರ್ ಬಸ್ ಗಳನ್ನು ಅವಲಂಬಿಸಿದ್ದಾರೆ. ಆ ಬಸ್‌ಗಳಲ್ಲಿ ಬಂದು ಕೆ.ಆರ್.ಪುರಂನಲ್ಲಿ ಮೆಟ್ರೋ ಏರಿಬೇಕಿದೆ. ನೇರವಾಗಿ ಮೆಟ್ರೋ ಸಂಪರ್ಕ ಇದುವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಫಿಡರ್ ಬಸ್‌ಗಳನ್ನೇ ನೆಚ್ಚಿಕೊಳ್ಳಬೇಕಿದೆ. ಹೀಗಾಗಿ ವೈಟ್‌ಫಿಲ್ಡ್ ಸುತ್ತಮುತ್ತ ಕೆಲಸ ಮಾಡುವವರಿಗೆ ಫಿಡರ್ ಬಸ್ ಹಿಡಿದು ಮೆಟ್ರೋ ಹತ್ತುವುದೇ ಒಂದು ದೊಡ್ಡ ಸವಾಲಾಗಿದೆ.
ಹಳೆಯ ಮಾರ್ಗದಲ್ಲಿ ಪ್ರಯಾಣಿಕ ಸಂಖ್ಯೆ ಹೆಚ್ಚಾಗಿಲ್ಲ
ವೈಟ್‌ಫಿಲ್ಡ್ ನೂತನ ಮಾರ್ಗದಲ್ಲಿ ಓಡಾಡುವವರ ಸಂಖ್ಯೆಯೆನೋ ಹೆಚ್ಚಾಗುತ್ತಿದೆ. ಆದರೆ ಹಳೆಯ ಮಾಗಗಗಳಾದ ಬೈಪ್ಪನಹಳ್ಳಿ -ಕೆಂಗೇರಿ ಮತ್ತು ನಾಗಸಂದ್ರ-ಸಿಲ್ಕ್ ಇನ್‌ಸ್ಟಿಟ್ಯೂಟ್ ಮಾರ್ಗ (ಕ್ರಮವಾಗಿ ನೇರಳ ಮತ್ತು ಹಸಿರು ಮಾರ್ಗ) ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ಏರಿಕೆ ಆಗಿಲ್ಲ. ಅಚ್ಚರಿ ಎನಿಸಿದರೂ ಇದು ಸಹ ಸತ್ಯ ಎಂದು ವಿಶ್ಲೇಷಿಸಲಾಗಿದೆ.
ವೈಟ್‌ಫಿಲ್ಡ್ ಮಾರ್ಗ ತೆರೆಯುವಮೊದಲು ಬೈಯಪ್ಪನಹಳ್ಳಿ-ಕೆಂಗೇರಿ (ನೇರಳೆ ಮಾರ್ಗ) ಮಾರ್ಗದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ 2,02,194 ಇತ್ತು. ಅದೇ ಮಾರ್ಚ್ ಕೊನೆಯ ವಾರ 2,07,691ಕ್ಕೆ (ವೈಟ್‌ಫೀಲ್ಡ್ ಮೆಟ್ರೋ ಸವಾರರನ್ನು ಹೊರತುಪಡಿಸಿ) ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಂದರೆ ನೇರಳೆ ಮಾರ್ಗದಲ್ಲಿ ದೈನಂದಿನದ ಸಂಖ್ಯೆಗಿಂತ ಸುಮಾರು 5,500 ಹೆಚ್ಚು ಜನ ಪ್ರಯಾಣ ಮಾಡಿದ್ದಾರೆ.
ಪ್ರಯಾಣಿಕರ ಇಳಿಕೆ, ಕಾಮಗಾರಿ ಪೂರ್ಣಕ್ಕೆ ಆಗ್ರಹ
ಅದೇ ರೀತಿ ನಾಗಸಂದ್ರ ದಿಂದ ಸಿಲ್ಕ ಇನ್ಸ್ಟಿಟ್ಯೂಟ್ ವರೆಗಿನ ಹಸಿರು ಲೈನ್ ಮಾರ್ಗದಲ್ಲಿ ಮಾರ್ಚ್ ಮೊದಲ ವಾರದಲ್ಲಿ 2,12,585 ಮಂದಿ ಪ್ರಯಾಣಿಸಿದ್ದರೆ, ಮಾರ್ಚ್ ಕೊನೆಯ 2,10,784 ಕ್ಕೆ ಇಳಿಕೆ ಆಗಿದೆ. ಇದಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಭೀತಿ, ಬೇಸಿಗೆ ರಜೆಗಳ ಕಾರಣದಿಂದ ಈ ಮಾರ್ಗದಲ್ಲಿ ಜನರ ಓಡಾಟ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಸದ್ಯ ಗ್ರೀನ್ ಲೈನ್ ಮೆಟ್ರೋ ಬಳಕೆದಾರರು ಮೆಜೆಸ್ಟಿಕ್ ನಲ್ಲಿ ಮೆಟ್ರೋ ಬದಲಿಸಿ ನೇರಳೆ ಮಾರ್ಗದ ಮೂಲಕ ಬೈಯಪ್ಪನಹಳ್ಳಿಗೆ ತೆರಳಬೇಕು. ಅಲ್ಲಿಂದ ಫಿಡರ್ ಬಸ್ ಮೂಲಕ ಕೆ.ಆರ್.ಪುರಂಗೆ ಹೋಗಿ ವೈಟ್‌ಫಿಲ್ಟ ತಲುಪುತ್ತಿದ್ದಾರೆ. ಇದು ಕಷ್ಟಕರವಾಗಿದ್ದು, ಶೀಘ್ರವೇ ಬೈಯಪ್ಪನಹಳ್ಳಿ ಮತ್ತು ಕೆ.ಆರ್.ಪುರಂ ನಡುವಿನ ಮಾರ್ಗ ಪೂರ್ಣಗೊಳಿಸಿ ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.

Click it and Unblock the Notifications