KR Pura to Byappanahalli Metro: ಮುಗಿಯುವ ಹಂತದಲ್ಲಿ ಕಾಮಗಾರಿ : ವಿಡಿಯೋ ನೋಡಿ
ಬೆಂಗಳೂರು, ಮೇ 24: ಬಹು ನಿರೀಕ್ಷಿತ ಬೈಯಪ್ಪನಹಳ್ಳಿ-ಕೆಆರ್ ಪುರ ನಡುವಿನ ಮೆಟ್ರೋ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಜುಲೈ 15 ರಂದು ಕಾರ್ಯಾಚರಣೆ ಆರಂಭಿಸಲು ಬಿಎಂಆರ್ ಸಿಎಲ್ ಸಜ್ಜಾಗಿದೆ.
ಕಾಮಗಾರಿ ನಡೆಯುತ್ತಿರುವ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಬಿರುಸಿನಿಂದ ಕಾಮಗಾರಿ ನಡೆಯುತ್ತಿದ್ದು ನಿಗದಿತ ಸಮಯಕ್ಕೆ ಮೆಟ್ರೋ ಸಂಚಾರ ಆರಂಭಿಸಲು ಬಿಎಂಆರ್ ಸಿಎಲ್ ಪಣತೊಟ್ಟಿದೆ. ಇದರ ವಿಡಿಯೋ ಹಂಚಿಕೊಂಡಿದ್ದು, ಕಾಮಗಾರಿ ನಡೆಯುತ್ತಿರುವುದನ್ನು ನೋಡಬಹುದಾಗಿದೆ.

ವೈಟ್‌ಫೀಲ್ಡ್‌ಗೆ ನೇರ ಮೆಟ್ರೋ ಸಂಚಾರಕ್ಕೆ ತೊಡಕಾಗಿರುವ ಬೈಯಪ್ಪನಹಳ್ಳಿ-ಕೆಆರ್ ಪುರ ನಡುವಿನ ಮೆಟ್ರೋ ಕಾರ್ಯಾಚರಣೆ ಜುಲೈ 15 ರಂದು ಆರಂಭವಾಗಲಿದೆ. ಈ 2 ಕಿಮೀ ಉದ್ದದ ಮೆಟ್ರೋ ರೈಲು ಮಾರ್ಗ ವಿಸ್ತರಣೆಯು ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಹಸಿರು ಮಾರ್ಗದ ಕೆಆರ್ ಪುರಂ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಹೊರವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.
ಕೆಂಗೇರಿ-ಬೈಯಪ್ಪನಹಳ್ಳಿ ಕಾರಿಡಾರ್ ಅನ್ನು ಇತ್ತೀಚೆಗೆ ನಿರ್ಮಿಸಲಾಗಿರುವ ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ವಿಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಆರಂಭವಾದರೆ, ಪ್ರಯಾಣಿಕರು ಇನ್ನು ಮುಂದೆ ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ನಡುವಿನ ಫೀಡರ್ ಬಸ್‌ಗಳನ್ನು ಅವಲಂಬಿಸುವ ಅಗತ್ಯ ಇರುವುದಿಲ್ಲ.
2 ಕಿಮೀ ಮೆಟ್ರೋ ಸಮಚಾರ ವಿಸ್ತರಣೆ ಮುಗಿದರೆ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ಈ ಮಾರ್ಗವೊಂದರಲ್ಲೆ ಪ್ರತಿನಿತ್ಯ ಒಂದು ಲಕ್ಷಕ್ಕೂ ಅಧಿಕ ಪ್ರಯಾಣಿಕರು ಓಡಾಡಲಿದ್ದಾರೆ. ಬೈಯಪ್ಪನಹಳ್ಳಿ-ಕೆಆರ್ ಪುರ ಭಾಗವು ವಿಶೇಷವಾಗಿ ವೈಟ್‌ಫೀಲ್ಡ್/ಐಟಿಪಿಬಿ ಟೆಕ್ ಕಾರಿಡಾರ್‌ಗೆ ಪ್ರಯಾಣಿಸುವ ಟೆಕ್ಕಿಗಳಿಗೆ ಸಹಾಯ ಮಾಡುತ್ತದೆ.
ಟ್ರಾಫಿಕ್ ಸಮಸ್ಯೆಗೆ ಮುಕ್ತಿ
ಬೈಯಪ್ಪನಹಳ್ಳಿ-ಕೆಆರ್ ಪುರ ಮೆಟ್ರೋ ವಿಭಾಗವು ನಮ್ಮ ಮೆಟ್ರೋ ಅಭಿವೃದ್ಧಿಯಲ್ಲಿ ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಪ್ರತಿನಿತ್ಯ ಒಂದು ಲಕ್ಷ ಜನ ಮೆಟ್ರೋದಲ್ಲಿ ಓಡಾಡುವುದರಿಂದ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಪರಿಹಾರ ಸಿಕ್ಕಂತಾಗುತ್ತದೆ. ಬೆಂಗಳೂರಿಗೆ ವಿಶ್ವದರ್ಜೆಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಮತ್ತಷ್ಟು ಬಲ ಬಂದಂತಾಗುತ್ತದೆ. ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಕಾಯುವ ಕಿರಿಕಿರಿ ತಪ್ಪುವುದರಿಂದ ಈ ಯೋಜನೆ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ.
ಈ ಯೋಜನೆಗಾಗಿ ಒಟ್ಟು 1000 ಕೋಟಿ ರುಪಾಯಿ ವ್ಯಯಿಸಲಾಗಿದೆ. ಬೈಯಪ್ಪನಹಳ್ಳಿ-ಕೆಆರ್ ಪುರ ಮೆಟ್ರೋ ವಿಭಾಗ, ನಮ್ಮ ಮೆಟ್ರೋದ 2 ನೇ ಹಂತದ ವಿಸ್ತರಣೆಯ ಭಾಗವಾಗಿದೆ, ಬೈಯಪ್ಪನಹಳ್ಳಿ, ಹೂಡಿ, ಮಹದೇವಪುರ, ಕೆಆರ್ ಪುರಂ ಮತ್ತು ಕೆಆರ್ ಪುರಂ ಬಸ್ ನಿಲ್ದಾಣ ಸೇರಿದಂತೆ ಆರು ನಿಲ್ದಾಣಗಳನ್ನು ಹೊಂದಿದೆ. ನಿಲ್ದಾಣಗಳನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ.












Click it and Unblock the Notifications