ಸೆ.1ರಿಂದ ಕೆ. ಆರ್. ಮಾರ್ಕೆಟ್ ಓಪನ್; ನಿಯಮ ಪಾಲನೆ ಕಡ್ಡಾಯ
ಬೆಂಗಳೂರು, ಆಗಸ್ಟ್ 30: ಬೆಂಗಳೂರು ನಗರದ ಪ್ರಮುಖ ವಾಣಿಜ್ಯ ಕೇಂದ್ರ ಕೆ. ಆರ್. ಮಾರುಕಟ್ಟೆಯನ್ನು ಸೆಪ್ಟೆಂಬರ್ 1ರಿಂದ ಆರಂಭಿಸಲು ಬಿಬಿಎಂಪಿ ತೀರ್ಮಾನಿಸಿದೆ. ಲಾಕ್ ಡೌನ್ ಘೋಷಣೆ ಮಾಡಿದ ದಿನದಿಂದ ಮಾರುಕಟ್ಟೆಯನ್ನು ಬಂದ್ ಮಾಡಲಾಗಿತ್ತು.
Recommended Video

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆ. ಆರ್. ಮಾರುಕಟ್ಟೆ ತೆರೆಯಲು ಅನುಮತಿ ನೀಡಿದೆ. ಆದರೆ ಬಿಬಿಎಂಪಿ ಹಾಕಿರುವ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ. ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಸ್ಥಳದಲ್ಲಿಯೇ ದಂಡ ಕಟ್ಟಬೇಕು.
ಮಾರುಕಟ್ಟೆ ತೆರೆದರೂ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾರುಕಟ್ಟೆಗೆ ಬರುವ ಜನರು ಸಾಮಾಜಿಕ ಅಂತ ಕಾಪಾಡುವ ಬಗ್ಗೆ ನಿಗಾವಹಿಸಲು ಮಾರ್ಷಲ್‌ಗಳನ್ನು ನೇಮಕ ಮಾಡಲಾಗುತ್ತದೆ.
ಸೆಪ್ಟೆಂಬರ್ 1ರಿಂದ ಕೆ. ಆರ್. ಮಾರುಕಟ್ಟೆ ಓಪನ್?

ಜನರು ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರ ಕಾಪಾಡಿಲ್ಲ ಎಂದರೆ ಮಾರ್ಷಲ್‌ಗಳು ಸ್ಥಳದಲ್ಲಿಯೇ ದಂಡವನ್ನು ಹಾಕಲಿದ್ದಾರೆ. ವ್ಯಾಪಾರಿಗಳಿಗೂ ಹಲವು ಸೂಚನೆಗಳನ್ನು ಬಿಬಿಎಂಪಿ ನೀಡಲಿದೆ.
ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್, ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ಈಗಾಗಲೇ ಕೆ. ಆರ್. ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾರುಕಟ್ಟೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹೆಚ್ಚು ಜನರು ಸೇರುತ್ತಾರೆ, ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗಲಿದೆ ಎಂಬ ಕಾರಣಕ್ಕೆ ಲಾಕ್ ಡೌನ್ ಘೋಷಣೆಯದಾಗ ಕೆ. ಆರ್. ಮಾರುಕಟ್ಟೆಯನ್ನು ಬಂದ್ ಮಾಡಲಾಗಿತ್ತು. ಕಲಾಸಿಪಾಳ್ಯ ಮಾರುಕಟ್ಟೆ ಓಪನ್ ಮಾಡುವ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ.












Click it and Unblock the Notifications