ಡಿಕೆಶಿಗೆ ಇಡಿ ನೋಟಿಸ್: ರಾಜಕೀಯ ಷಡ್ಯಂತ್ರ ಎಂದ ದಿನೇಶ್ ಗುಂಡೂರಾವ್

ಬೆಂಗಳೂರು, ನವೆಂಬರ್ 16: ಇಡಿ, ಐಟಿಯನ್ನು ಅಮಿತ್ ಶಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಡಿಕೆ ಶಿವಕುಮಾರ್ ಅವರಿಗೆ ಇಡಿ ನೋಟಿಸ್ ಜಾರಿ ಮಾಡಿರುವುದು ರಾಜಕೀಯ ಷಡ್ಯಂತ್ರ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಕೆ ಶಿವಕುಮಾರ್ ಅವರ ವಿರುದ್ಧ ಇಡಿ ನೋಟಿಸ್ ಜಾರಿ ಮಾಡಿರುವುದು ಉದ್ದೇಶ ಪೂರ್ವಕ ಸಂಚು, ಇಡಿ ಹಾಗೂ ಐಟಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ, ಐಟಿ ತನಿಖೆಯೆಂದು ಮೂರು ದಿನ ಮನೆಯಲ್ಲಿ ಬಂಧಿಸಿದ್ದರು, ಕಳೆದ ಒಂದು ವರ್ಷದಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವುದು ಗೊತ್ತಾಗಿದೆ. ಡಿಕೆ ಶಿವಕುಮಾರ್ ಹಾಗೂ ಜನಾರ್ದನ ರೆಡ್ಡಿಯವರದ್ದು ಬೇರೆ ಬೇರೆ ವಿಚಾರ, ರೆಡ್ಡಿ ಜೈಲಿಗೆ ಹೋಗಿ ಬಂದಿದ್ದರು, ಮತ್ತೆ ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ ಆದರೆ ಡಿಕೆ ಶಿವಕುಮಾರ್ ಬೇರೆ ಕಾನೂನು ಎಲ್ಲರಿಗೂ ಒಂದೆ ಶಿವಕುಮಾರ್ ತಪ್ಪು ಮಾಡಿದರೆ ಬಂಧಿಸಲಿ ಅದನ್ನು ಬಿಟ್ಟು ಕಿರುಕುಳ ನೀಡುವುದು ಬೇಡ, ಕಿರುಕುಳ ಕೊಟ್ಟಷ್ಟೂ ಅವರು ಮತ್ತಷ್ಟು ಎತ್ತರಕ್ಕೆ ಹೋಗುತ್ತಾರೆ ಎಂದರು.

KPCC prez slams ED was become Modi mouth piece

ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು ನವೆಂಬರ್ ಅಂತ್ಯದೊಳಗೆ ಸಂಪುಟ ವಿಸ್ತರಣೆ ಮಾಡಲಾಗುತ್ತದೆ, ನಿಗಮ-ಮಂಡಳಿ ಅಧ್ಯಕ್ಷ, ನಿರ್ದೇಶಕರ ನೇಮಕವೂ ಆಗಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+