ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜ್ಜಿಯ ಕಾಸು ಕೇಳಿದಾಗ ಸಿಕ್ಕಿ ಬಿದ್ದ ಬೆಂಗಳೂರಿನ ನಕಲಿ ಪೊಲೀಸ್!

|
Google Oneindia Kannada News

ಬೆಂಗಳೂರು, ಜನವರಿ 10; ಆಕೆ ತಾನು ಪೊಲೀಸ್ ಎಂದು ಹೇಳಿಕೊಂಡು ಓಡಾಡುತ್ತಿದ್ದಳು. ರಸ್ತೆ ಬದಿ ವ್ಯಾಪಾರ ಮಾಡುವವರ ಬಳಿಕ ಬಜ್ಜಿ, ತರಕಾರಿ, ಬಿರಿಯಾನಿಯನ್ನು ಬಿಟ್ಟಿಯಾಗಿ ತಿಂದು ತೇಗುತ್ತಿದ್ದಳು. ಅಲ್ಲದೇ ಪಾರ್ಸೆಲ್ ಸಹ ಕಟ್ಟಿಸಿಕೊಂಡು ದುಡ್ಡು ಕೊಡದೇ ಓಡಾಡುತ್ತಿದ್ದಳು, ಹಣ ಕೇಳಿದರೆ ಬೆದರಿಕೆ ಹಾಕುತ್ತಿದ್ದಳು.

ಮಹಿಳೆ ಪುಕ್ಕಟೆಯಾಗಿ ಬಜ್ಜಿ ತಿಂದು ಮತ್ತೆ ಪಾರ್ಸೆಲ್ ಕೇಳಿದಾಗ ವ್ಯಾಪಾರಿ 100 ರೂ. ಹಣ ಕೇಳಿದ್ದಾನೆ. ಆಗ ಪೊಲೀಸರ ಬಳಿ ಹಣ ಕೇಳುತ್ತಿಯಾ? ಎಂದು ಗಲಾಟೆ ಮಾಡಿದ್ದಾಳೆ. ಆಗ ಗಸ್ತು ಪೊಲೀಸರನ್ನು ಕರೆಸಿದಾಗ ಮಹಿಳೆ ನಕಲಿ ಪೊಲೀಸ್ ಎಂಬುದು ಬೆಳಕಿಗೆ ಬಂದಿದೆ.

ಸಾಲದ ನೆಪದಲ್ಲಿ 1 ಕೋಟಿ ರೂ ನಕಲಿ ನೋಟು ನೀಡಿದ್ದ ಮೂವರ ಬಂಧನ ! ಸಾಲದ ನೆಪದಲ್ಲಿ 1 ಕೋಟಿ ರೂ ನಕಲಿ ನೋಟು ನೀಡಿದ್ದ ಮೂವರ ಬಂಧನ !

ಇದು ಉದ್ಯಾನಗರಿ ಬೆಂಗಳೂರಿನ ಬ್ಯಾಟರಾಯನಪುರ, ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ತಾನು ಪೊಲೀಸ್ ಎಂದು ಓಡಾಡುತ್ತಿದ್ದ ಸುಮಾರು 50 ವರ್ಷ ವಯಸ್ಸಿನ ಮಹಿಳೆಯ ಕಥೆ. ಈ ನಕಲಿ ಪೊಲೀಸ್‌ಳನ್ನು ಕೊಡಿಗೆಹಳ್ಳಿ ಪೊಲೀಸರು ಈಗ ಬಂಧಿಸಿದ್ದಾರೆ.

Video; ಗೃಹ ಸಚಿವರು ಹೊಗಳಿದ ಸಂಚಾರಿ ಪೊಲೀಸ್ ಸುರೇಶ್‌ ಯಾರು? Video; ಗೃಹ ಸಚಿವರು ಹೊಗಳಿದ ಸಂಚಾರಿ ಪೊಲೀಸ್ ಸುರೇಶ್‌ ಯಾರು?

Kodigehalli Police Arrested Woman Who Pose As Police

ಒಂದು ವರ್ಷದಿಂದ ಕಾಟ; ಆರೋಪಿಯ ಹೆಸರು ಲೀಲಾವತಿ. ಸುಮಾರು ಒಂದು ವರ್ಷದಿಂದ ಈಕೆ ಬೀದಿ ಬದಿ ವ್ಯಾಪಾರಿಗಳಿಗೆ ತಾನು ಪೊಲೀಸ್ ಎಂದು ಕಾಟ ಕೊಡುತ್ತಿದ್ದಳು.

ಕರ್ನಾಟಕ: ಒಂದೇ ವರ್ಷದಲ್ಲಿ 100 ಪೊಲೀಸ್ ಠಾಣೆ ನಿರ್ಮಾಣ: ಸಿಎಂ ಭರವಸೆಕರ್ನಾಟಕ: ಒಂದೇ ವರ್ಷದಲ್ಲಿ 100 ಪೊಲೀಸ್ ಠಾಣೆ ನಿರ್ಮಾಣ: ಸಿಎಂ ಭರವಸೆ

ಬಿಟ್ಟಿಯಾಗಿ ತರಕಾರಿ ತೆಗೆದುಕೊಂಡು ಹೋಗುತ್ತಿದ್ದಳು. ವ್ಯಾಪಾರಿಗಳ ಬಳಿ ಹೋಗಿ ಬಜ್ಜಿ, ಬಿರಿಯಾನಿ ತಿನ್ನುತ್ತಿದ್ದಳು, ಹಣವನ್ನೂ ಕೊಡದೇ ಮನೆಗೆ ಸಹ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದಳು.

ಶುಕ್ರವಾರ ಶೇಕ್ ಸಲಾಂ ಎಂಬುವವರ ಬಜ್ಜಿ ಅಂಗಡಿಯಲ್ಲಿ ಬಿಟ್ಟಿಯಾಗಿ ಬಜ್ಜಿ ತಿಂದಿದ್ದಾಳೆ. ಬಳಿಕ ಮನೆಗೆ ಪಾರ್ಸೆಲ್ ಕೇಳಿದ್ದಾಳೆ. ಆಗ ಅವರು 100 ರೂ. ನೀಡುವಂತೆ ಕೇಳಿದ್ದಾರೆ. ಆಗ ಗಲಾಟೆ ನಡೆದಿದೆ.

ಲೀಲಾವತಿ ವರ್ತನೆ ನೋಡಿದ ಸ್ಥಳದಲ್ಲಿದ್ದವರು 112 ಗಸ್ತು ವಾಹನಕ್ಕೆ ಫೋನ್ ಮಾಡಿದ್ದಾರೆ. ಆದರೆ ಓಡಲು ಯತ್ನಿಸಿದ ಆಕೆಯನ್ನು ಹಿಡಿಯಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಆಕೆ ನಕಲಿ ಪೊಲೀಸ್‌ ಎಂಬುದು ಸಾಬೀತಾಗಿದೆ.

Kodigehalli Police Arrested Woman Who Pose As Police

ಕೌಟುಂಬಿಕ ಹಿನ್ನಲೆ; ಲೀಲಾವತಿ ವಿದ್ಯಾವಂತೆ. ಪತಿ ಇಂಜಿನಿಯರ್, ಮಗಳು ವೈದ್ಯ ಮತ್ತು ಮಗ ಇಂಜಿನಿಯರ್. ಆರ್ಥಿಕವಾಗಿ ಕುಟುಂಬ ಸದೃಢವಾಗಿದ್ದರೂ ಸಹ ಈಕೆ ತಾನು ಪೊಲೀಸ್ ಎಂದು ಹೇಳಿಕೊಂಡು ಬೀದಿ ಬದಿ ವ್ಯಾಪಾರಿಗಳನ್ನು ಹೆದರಿಸಿ ಬಿಟ್ಟಿಯಾಗಿ ಆಹಾರ, ತರಕಾರಿ ತೆಗೆದುಕೊಂಡು ಹೋಗುತ್ತಿದ್ದಳು.

ಬಜ್ಜಿ, ಗೋಬಿ ಮಂಚೂರಿ, ತರಕಾರಿ ವ್ಯಾಪಾರಿಗಳು, ಬೇಕರಿ, ಪಾನಿಪೂರಿ ಮಾರಾಟ ಮಾಡುವವರಿಗೆ ಲೀಲಾವತಿ ಹಲವು ದಿನಗಳಿಂದ ಕಾಟ ಕೊಡುತ್ತಿದ್ದಳು. ಇವಳು ಪೊಲೀಸ್ ಎಂದು ನಂಬಿದ್ದ ವ್ಯಾಪಾರಿಗಳು ಸಹ ಆಕೆ ಹೇಳಿದಂತೆ ಕೇಳುತ್ತಿದ್ದರು.

ಆದರೆ ಈಗ ಲೀಲಾವತಿ ದುಡ್ಡು ಕೊಡದೆ ಕಿರಿಕ್ ಮಾಡಿದಾಗ ಆಕೆಯ ನಿಜಬಣ್ಣ ಬಯಲಾಗಿದೆ. ಆಕೆ ನಕಲಿ ಪೊಲೀಸ್ ಎಂದು ಗೊತ್ತಾಗಿದ್ದು, ಅಸಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

English summary
Bengaluru Kodigehalli police arrested woman who said that she is police officer. She collected money food items from street vendors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X