Kodi Mutt Seer Prediction: ರಾಜ್ಯ, ಕೇಂದ್ರ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲದ ಕೋಡಿಮಠ ಶ್ರೀ ಭವಿಷ್ಯ..
Kodi Mutt Seer Prediction: ರಾಜಕೀಯ, ಮಳೆ ಬಗ್ಗೆ ಭವಿಷ್ಯ ನುಡಿಯುವುದರಲ್ಲಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರಸಿದ್ಧಿ ಆಗಿದ್ದಾರೆ. ಇನ್ನೂ ಇದೀಗ ಅವರ ರಾಜ್ಯ, ಕೇಂದ್ರ ರಾಜಕೀಯದ ಅಲ್ಲೋಲ ಕಲ್ಲೋಲದ ಭವಿಷ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೋಡಿಮಠ ಶ್ರೀಗಳು ನುಡಿಯುವ ಭವಿಷ್ಯಗಳು ನಿಜ ಆಗಲಿವೆ ಎನ್ನುವ ನಂಬಿಕೆ ಭಕ್ತಗಣದ್ದಾಗಿದೆ. ಅದರಂತೆಯೇ ಈಗಾಗಲೇ ಹಲವು ಭವಿಷ್ಯವಾಣಿಗಳು ನಿಜವಾಗಿರುವ ಉದಾಹರಣೆಗಳಿವೆ. ಇದೀಗ ಅವರ ರಾಜ್ಯ ಹಾಗೂ ಕೇಂದ್ರ ರಾಜಕೀಯದ ಅಲ್ಲೋಲ ಕಲ್ಲೋಲದ ಭವಿಷ್ಯವಾಣಿಯೊಂದು ಸಖತ್ ಟ್ರೆಂಡ್ ಆಗಿದೆ.

ರಾಜ್ಯದಲ್ಲಿ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಗ್ಗೆ ಕೋಡಿಮಠ ಶ್ರೀಗಳು ಪ್ರತಿಕ್ರಿಯೆ ನೀಡಿದ್ದು, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಅಂತಾ ಈ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆಯೇ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ನಡೆದುಹೋಗಿದೆ ಎಂದು ತಿಳಿಸಿದರು.
ಈ ಹಿಂದೆ ಕೋಡಿಶ್ರೀಗಳು ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಹೇಳಿದ್ದರು. ಅದರಂತೆಯೇ ಇದೀಗ ಅವರ ಭವಿಷ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೇಂದ್ರದಲ್ಲಿ ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಹಿಂದೆ ನುಡಿದಿದ್ದ ಭವಿಷ್ಯ ನಿಜ ಆದಂತಾಗಿದೆ ಎಂದು ಹೇಳಿದರು.
ನೀಚನಾದವನು ದೊರೆ ಆದ್ರೆ, ಹೇಡಿಯು ಸೇನಾ ನಾಯಕನಾದ್ರೆ, ದಡ್ಡ ಗುರುವಾದ್ರೆ ಆ ರಾಜ್ಯ ನಾಶವಂತೂ ಖಚಿತ. ಈ ಮೂರು ಒಂದು ರಾಜ್ಯಕ್ಕೆ ತುಂಬಾ ಮುಖ್ಯ ಎಂದು ಕೋಡಿಮಠ ಸ್ವಾಮೀಜಿ ಹೇಳಿದ್ದಾರೆ. ಸದ್ಯ ಕೆ.ಎನ್.ರಾಜಣ್ಣ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ.
ಇನ್ನು ಮುಂಗಾರು ಅಧಿವೇಶನದ ಕಲಾಪದಲ್ಲಿಯೂ ಸಹ ಶಾಸಕ ಕೆ.ಎನ್.ರಾಜಣ್ಣ ಅವರ ಬಗ್ಗೆ ಚರ್ಚೆಗಳು ಆಗುತ್ತಲಿವೆ. ರಾಜಣ್ಣ ಅವರ ದಿಢೀರ್ ರಾಜೀನಾಮೆಯಿಂದ ತುಂಬಾ ಪ್ರಶ್ನೆಗಳು ಎದ್ದಿವೆ. ರಾಜಣ್ಣ ಅವರನ್ನು ಒಂದೆರಡು ವಿಚಾರಕ್ಕಾಗಿ ವಜಾ ಮಾಡಿಲ್ಲ. ಬದಲಿಗೆ ರಾಹುಲ್ ಗಾಂಧಿ ಅವರು ಮತಗಳ್ಳತನ ಅಸ್ತ್ರಕ್ಕೆ ವಿರುದ್ಧ ಮಾತನಾಡಿದ್ದಕ್ಕೆ ರಾಜಣ್ಣ ಅವರನ್ನು ವಜಾ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕೆ.ಎನ್.ರಾಜಣ್ಣ ಅವರು ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಎಲ್ಲಂದರಲ್ಲಿ ಹೇಳಿಕೆ ನೀಡುತ್ತಲಿದ್ದರು. ಇದನ್ನೇ ದಳವಾಗಿ ಬಳಸಿಕೊಂಡ ಬಿಜೆಪಿ ಸರ್ಕಾರದ ವಿರುದ್ಧ ಭಾರೀ ಟೀಕೆಗಳನ್ನು ಮಾಡಲಿ ಶುರು ಮಾಡಿತು. ನಂತರ ಬಳಿಕ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಸೆಪ್ಟೆಂಬರ್ ಕ್ರಾಂತಿಗೆ ನಾಂದಿ ಹಾಡಿತ್ತು. ಇದೀಗ ಇದೇ ಕಾರಣಕ್ಕೆ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಹೈಕಮಾಂಡ್ ರಾಜಿನಾಮೆ ನೀಡುವಂತೆ ಒತ್ತಾಯಿಸಿದೆ ಎನ್ನಲಾಗಿದೆ. ಸದ್ಯ ರಾಜಣ್ಣ ರಾಜೀನಾಮೆ ರಾಜ್ಯ ರಾಜಕಾಕೀಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಲೇಬೇಕೆಂದು ಹಠ ಹಿಡಿದಿದ್ದ ಕೆ.ಎನ್.ರಾಜಣ್ಣ ಅವರು ರಣದೀಪ್ ಸುರ್ಜೇವಾಲ ಜೊತೆಗೆ ಸಭೆ ಕರೆಯಲಾಗಿತ್ತು. ಆದರೆ, ಆ ವೇಳೆ ರಾಜಣ್ಣ ವಿದೇಶಕ್ಕೆ ಹೋಗುವ ಮೂಲಕ ಸಭೆಗೆ ಗೈರಾಗಿದ್ದರು. ಇದು ಸಹ ಅವರ ವಜಾಗೆ ಒಂದು ಕಾರಣ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಒಟ್ಟಿನಲ್ಲಿ ಕೋಡಿಮಠ ಶ್ರೀಗಳು ಹೇಳಿದಂತೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುತ್ತಿದೆ.












Click it and Unblock the Notifications