ಹಿಂದಿ ಬ್ಯಾನರ್ ವಿವಾದ, #ReleaseKannadaActivists ಟ್ರೆಂಡಿಂಗ್

ಬೆಂಗಳೂರು, ಆಗಸ್ಟ್ 19: ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿ ಜೈನ ಸಮುದಾಯದವರು ಹಿಂದಿ ಭಾಷೆಯಲ್ಲಿ ಹಾಕಲಾಗಿದ್ದ ಬ್ಯಾನರ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಕನ್ನಡಪರ ಹೋರಾಟಗಾರರ ಬಂಧನವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್‌ ವಿವಾದದ ಬಗ್ಗೆ ಚರ್ಚೆ ಜೋರಾಗಿದ್ದು, ಕನ್ನಡ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿರುವ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದೆ.

ಇನ್‌ಫೆಂಟ್ರಿ ರಸ್ತೆಯ ಬಳಿ ಇರುವ ಮಾರವಾಡಿಗಳ ಗಣೇಶ್ ಬಾಗ್ ಪ್ರಾರ್ಥನಾ ಮಂದಿರದ ಬಳಿ ಹಾಕಲಾಗಿದ್ದ ಹಿಂದಿ ಭಾಷೆಯ ಬ್ಯಾನರ್ ಬಗ್ಗೆ ಕನ್ನಡ ಪರ ಸಂಘಟನೆಯೊಂದು ಆಕ್ಷೇಪ ವ್ಯಕ್ತಪಡಿಸಿದೆ. ನಂತರ ಬ್ಯಾನರ್ ಹರಿದು ಹಾಕಿರುವ ಘಟನೆ ನಡೆದಿದೆ. ಜೈನ ಸಮುದಾಯದ ಯುವಕರು ಸಹ ಬ್ಯಾನರ್ ಹರಿದಿರುವುದನ್ನು ಖಂಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಬಂದ್ ನಡೆಸಬೇಕು ಎಂದು ಒತ್ತಾಯಿಸಿದ್ದರು. ಇದು ಕನ್ನಡಿಗರನ್ನು ಕೆರಳಿಸಿದೆ. ಈ ನಡುವೆ ಕನ್ನಡ ಪರ ಸಂಘಟನೆಯವರನ್ನು ಕರ್ಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ. ಕೋಮು ಸೌಹಾರ್ದತೆಗೆ ಧಕ್ಕೆ ತಂದ ಪ್ರಕರಣ ದಾಖಲು ಮಾಡಿದ್ದಾರೆ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಜೈಲಿಗೆ ಕಳಿಸಿದ್ದಾರೆ. ಸದ್ಯ ಟ್ವಿಟ್ಟರ್ ನಲ್ಲಿ #ReleaseKannadaActivists ಟ್ರೆಂಡಿಂಗ್ ನಲ್ಲಿದೆ.

ಪ್ರತಿಭಟನೆಗೆ ಮುಂದಾದ ಕನ್ನಡ ಸಂಘಟನೆ

ಪ್ರತಿಭಟನೆಗೆ ಮುಂದಾದ ಕನ್ನಡ ಸಂಘಟನೆ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೈನ ಸಮುದಾಯ, "ಚಾರ್ತುಮಾಸದ ಆಚರಣೆಗೆ ಕನ್ನಡಿಗರು ಬರುವುದಿಲ್ಲ. ಆದ್ದರಿಂದ, ಹಿಂದಿ ಬ್ಯಾನರ್ ಇದೆ" ಎಂದಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ, ಡಿವಿ ಸದಾನಂದ ಗೌಡ ಅವರು ಜೈನ ಸಮುದಾಯದ ಪರ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಕನ್ನಡಿಗರು ಇವರಿಬ್ಬರ ವಿರುದ್ಧ ಕಿಡಿಕಾರಿದ್ದಾರೆ. ಜೈನ ಸಮುದಾಯದ ಕನ್ನಡ ವಿರೋಧಿ ಧೋರಣೆ, ಕನ್ನಡ ಪರ ಹೋರಾಟಗಾರರ ಬಂಧನ ಖಂಡಿಸಿ, ಪ್ರತಿಭಟನೆ ನಡೆಸಲು ಕರ್ನಾಟಕ ರಣಧೀರ ಪಡೆ, ಮುಂತಾದ ಸಂಘಟನೆಗಳು ಮುಂದಾಗಿದೆ.

ಬ್ಯಾನರ್ ಬಗ್ಗೆ ಮೇಯರ್ ಗೆ ಪ್ರಶ್ನೆ

ಬೆಂಗಳೂರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಬ್ಯಾನರ್, ಹೋರ್ಡಿಂಗ್, ಫ್ಲೆಕ್ಸ್ ಹಾಕುವುದರ ಬಗ್ಗೆ ಹಾಗೂ ಶೇ60ರಷ್ಟು ಕನ್ನಡ ಬಳಕೆಯಾಗದಿರುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಬಿಬಿಎಂಪಿ ಮೇಯರ್ ಗೆ ಪ್ರಶ್ನೆ ಮಾಡಲಾಗಿದೆ.

ತೇಜಸ್ವಿ ಸೂರ್ಯ ಬಗ್ಗೆ ಪ್ರತಾಪ್ ಗೆ ದೂರು

ತೇಜಸ್ವಿ ಸೂರ್ಯರನ್ನು ತಮ್ಮ ಎಂದು ಮೆರೆಸುತ್ತಾ ಇದ್ದರಲ್ಲ ಅವರು ಕನ್ನಡ ಪರ ಹೋರಾಟಗಾರರನ್ನು ರೌಡಿಗಳು ಎಂದಿದ್ದಾರೆ, ಅವರಿಗೆ ಬುದ್ಧಿ ಹೇಳಿ ಎಂದು ಪ್ರತಾಪ್ ಸಿಂಹ ಅವರಲ್ಲಿ ಕೇಳಿಕೊಂಡ ಉದಯ ಹಾಸನ.

ಯಡಿಯರಪ್ಪನವರ ಮೇಲೆ ಕನ್ನಡಿಗರಿಗೆ ನಂಬಿಕೆ

ಕನ್ನಡಪರ ಹೋರಾಟಗಾರರ ಮೇಲೆ ಹಾಕಿದ ಕೇಸ್ ಮೊದಲು ತೆಗೆಯಿರಿ ಯಡಿಯರಪ್ಪನವರೆ ನಿಮ್ಮ ಮೇಲೆ ಕನ್ನಡಿಗರು ತುಂಬಾ ನಂಬಿಕೆ ಇಟ್ಟಿದ್ದರು ಈ ನಿಮ್ಮ ಸರಕಾರ ಆರು ಕೋಟಿ ಕನ್ನಡಿಗರು ತಲೆ ತಗ್ಗಿಸುವಂತೆ ಮಾಡಿದೆ.

ಜಯನಗರ ಬಡಾವಣೆಯಲ್ಲಿ ಜೈನ ದೇಗುಲ

ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಹಂತದಲ್ಲಿರುವ ಜೈನ ದೇವಾಲಯದ ಮುಂಭಾಗದಲ್ಲಿ ಹಿಂದಿ ಬ್ಯಾನರ್ ಕಂಡು, ಚಿತ್ರ ತೆಗೆದು ಟ್ವೀಟ್ ಮಾಡಿದ ಕೀರ್ತಿ ಕುಮಾರ್.

ಜೈನರಿಂದ ಕೂಡಾ ಕನ್ನಡಕ್ಕಾಗಿ ಆಗ್ರಹ

ಜೈನರಿಂದ ಕೂಡಾ ಕನ್ನಡಕ್ಕಾಗಿ ಆಗ್ರಹ ಕೇಳಿ ಬಂದಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಜೈನ ಸಮುದಾಯದವರೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+