ನಮ್ಮ ಮೆಟ್ರೋ ನಿಲ್ದಾಣಗಳ ಬಳಿಯಿರುವ ಶಾಪಿಂಗ್ ಮಾಲ್‌ಗಳಿವು- ಸಂಪೂರ್ಣ ಮಾಹಿತಿ ಇಲ್ಲಿದೆ
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ವೀಕೆಂಡ್‌ನಲ್ಲಿ ಬಹುತೇಕ ಮಂದಿ ಪಾರ್ಟಿಗಳಲ್ಲಿ ತೊಡಗಿದರೆ, ಇನ್ನು ಕೆಲವರು ಎಲ್ಲಾ ಕೆಲಸಗಳನ್ನು ಬದಗೊತ್ತಿ ಶಾಪಿಂಗ್ ಮಾಡಲು ಕಾತರದಿಂದ ಕಾಯುತ್ತಿರುತ್ತಾರೆ. ಹಾಗಾದರೆ ನೀವು ಒಂದು ವೇಳೆ ಸಮಯ ಉಳಿತಾಯ ಮಾಡಿ, ಹೆಚ್ಚು ಕಾಲ ಈ ಶಾಪಿಂಗ್ ಮಾಡಲು ಬಯಸಿದ್ದರೆ ನಿಮಗೆ ಸೂಕ್ರ ಶಾಪಿಂಗ್ ಮಾಲ್‌ಗಳು ಇಲ್ಲಿವೆ ನೋಡಿ.
ಬೆಂಗಳೂರು ಟ್ರಾಫಿಕ್ ಜಾಮ್‌ಗೆ ಹೆಸರಿವಾಸಿಯಾಗಿದ್ದು, ಇದರಿಂದ ಜನರು ವೀಕೆಂಡ್‌ನಲ್ಲಿ ಶಾಪಿಂಗ್ ಯೋಜನೆಯನ್ನೇ ಮುಂದೂಡಿಬಿಡುತ್ತಾರೆ. ಹಾಗಾದರೆ ನೀವು ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಂಡು ಮೆಟ್ರೋ ನಿಲ್ದಾಣಗಳ ಬಳಿಯಿರುವ ಈ ಫೇಮಸ್ ಶಾಪಿಂಗ್ ಮಾಲ್‌ಗಳಲ್ಲಿ ಶಾಪಿಂಗ್ ಮಾಡುತ್ತಾ ಹೆಚ್ಚಿನ ಸಮಯ ಕಳೆಯಬಹುದಾಗಿದೆ. ಹಾಗಾದರೆ ಇಲ್ಲಿವೆ ನೋಡಿ ನಮ್ಮ ಮೆಟ್ರೋ ನಿಲ್ದಾಣಗಳ ಬಳಿಯಿರುವ ಶಾಪಿಂಗ್ ಮಾಲ್‌ಗಳ ಸಂಪೂರ್ಣ ವಿವರ.

1. ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಮಂತ್ರಿ ಮಾಲ್ ಬೆಂಗಳೂರಿನ ಎರಡನೇ ಅತೀದೊಡ್ಡ ಶಾಪಿಂಗ್ ಮಾಲ್ ಆಗಿದೆ. ಇಲ್ಲಿಗೆ ಮಂತ್ರಿ ಸ್ಕ್ವಯರ್ ಮೆಟ್ರೋ ನಿಲ್ದಾಣ ಸಮೀಪದಲ್ಲಿದೆ. ಇದು ಬೆಳಗ್ಗೆ 10ಕ್ಕೆ ತೆರೆಯಲಿದ್ದು, ರಾತ್ರಿ 10ಕ್ಕೆ ಮುಚ್ಚಲಿದೆ. ಇನ್ನು ಈ ಮಾಲ್ ದೊಡ್ಡ ದೊಡ್ಡ ಬ್ರಾಂಡ್‌ಗಳಿಗೆ ನೆಲೆಯಾಗಿದ್ದು, ಬಟ್ಟೆ, ಸ್ಯಾಂಡಲ್, ಎಲೆಕ್ಟ್ರಾನಿಕ್ ಐಟಂಗಳು ಸೇರಿದಂತೆ ಇನ್ನುಳಿದ ವಸ್ತುಗಳನ್ನು ಇಲ್ಲಿ ಶಾಪಿಂಗ್ ಮಾಡಲಾಬಹುದಾಗಿದೆ.
ಮಲ್ಲೇಶ್ವರಂಲ್ಲಿರುವ ಈ ಮಂತ್ರಿ ಮಾಲ್ ಬೆಂಗಳೂರಿನ ಎರಡನೇ ಅತಿದೊಡ್ಡ ಮಾಲ್‌ಗಳಲ್ಲಿ ಒಂದಾಗಿದೆ. ಇದು ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದ ಮೂಲಕ ಮೆಟ್ರೋ ರೈಲು ಸಂಪರ್ಕವನ್ನು ಹೊಂದಿದೆ.
* ಸ್ಥಳ: ಮಲ್ಲೇಶ್ವರಂ, ಬೆಂಗಳೂರು
* ಆರಂಭ: 2010
* ನಿರ್ಮಾಣ: ಮಂತ್ರಿ ಡೆವಲಪರ್ಸ್
* ಮಳಿಗೆಗಳ ಸಂಖ್ಯೆ : 252
* ಮಹಡಿಗಳ ಸಂಖ್ಯೆ: 3
2. ಓರಿಯನ್ ಮಾಲ್ ರಾಜಾಜಿನಗರದಲ್ಲಿದ್ದು, ಅಪ್ಯಾರಲ್ ಬ್ರಾಂಡ್‌ಗಳು, ಈವೆಂಟ್‌ಗಳು, ವಾಟರ್‌ಸೈಡ್ ವಾಯುವಿಹಾರ, ಸ್ಪಾಗಳು, ಫುಡ್ ಕೋರ್ಟ್ ಸೇರಿದಂತೆ ಇನ್ನಿತರ ಸೌಲಭ್ಯಗಳು ಇಲ್ಲಿ ಇವೆ.
* ಸಮೀಪದ ಮೆಟ್ರೋ ನಿಲ್ದಾಣ: ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಸ್ಟೇಷನ್
* ಸಮಯ: ಬೆಳಿಗ್ಗೆ 10ಕ್ಕೆ ತೆರೆಯಲಿದ್ದು ರಾತ್ರಿ 10ಕ್ಕೆ ಕ್ಲೋಸ್ ಆಗಲಿದೆ.
3. ಮೆಟ್ರೋ ಸಮೀಪದಲ್ಲಿರುವ ಮಾಲ್‌ಗಳಲ್ಲಿ ಜಿಟಿ ವರ್ಲ್ಡ್ ಮಾಲ್ ಕೂಡ ಒಂದಾಗಿದ್ದು, ಇಲ್ಲಿ ಶಾಪಿಂಗ್, ಮನರಂಜನೆ, ಸಿನಿಮಾ, ರುಚಿಯಾದ ಆಹಾರ ಸವಿಯಲು ಸೇರಿದಂತೆ ಇನ್ನಿತರ ಚಟುವಟಿಕೆಗಳು ಕೂಡ ಲಭ್ಯವಿವೆ.
* ಸಮೀಪದ ಮೆಟ್ರೋ ನಿಲ್ದಾಣ: ಮಾಗಡಿ ರೋಡ್ ಮೆಟ್ರೋ ಸ್ಟೇಷನ್
* ಸಮಯ: ಬೆಳಗ್ಗೆ 10ಕ್ಕೆ ತೆರಲಿದ್ದು, ರಾತ್ರಿ 10ಕ್ಕೆ ಮುಚ್ಚಲಿದೆ.
4. ಬೆಂಗಳೂರಿನ ಕೋಣನಕುಂಟೆಯ ಬಳಿಯಿರುವ ಫೋರಮ್ ಸೌತ್ ಬೆಂಗಳೂರು ಮಾಲ್ ವೀಕೆಂಡ್ ಕಳೆಯಲು ಉತ್ತಮ ಶಾಪಿಂಗ್ ಮಾಲ್ ಆಗಿದೆ. ಇಲ್ಲಿ ಶಾಪಿಂಗ್ ಮಾಡಲು ಮತ್ತು ರುಚಿಕರವಾದ ಇಟಾಲಿಯನ್ ಆಹಾರ ಸೇವಿಸಲು ಉತ್ತಮ ಆಯ್ಕೆಯಾಗಿದೆ.
* ಸ್ಥಳ: ಕೋಣನಕುಂಟೆ
* ಸಮೀಪದ ಮೆಟ್ರೋ ನಿಲ್ದಾಣ: ಕೋಣನಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣ
* ಸಮಯ: ಬೆಳಗ್ಗೆ 10ಕ್ಕೆ ತೆರೆಯಲಿದ್ದು, ರಾತ್ರಿ 10ಕ್ಕೆ ಮುಚ್ಚಲಿದೆ.
5. ಎಂ.ಜಿ ರಸ್ತೆಯಲ್ಲಿರುವ ಲಿಡೋ ಮಾಲ್ ಮನರಂಜನೆ, ಶಾಪಿಂಗ್‌ಗೆ ಉತ್ತಮ ಮಾಲ್ ಆಗಿದ್ದು, ಇದು ಮಹತ್ಮಾ ಗಾಂಧಿ (ಎಂ.ಜಿ.ರಸ್ತೆ) ಮೆಟ್ರೋ ಸಮೀಪ ಇದೆ.












Click it and Unblock the Notifications