BMTC Digital Bus Pass: ಬಿಎಂಟಸಿ ಬಸ್ ಡಿಜಿಟಲ್ ಪಾಸ್ ದರಗಳ ವಿವರ ತಿಳಿಯಿರಿ
BMTC Digital Bus Pass: ರಾಜ್ಯ ರಾಜಧಾನಿ ಬೆಂಗಳೂರು ಜನರ ಜೀವನಾಡಿ ಸಾರಿಗೆಗಳಲ್ಲಿ ಬಿಎಂಟಿಸಿ ಕೂಡ ಒಂದಾಗಿದೆ. ಈ ಸಾರಿಗೆ ಪ್ರತಿನಿತ್ಯ ಸಾವಿರಾರು ಜನ ಪ್ರಯಾಣ ಮಾಡುತ್ತಾರೆ. ಅಲ್ಲದೆ, ಈ ಸಾರಿಗೆಯೂ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿದೆ. ಇದೀಗ ಡಿಜಿಟಲ್ ಪಾಸ್ ಪರಿಚಯಿಸಿದೆ. ಹಾಗಾದರೆ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಗರದ ಸಾರಿಗೆಯಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೂ ಸಂಚರಿಸುವ ಮೂಲಕ ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿರುತ್ತವೆ.

ಇನ್ನು ಬಿಎಂಟಿಸಿಯಲ್ಲಿ ಸಾಮಾನ್ಯ ಬಸ್‌ಗಳಿಂದ ಹಿಡಿದು, ವೋಲ್ವೋ, ವಜ್ರ ಬಸ್‌ಗಳು ಕೂಡ ಲಭ್ಯ ಇವೆ. ಮೊದಲೆಲ್ಲ ದಿನದ ಪಾಸ್ ವಾರದ ಪಾಸ್ ಹಾಗೂ ಮಾಸಿಕ ಪಾಸ್‌ಗಳನ್ನು ಪಡೆಯಲು ಪ್ರಯಾಣಿಕರು ಕ್ಯೂನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ ದಿನಕಳೆದಂತೆ ಪ್ರಯಾಣಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುವಂತಹ ವ್ಯವಸ್ಥೆ ಜಾರಿಯಾಯಿತು.
ಆದರೆ ಇದೀಗ ಬಿಎಂಟಿಸಿ ದಿನದ ಪಾಸ್, ವಾರದ ಪಾಸ್ ಹಾಗೂ ತಿಂಗಳಿನ ಪಾಸ್‌ಗಳು ಪ್ರಯಾಣಿಕರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಮತ್ತು ನಗದು ರಹಿತ, ಕಾಗದ ರಹಿತ ವಹಿವಾಟಿಗಾಗಿ ಸೆಪ್ಟೆಂಬರ್ 15ರಿಂದ ಡಿಜಿಟಲ್ ವ್ಯವಸ್ಥೆಯಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಬಸ್ ಪಾಸ್ ವಿತರಣೆ ಮಾಡಲು ನಿರ್ಧರಿಸಿದೆ.
ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ "ಟುಮಾಕ್ ಆ್ಯಪ್" (Tummoc App) ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ದಿನದ ಪಾಸ್, ವಾರದ ಪಾಸ್, ಮಾಸಿಕ ಪಾಸ್ ಅನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ, ಸೆಲ್ಫಿ ಭಾವಚಿತ್ರ ಆಯ್ಕೆಗೆ ಕ್ಲಿಕ್ಕಿಸಬೇಕು. ನಂತರ ನಿಗದಿತ ಶುಲ್ಕ ಪಾವತಿಸಿದರೆ, ಬಸ್ ಪಾಸ್ ಸಿಗಲಿದೆ.
ಡಿಜಿಟಲ್ ಪಾಸ್ ಪಡೆಯುವುದೇಗೆ?
1. ಪ್ಲೇ ಸ್ಟೋರ್‌ನಲ್ಲಿ ಟುಮಾಕ್ ಆಪ್ (Tummoc app) ಡೌನ್ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು.
2. ದೈನಿಕ, ಸಾಪ್ತಾಹಿಕ, ಮಾಸಿಕ ಪಾಸ್ ಆಯ್ಕೆ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ, ಸೇಲ್ಫಿ ಭಾವಚಿತ್ರವನ್ನು ಕ್ಲಿಕ್ಕಿಸಬೇಕು.
3. ಪಾಸ್ ಪಡೆಯಲು ದೃಢೀಕರಿಸಿ, ಪಾಸಿನ ಮೊತ್ತವನ್ನು ಪಾವತಿಸಿದ ನಂತರ ಡಿಜಿಟಲ್ ಬಸ್ ಪಾಸ್ ಲಭ್ಯವಾಗುತ್ತದೆ.
4. ಡಿಜಿಟಲ್ ಪಾಸ್‌ನೊಂದಿಗೆ ಆಯ್ಕೆ ಮಾಡಿದ ಗುರುತಿನ ಚೀಟಿಯನ್ನು ಇಟ್ಟುಕೊಂಡು ಪ್ರಯಾಣ ಮಾಡಬವುದು.
5. ಬಸ್‌ಗಳಲ್ಲಿ ಅಂಟಿಸಿರುವ ಕ್ಯೂಆರ್ ಕೋಡ್ ಅನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ, ಪಾಸ್‌ನ ಮಾನ್ಯತೆಯನ್ನು ನಿರ್ವಾಹಕ ಸಿಬ್ಬಂದಿಗೆ ತೋರಿಸಬೇಕಾಗುತ್ತದೆ.
6. ಹೆಚ್ಚಿನ ಮಾಹಿತಿಗಾಗಿ https://mybmtc.karnataka.gov.inಗೆ ಭೇಟಿ ನೀಡಬಹುದಾಗಿದೆ.
ಇನ್ನು ಈ ಡಿಜಿಟಲ್ ಪಾಸ್‌ನೊಂದಿಗೆ ಪ್ರಯಾಣಿಕರು, ನಿಗದಿತ ಗುರುತಿನ ಚೀಟಿ ತೋರಿಸಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಬಸ್‌ಗಳಲ್ಲಿ ಅಂಟಿಸಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪಾಸ್‌ನ ಮಾನ್ಯತೆಯನ್ನು ನಿರ್ವಾಹಕರಿಗೆ ತೋರಿಸಬೇಕೆಂದು ಬಿಎಂಟಿಸಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಬಿಎಂಟಿಸಿ ಡಿಜಿಟಲ್ ಪಾಸ್ ದರಗಳ ವಿವರ
* ದಿನದ ಪಾಸ್: ಆರ್ಡಿನರಿ-70 ರೂಪಾಯಿ, ವಜ್ರ ಗೋಲ್ಡ್ ದಿನದ ಪಾಸ್-120 ರೂಪಾಯಿ,
* ವಾರದ ಪಾಸ್: ಆರ್ಡಿನರಿ ವೀಕ್ಲಿ ಪಾಸ್-300 ರೂಪಾಯಿ,
ಮಾಸಿಕ ಪಾಸ್
* ಆರ್ಡಿನರಿ ಸರ್ವೀಸ್ ತಿಂಗಳ ಪಾಸ್-1,050 ರೂಪಾಯಿ
* ವಜ್ರ ಗೋಲ್ಡ್ ತಿಂಗಳ ಪಾಸ್-1,800 ರೂಪಾಯಿ
* ವಜ್ರ ಗೋಲ್ಡ್ ಪಾಸ್ (ಎಸಿ)-3,755 ರೂಪಾಯಿ
ನೈಸ್ ರೋಡ್ ಮಾರ್ಗದ ತಿಂಗಳ ಪಾಸ್
* ನೈಸ್ ರೋಡ್ ತಿಂಗಳ ಪಾಸ್ (ಆರ್ಡಿನರಿ)-2,200 ರೂಪಾಯಿ












Click it and Unblock the Notifications