Kirik Keerthi: ಬಾ ಶೆಡ್ಡಿಗ್ ಹೋಗಣ.. ಕುಂಟೆ ಬಿಲ್ಲೆ ಆಡು ಬಾ: ಕಿರಿಕ್ ಕೀರ್ತಿ ಇನ್ಸ್ಟಾ ಪೋಸ್ಟ್ ವೈರಲ್
Kirik Keerthi: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ಈಗಾಗಲೇ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಗೌಡ, ಎ2 ಆರೋಪಿ ನಟ ದರ್ಶನ್ ಹಾಗೂ ಪಟಾಲಂ ಗ್ಯಂಗ್ ಜೈಲು ಪಾಲಾಗಿದೆ. ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಪೋಸ್ಟರ್‌ಗಳು, ವಿಡಿಯೋಗಳು ಭಾರೀ ವೈರಲ್ ಆಗುತ್ತಲೇ ಇವೆ. ಇದೀಗ ಕಿರಿಕ್ ಕೀರ್ತಿ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಇದು ಭಾರೀ ಸದ್ದು ಮಾಡುತ್ತಿದೆ.
ನಟ ದರ್ಶನ್ ಪ್ರಕರಣ ಸಂಬಂಧ ಈಗಾಗಲೇ ಹಲವು ನಟ, ನಟಿಯರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ದರ್ಶನ್ ಪರ-ವಿರೋಧ ಚರ್ಚೆಗಳು ಕೂಡ ಆಗುತ್ತಿವೆ. ಇದೀಗ ಈ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಪಟಾಲಾಂ ಗ್ಯಾಂಗ್ ಜೈಲು ಪಾಲಾಗಿದ್ದಾರೆ.

ಅದರಲ್ಲೂ ಪವಿತ್ರಾಗೌಡ ಜೈಲು ಪಾಲಾದ ಮೇಲೆ ಅವರ ತಮ್ಮ ಜೈಲಿನ ಕಡೆ ಹೊರಟಿದ್ದರು. ಈ ವೇಳೆ ಅವರು ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡವರಂತೆ ಮಾಧ್ಯಮದವರನ್ನು ಕೆಣಕಿದ್ದರು. "ನಿಮಗೆ ಮಾಡೋದಿಕ್ಕೆ ಏನು ಕೆಲ್ಸ ಇಲ್ವಾ," ಎಂದು ತಗಡು ಮಾಡುಗಳನ್ನಾಡಿದ್ದರು. ಅಷ್ಟಕ್ಕೂ ಮೀಡಿಯಾದವರು ಸುಮ್ಮನೆ ಆಗ್ಲಿಲ್ಲ. ಇದನ್ನೇ ಕಾಮಿಡಿ ವಿಚಾರವಾಗಿ ತಗೊಂಡು ಪವಿತ್ರಾ ಗೌಡ ತಮ್ಮನಿಗೆ ಸರಿಯಾಗಿ ಚಪ್ಪಲಿಯಲ್ಲಿ ಹೊಡೆದ ರೀತಿ ಉತ್ತರ ಕೊಟ್ಟಿದ್ದರು.
ಟಿವಿ ಮಾಧ್ಯಮದ ಪ್ರಖ್ಯಾತ ನಿರೂಪಕರೊಬ್ಬರು, ಪವಿತ್ರಾ ಗೌಡ ತಮ್ಮ ನಿಮಗೆ ಏನು ಕಲ್ಸ ಇಲ್ವಾ ಎಂದು ಕೇಳಿದ್ದಕ್ಕೆ ತಕ್ಕ ಉತ್ತರವನ್ನೇ ನೀಡಿದ್ದಾರೆ. ಬಾರಪ್ಪ.. ಬಾ.. ನಮ್ಗೆ ಕೆಲ್ಸ ಇಲ್ಲ ಶೆಡ್‌ಗೆ ಹೋಗೋಣ ಬಾ.. ನಿಂದು ಯಾವಾಗ್ಲೂ ಶೆಡ್‌ನಲ್ಲೇ ಕೆಲ್ಸ ಅಲ್ವಾ ಬಾ ಎಂದು ಹೇಳುವ ಮೂಲಕ ಮುಟ್ಟಿ ನೋಡಿ ಕೊಳ್ಳುವ ರೀತಿ ಪವಿತ್ರಾ ಗೌಡ ತಮ್ಮಗೆ ತಿರುಗೇಟು ನೀಡಿದ್ದರು. ಇನ್ನೂ ಈ ವಿಡಿಯೋ ಅಂತೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಲೇ ಇದೆ.
ಇದರ ನಡುವೆ ಕಿರಿಕ್ ಕೀರ್ತಿ ಅವರ ಇನ್ಸ್ಟಾ ಪೊಸ್ಟ್ ಕೂಡ ಭಾರೀ ಸದ್ದು ಮಾಡುತ್ತಿದೆ. "ಬಾ ಶೆಡ್ಡಿಗ್ ಹೋಗಣ ಬಾ... ಕುಂಟೆ ಬಿಲ್ಲೆ ಆಡು ಬಾ.. ಎಂದು ಹೇಳಿರುವ ಪೋಸ್ಟ್ ಹಂಚಿಕೊಂಡಿದ್ದರು, ಇದು ಭಾರೀ ವೈರಲ್ ಆಗುತ್ತಿದೆ.
ಶೆಡ್ ಅನ್ನೋ ವಿಚಾರ ಯಾಕೆ ಬಂತು?: ರೇಣುಕಾಸ್ವಾಮಿಯನ್ನು ನಟ ದರ್ಶನ್ & ಗ್ಯಾಂಗ್ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಇದೆ. ಆಗಿನಿಂದಲೂ ಶೆಡ್ ಎಂಬ ಪದ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ & ಗ್ಯಾಂಗ್‌ಗೆ ತಿರುಗೇಟು ಕೊಡುವ ರೀತಿಯಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications