ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕಿಮ್ಸ್ ಸಿಬ್ಬಂದಿ ಧರಣಿ, ರೋಗಿಗಳ ಪರದಾಟ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25 : ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯರು, ಶುಶ್ರೂಷಕರು ನಡೆಸುತ್ತಿರುವ ಆಹೋರಾತ್ರಿ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ.

ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್‌) ವೈದ್ಯರು, ಕಂಪ್ಯೂಟರ್ ಆಪರೇಟರ್‌ಗಳು, ಶುಶ್ರೂಷಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಗುರುವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಬೇಡಿಕೆ ಈಡೇರಿಸುವ ಕುರಿತು ಇನ್ನೂ ಭರವಸೆ ಸಿಕ್ಕಿಲ್ಲ. [ಕಿಮ್ಸ್ ವೈದ್ಯರ ಕೆಲಸ ನಿಲ್ಲಿಸಿದ ವಾಟ್ಸಪ್ ಸಂದೇಶ!]

kims

ಪ್ರತಿಭಟನೆ ಆರಂಭಿಸುವುದಕ್ಕೂ 10 ದಿನಗಳ ಮೊದಲೇ ಬೇಡಿಕೆಗಳನ್ನು ಈಡೇರಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಲಾಗಿತ್ತು. ಆದರೆ, ಮಂಡಳಿ ಸ್ಪಂದಿಸದ ಕಾರಣ ಪ್ರತಿಭಟನೆ ಕೈಗೊಳ್ಳಲಾಗಿದೆ. 120ಕ್ಕೂ ಹೆಚ್ಚು ಸಿಬ್ಬಂದಿ 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ರೋಗಿಗಳು ಪರದಾಡುತ್ತಿದ್ದಾರೆ.[ಶಿಶುಗಳ ಸರಣಿ ಸಾವು, ತನಿಖೆಗೆ ಆದೇಶ]

ಸೇವೆ ಖಾಯಂಗೊಳಿಸುವುದು, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಅಹೋರಾತ್ರಿ ಧರಣಿ ನಡೆಯುತ್ತಿದೆ. ಬೇಡಿಕೆಗಳಿಗೆ ಆಡಳಿತ ಮಂಡಳಿ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪ್ರತಿಭಟನಾನಿರತರು ಎಚ್ಚರಿಕೆ ನೀಡಿದ್ದಾರೆ. [ವೈದ್ಯ ಶಿಕ್ಷಣ ದುಬಾರಿ]

ಸಿಬ್ಬಂದಿಗಳ ಪ್ರತಿಭಟನೆ ಬಗ್ಗೆ ಮಾತನಾಡಿರುವ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಅವರು, 'ವೈದ್ಯಕೀಯ ಕಾಲೇಜಿನ ಶುಲ್ಕವೇ ನಮ್ಮ ಆದಾಯದ ಮೂಲ. ಪ್ರವೇಶ ಶುಲ್ಕ ಇದ್ದಷ್ಟೆ ಇರುವಾಗ, ವೇತನ ಹೆಚ್ಚಿಸುವುದು ಹೇಗೆ? ಕಿಮ್ಸ್‌ ಈಗ ಆರ್ಥಿಕ ಸಂಕಷ್ಟದಲ್ಲಿದೆ' ಎಂದು ಹೇಳಿದ್ದಾರೆ.

English summary
Bengaluru Kempegowda Institute of Medical Sciences 120 employees protest enters 4th day on Thursday, September 24th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X