ಮೊದಲ ಬಾರಿಗೆ ಏರ್‌ಪೋರ್ಟ್ ಫೈರ್ ಫೈಟಿಂಗ್ ವಿಭಾಗಕ್ಕೆ ಮಹಿಳೆಯರ ನೇಮಕ
ಬೆಂಗಳೂರು, ಮಾರ್ಚ್ 8: ಮಹಿಳಾ ದಿನಾಚರಣೆ ದಿನದಂದೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಹಿಳೆಯರಿಗೋಸ್ಕರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ದೇಶದಲ್ಲೇ ಮೊದಲ ಬಾರಿಗೆ ಏರ್‌ಪೋರ್ಟ್ ಫೈರ್ ಫೈಟಿಂಗ್ ವಿಭಾಗಕ್ಕೆ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿದ ಹೆಗ್ಗಳಿಕೆಗೆ ಕೆಐಎ ಪಾತ್ರವಾಗಿದೆ.
ಮಹಿಳಾ ದಿನಾಚರಣೆ ಅಂಗವಾಗಿ 14 ಮಹಿಳಾ ಸಿಬ್ಬಂದಿಯನ್ನು ಫೈರ್ ಫೈಟರ್ಸ್ ಏರ್ ಕ್ರಾಫ್ಟ್ ರೆಸ್ಕ್ಯೂ ಅಂಡ್ ಫೈರ್ ಫೈಟಿಂಗ್ ವಿಭಾಗಕ್ಕೆ ನೇಮಕ ಮಾಡಿಕೊಂಡಿದೆ.

ನಿಲ್ದಾಣದಲ್ಲಿ ಪ್ರಾಥಮಿಕ ಹಂತದ ತರಬೇತಿ ಪಡೆಯುತ್ತಿರುವ ಈ ತಂಡ 4 ತಿಂಗಳ ಪೂರ್ಣ ಪ್ರಮಾಣದ ತರಬೇತಿಗೆ ಕೊಲ್ಕತ್ತಾಗೆ ತೆರಳಲಿದೆ.












Click it and Unblock the Notifications