Bengaluru Airport: ಇನ್ಮುಂದೆ ಟಿ2ನಿಂದ ಹಾರಲಿವೆ ಅಂತಾರಾಷ್ಟ್ರೀಯ ವಿಮಾನಗಳು, ಟಿ2ಗೆ ಶಿಫ್ಟ್ ಆದ 27 ಏರ್‌ಲೈನ್ಸ್,
ಬೆಂಗಳೂರು, ಆಗಸ್ಟ್ 29: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ನೂತನ ಟರ್ಮಿನಲ್ 2 (T2) ಗುರುವಾರ ಅಂತಾರಾಷ್ಟ್ರೀಯ ಟರ್ಮಿನಲ್ ಆಗಿ ಬದಲಾಯಿತು. ಏರ್ ಇಂಡಿಯಾ ಹಾಗೂ ಇಂಡಿಗೋ ಏರಲೈನ್ಸ್ ಈ ಎರಡು ಭಾರತೀಯ ಸಂಸ್ಥೆ ಸೇರಿ ಒಟ್ಟು 27 ವಿಮಾನಯಾನ ಸಂಸ್ಥೆಗಳು T1 ನಿಂದ ವಿಶಾಲವಾದ T2ಗೆ ಸ್ಥಳಾಂತರಗೊಂಡವರು. ಈ ಎಲ್ಲ ಸಂಸ್ಥೆಗಳು ಇನ್ಮುಂದೆ ಟರ್ಮಿನಲ್ 2ನಿಂದಲೇ ಕಾರ್ಯಾಚರಣೆ ನಡೆಸಲಿವೆ.
ಸಿಂಗಪುರ ಏರ್‌ಲೈನ್ಸ್‌ನ (SQ 508) ಟಿ2 ನಲ್ಲಿ 10.55 ಕ್ಕೆ ಲ್ಯಾಂಡ್ ಆಗಲಿರುವ ಮೊದಲ ಅಂತಾರಾಷ್ಟ್ರೀಯ ವಿಮಾನ ಆಗಿದೆ. ಇನ್ನೂ 11.45 ಕ್ಕೆ ಸಿಂಗಾಪುರಕ್ಕೆ ಹೊರಡುವ (SQ 509) ಮೊದಲ ವಿಮಾನ ಟಿ2ನಿಂದ ಹಾರಲಿದೆ ಎಂದು ಏರ್‌ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದರು.

25 ಅಂತಾರಾಷ್ಟ್ರೀಯ (ಎತಿಹಾದ್, ಕ್ವಾಂಟಾಸ್, ಬ್ರಿಟಿಷ್ ಏರ್‌ವೇಸ್ ಮತ್ತು ಕತಾರ್ ಏರ್‌ವೇಸ್) ಸಂಸ್ಥೆಯ ವಿಮಾನಗಳು ಟರ್ಮಿನಲ್ 2ನಿಂದಲೇ ಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಸಲಿವೆ. ಇದರೊಂದಿಗೆ ಏರ್ ಇಂಡಿಯಾ ಮತ್ತು ಇಂಡಿಗೋ ಇವೆರೆಡು ಮಾತ್ರ ಇಲ್ಲಿಂದ ಸೇವೆ ನೀಡಲಿರುವ ಭಾರತೀಯ ನಾಗರಿಕ ವಿಮಾನಯಾನ ಸಂಸ್ಥೆಗಳಾಗಿವೆ.
ಒಟ್ಟು ಸುಮಾರು 27 ವಿಮಾನಯಾನ ಸಂಸ್ಥೆಗಳು ಟಿ1ನಿಂದ ಟಿ2 ಗೆ ಸ್ಥಳಾಂತರಗೊಂಡರೆ, ಇನ್ನುಳಿದ ಸುಮಾರು 200 ವಿಮಾನಗಳನ್ನು ಒಳಗೊಂಡ ಇಂಡಿಗೋ ಸಂಸ್ಥೆ ದೇಶೀಯ ಕಾರ್ಯಾಚರಣೆಗಳು T1 ನಿಂದಲೇ ಸೇವೆ ಮುಂದುವರಿಸಲಿವೆ. ಇದರಲ್ಲಿ ಯಾವ ಬದಲಾವಣೆಗಳು ಇಲ್ಲ ಎಂದು ಹೇಳಲಾಗಿದೆ.

ಜನವರಿಯಿಂದ ಟಿ2 ನಲ್ಲಿ ಕಾರ್ಯಾಚರಣೆ
ಕೆಐಎನ ಟರ್ಮಿನಲ್ 2ರ ಹಂತ 1 ಅನ್ನು ಟರ್ಮಿನಲ್ ಇನ್ ಎ ಗಾರ್ಡನ್ ಎಂದು ಹೆಸರಿಸಲಾಗಿದೆ. ಇದು ಬೆಂಗಳೂರು ಉದ್ಯಾನ ನಗರಿಯ ಪ್ರತಿಬಿಂಬದಂತೆ ನಿರ್ಮಿಸಲಾಗಿದೆ. ಸುಮಾರು 5,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕಳೆದ 9 ತಿಂಗಳ ಹಿಂದೆ 2022ರ ನವೆಂಬರ್ ನಲ್ಲಿ ಪ್ರಧಾನಮಂತ್ರಿಗಳಿಂದ ಟಿ2 ಉದ್ಘಾಟನೆಗೊಂಡಿದೆ. ಅದಾದ ಬಳಿಕ 2023ರ ಜನವರಿ 15ರಿಂದ ಟಿ2 ಮೂಲಕ ಭಾರತೀಯ ಮೂಲದ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆ ಆರಂಭವಾಯಿತು. ನಂತರ ಏರ್‌ಏಶಿಯಾ, ವಿಸ್ತಾರಾ ಸಂಸ್ಥೆಗಳು ಟಿ2ಗೆ ಸ್ಥಳಾಂತರಗೊಂಡವು.
ಟಿ1 ಕೊನೆಯ ಟೇಕ್ ಆಫ್-ಲ್ಯಾಂಡಿಂಗ್ ವಿಮಾನ
ಇನ್ನೂ ಟಿ1ನಿಂದ ದುಬೈಗೆ ಎಮಿರೇಟ್ಸ್ ವಿಮಾನವು ಮಂಗಳವಾರ ಬೆಳಗ್ಗೆ 10.30ಕ್ಕೆ ಟೇಕ್ ಆಫ್ ಆಗಲಿದ್ದು, ಇದು ಟಿ1ನ ಕೊನೆಯ ಕೊನೆಯ ಅಂತಾರಾಷ್ಟ್ರೀಯ ವಿಮಾನ ಆಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೆಂಗಳೂರು ನಡುವಿನ ಏರ್ ಇಂಡಿಯಾದ ಅತೀ ಉದ್ದದ ವಿಮಾನವು ಟರ್ಮಿನಲ್‌ನಲ್ಲಿ ಕೊನೆಯದಾಗಿ ಇಳಿಯಲಿದೆ ಎಂದು ಕೆಐಎ ಮೂಲಗಳು ತಿಳಿಸಿವೆ.
ದೇಶೀಯ ವಾಹಕಗಳಾದ ಇಂಡಿಗೊ, ಅಕಾಸಾ ಏರ್, ಸ್ಪೈಸ್‌ಜೆಟ್ ಮತ್ತು ಅಲಯನ್ಸ್ ಏರ್ ಟಿ1ನಿಂದ ಕಾರ್ಯ ನಿರ್ವಹಿಸಲಿವೆ.
ಟಿ2ನಲ್ಲಿ ಉನ್ನತ ಶ್ರೇಣಿ ಸೌಲಭ್ಯ
ಇನ್ನೂ ಟಿ2 ವಿಶಾಲ ಪ್ರದೇಶವನ್ನು ಹೊಂದಿದೆ. ವಿಶೇಷ ವಲಸೆ ಕೌಂಟರ್‌ಗಳಿಗೆ ವಿನ್ಯಾಸಗೊಳಿಸಿದ ವಾಸ್ತುಶಿಲ್ಪ ಮತ್ತು ಹಸಿರು ಹೊದಿಕೆ ಆಕರ್ಷಣೀಯವಾಗಿದೆ. ಈ ಟರ್ಮಿನಲ್ 2 ವಾರ್ಷಿಕವಾಗಿ 25 ಮಿಲಿಯನ್ ಪ್ರಯಾಣಿಕರಿಗೆ ಸೇವೆ ನೀಡುವಷ್ಟು ಸಾಮರ್ಥ್ಯ ಹೊಂದಿದೆ. ವಿಶ್ರಾಂತಿ ಕೊಠಡಿ, ಮಳಿಗೆಗಳು, ಆರ್ಟ್ ಗ್ಯಾಲರಿಗಳು, ವಿಶಾಲ ಪ್ರಾಂಗಣ, ನೂತನ ವಿನ್ಯಾಸ ಸೇರಿದಂತೆ ಸುವ್ಯವಸ್ಥಿತವಾಗಿ ಉನ್ನತ ಶ್ರೇಣಿ ಸೌಲಭ್ಯ ಹೊಂದಿದೆ.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 30 ನಿರ್ಗಮನ ವಲಸೆ ಕೌಂಟರ್, 34 ಆಗಮನ ವಲಸೆ ಕೌಂಟರ್, 10 ಇ-ಗೇಟ್, 20 ವೀಸಾ ಆನ್-ಆರೈವಲ್ ಕಿಯೋಸ್ಕ್‌ಗಳ ಭಾಗವಾಗಿ ವ್ಯಾಪಾರ ಮತ್ತು ಪ್ರಥಮ ದರ್ಜೆ ಪ್ರಯಾಣಿಕರಿಗೆ ವಿಶೇಷ ವಲಸೆ ಕೌಂಟರ್ ಗಳು ಇಲ್ಲಿವೆ. ಲಗೇಟ್ ಕೌಂಟರ್‌ಗಳು ಸಹ, ಭದ್ರತೆ, 17 ಕಡೆ ಭದ್ರತಾ ತಪಾಸಣೆ ಒಳಗೊಂಡಿದೆ.
ಇನ್ನೂ ಪ್ರಯಾಣಿಕ ಕರೆದೊಯ್ಯಲು ಮತ್ತು ಕರೆತಂದು ಬಿಡಲು (ಪಿಕಪ್-ಡ್ರಾಪ್) ವಲಯಗಳು, ಟ್ಯಾಕ್ಸಿ ಬೇಗಳನ್ನು ಹೊರತುಪಡಿಸಿ, ಟರ್ಮಿನಲ್‌ಗಳ ಮಧ್ಯೆ ಶಟಲ್ ಬಸ್ ಹಾಗೂ ಬಿಎಂಟಿಸಿ ಬಸ್ ಗಳು ಕಾರ್ಯ ನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.












Click it and Unblock the Notifications