Get Updates
Get notified of breaking news, exclusive insights, and must-see stories!

ಕರಕುಶಲ ವಸ್ತು ಮೇಲಿನ ಜಿಎಸ್‌ಟಿ ಹಿಂಪಡೆಯದ ಮೋದಿ: ಪ್ರಸನ್ನ ಅಸಮಾಧಾನ

ಬೆಂಗಳೂರು, ಮೇ 09: ಕರಕುಶಲ ವಸ್ತುಗಳು ಹಾಗೂ ಖಾದಿ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಹಿಂಪಡೆಯುವುದಾಗಿ ಹೇಳಿದ್ದ ಪ್ರಧಾನಿ ಮೋದಿ ತಮ್ಮ ವಚನಕ್ಕೆ ತಕ್ಕಂತೆ ನಡೆದುಕೊಳ್ಳದೆ. ರಾಮರಾಜ್ಯದ ಕನಸು ನನಸು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು೮ ಹಿರಿಯ ಕರಕುಶಲ ಮತ್ತು ಖಾದಿ ಹೋರಾಟಗಾರ ಪ್ರಸನ್ನ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ ಬಿಜೆಪಿ ಸರ್ಕಾರವು ರಾಮರಾಜ್ಯವನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ, ವಚನ ಭ್ರಷ್ಟವಾಗಿದೆ. ರಾಮರಾಜ್ಯದ ಮೂಲ ಆಧಾರವೇ ಕೈಉತ್ಪಾದಕತೆಯಾಗಿದೆ. ಕರಕುಶಲ ಕೈಗಾರಿಕೆಯಿಂದ ಸ್ವರಾಜ್ಯ ಸ್ವದೇಶಿ ವಿಕೇಂದ್ರಿಕರಣ ಪರಿಸರ ಸಂರಕ್ಷಣೆ ಬಡತನ ನಿವಾರಣೆ ಇತ್ಯಾದಿ ಪರಿಕಲ್ಪನೆಗಳು ಜೀವ ತಳೆಯುವುದು.ಕರಕುಶಲ ಉತ್ಪನ್ನಗಳ ಮೇಲೆ ತಾನು ವಿಧಿಸಿದ್ದ ಬರ್ಬರವಾದ ಜಿ.ಎಸ್.ಟಿ ತೆರಿಗೆಯನ್ನು ಹಿಂತೆಗೆದುಕೊಳ್ಳವುದಾಗಿಯೂ, ಶೂನ್ಯ ತೆರಿಗೆಯ ವ್ಯವಸ್ಥೆಗೆ ಇಪ್ಪತ್ತೊಂಬತ್ತು ಕೈಉತ್ಪನ್ನಗಳನ್ನು ತರುವುದಾಗಿಯೂ ನೀಡಿದ್ದ ವಚನವನ್ನು ಮರೆತಿದೆ ಎಂದರು.

ದೇಶದ ಒಟ್ಟು ಉತ್ಪಾದಕತೆಯಲ್ಲಿ ಅರವತ್ತು ಪ್ರತಿಶತ ಉತ್ಪಾದಕತೆಯನ್ನು ನಿಭಾಯಿಸುತ್ತದೆ ಈ ಗ್ರಾಮೀಣ ಕ್ಷೇತ್ರ! ಮಳೆಆಧಾರಿತ ಕೃಷಿ, ಕೈಮಗ್ಗ ನೇಕಾರಿಕೆ, ಕುಶಲಕರ್ಮ, ಸುಸ್ಥಿರ ಹೈನುಗಾರಿಕೆ, ಪಾರಂಪರಿಕ ಮೀನುಗಾರಿಕೆ, ಕುಂಬಾರಿಕೆ, ಕಮ್ಮಾರಿಕೆ, ಇತ್ಯಾದಿ ಕ್ಷೇತ್ರಗಳ ಬಡ ಜನರು ಈ ತೆರಿಗೆಗಿಂತ ಮಿಗಿಲಾಗಿ ಅವರು, ತರಿಗೆ ವ್ಯವಸ್ಥೆಯ ಭಾರ, ಪರಕೀಯ ಭಾಷೆಯ ಭಾರ, ಕಂಪ್ಯೂಟರೀಕರಣದ ಭಾರ, ತೆರಿಗೆ ಅಧಿಕಾರಿಗಳ ಕಿರುಕುಳ, ಸಾಗಾಣಿಕೆಯಲ್ಲಿ ಆಗುತ್ತಿರುವ ಉಪಟಳ, ಕಚ್ಚಾಮಾಲಿನ ಪೂರೈಕೆಯಲ್ಲಾಗಿರುವ ಅಡಚಣೆ, ಮಧ್ಯವರ್ತಿಗಳ ಕಾಟ, ಭ್ರಷ್ಟಾಚಾರದ ಕಾಲ, ಇತ್ಯಾದಿಗಳಿಂದ ಸೊರಗಿದ್ದಾರೆ.

Khadi activist Prasanna anger on GST on handmade products

ಜಿ.ಎಸ್.ಟಿ ತೆರಿಗೆಯನ್ನು ನಾವು ಜಜಿûಯ ತೆರಿಗೆ ಎಂದು ಕರೆಯುತ್ತೇವೆ. ಪರಿಸರ ಪ್ರಕೃತಿ ಹಾಗೂ ನೈತಿಕತೆಗಳಿಗೆ ಮಾರಕವಾಗಿರುವ ಕೈಗಾರಿಕಾ ಉತ್ಪನ್ನಗಳು ಸರಕಾರಕ್ಕೆ ಈ ತಪ್ಪು ಕಾಣಿಕೆ ನೀಡುವುದರಲ್ಲಿ ಅರ್ಥವಿದೆ. ಆದರೆ, ಕೈಉತ್ಪನ್ನಗಳ ಮೇಲೆ ತರಿಗೆ ವಿಧಿಸಿ ಬಾಜಪ ಸರಕಾರವು ಅಕ್ಷಮ್ಯ ಅಪರಾಧ ಮಾಡಿದೆ.

ಶೂನ್ಯ ತೆರಿಗೆ ವ್ಯವಸ್ಥೆ ಜಾರಿಗೆ ಬಂದರೆ ಗ್ರಾಮೀಣ ಕೈಉತ್ಪಾದಕರು ಸಂಘಟಿತರಾಗಿ, ಅಮುಲ್, ಲಿಜ್ಜತ್ ಪಾಪಡ್, ದೇಸಿ, ದಸ್ತಕಾರ್ ಆಂದ್ರ ಇತ್ಯಾದಿ ಸಹಕಾರಿ ಸಂಘಟನೆಗಳ ಮಾದರಿಯಲ್ಲಿ ನಗರ ಮಾರುಕಟ್ಟೆಯನ್ನು ಯಶಸ್ವಿಯಾಗಿ ಪ್ರವೇಶಿಸಬಲ್ಲವು ಎಂಬ ಉದ್ದೇಶದಿಂದ ಗ್ರಾಮ ಸೇವಾ ಸಂಘವು ಜಿ.ಎಸ್.ಟಿ ವಿರೋಧಿ ಹೋರಾಟವನ್ನು ನಡೆಸಿಕೊಂಡು ಬಂದಿದೆ. ಕೇಂದ್ರ ಸರಕಾರವು ತಕ್ಷಣದಲ್ಲಿ ತನ್ನ ವಚನವನ್ನು ಪೂರೈಸದೆ ಹೋದರೆ ಗ್ರಾಮೀಣ ಬಡವರ ಕೆಂಗಣ್ಣಿನ ಕೋಪಕ್ಕೆ ಅದು ಗುರಿಯಾಗಲಿದೆ, ಹೋರಾಟವು ಹೆಚ್ಚು ವಿಸ್ತøತವಾಗಿ ಮೇಲೆದ್ದು ಬರಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+