ಕೆಂಗೇರಿ ಸ್ಯಾಟ್‌ಲೈಟ್‌ನಲ್ಲಿ 2013ರಲ್ಲೇ ಆರಂಭವಾದ ಕಾಮಗಾರಿ ಇನ್ನೂ ಮುಗಿದಿಲ್ಲ
ಬೆಂಗಳೂರು, ಏ.5: ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಹಲವು ಸಿವಿಲ್ ಕಾಮಗಾರಿಗಳು ಆರಂಭಗೊಂಡು ಏಳು ವರ್ಷಗಳೇ ಕಳೆದಿದ್ದರು ಪೂರ್ಣಗೊಳ್ಳುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ.
ದಿನನಿತ್ಯ ಸಾವಿರಾರು ಮಂದಿ ಓಡಾಡುವ ಸದಾ ಜನರಿಂದ ತುಂಬಿರುವ ಬಸ್ ನಿಲ್ದಾಣದ ಗತಿ ಇದು. ಮಾಹಿತಿ ಹಕ್ಕು ಕಾಯ್ದೆಯಡಿ ಸಂಜಯ್ ಅವರು ಸಲ್ಲಿಸಿದ್ದ ಅರ್ಜಿಗೆ ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಹೌದು ಈ ಕಾಮಗಾರಿ 2013ರಲ್ಲೇ ಆರಂಭವಾಗಿತ್ತು.

ಆದರೆ ಸಮರ್ಪಕವಾಗಿ ಹಣ ದೊರೆಯದ ಪರಿಣಾಮ ನಿಧಾನಗತಿಯಲ್ಲಿ ಸಾಗುತ್ತಿದೆ. ಏಪ್ರಿಲ್ 30ರೊಳಗೆ ಕಾಮಗಾರಿ ಅಂತ್ಯಗೊಳ್ಳಲುದೆ ಎಂದು ಮಾಹಿತಿ ನೀಡಿದ್ದಾರೆ.ರಾಮಲಿಂಗಾರೆಡ್ಡಿಯವರು 2013ರಲ್ಲಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು.












Click it and Unblock the Notifications