ಕೆಂಪೇಗೌಡ ಲೇಔಟ್ ಅಭಿವೃದ್ಧಿ: ಎಲ್ಲ ಕೇಬಲ್ ಭೂಗತ ಅಳವಡಿಕೆ: ಬಿಡಿಎ
ಬೆಂಗಳೂರು, ಜನವರಿ 04: ನಗರದ ಕೆಂಪೇಗೌಡ ಬಡಾವಣೆಯಲ್ಲಿ ಎಲೆಕ್ಟ್ರಿಕಲ್ ಕೇಬಲ್‌ಗಳು ಸೇರಿದಂತೆ ಎಲ್ಲ ವಿಧದ ಕೇಬಲ್‌ಗಳನ್ನು ಭೂಗತವಾಗಿ ಯುಟಿಲಿಟಿ ಡಕ್ಟ್‌ನಲ್ಲಿ ಹಾಕಲಾಗಿದೆ. ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಅಭವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ಕುಮಾರ್ ನಾಯಕ್ ತಿಳಿಸಿದರು.
ಕೆಂಪೇಗೌಡ ಬಡಾವಣೆ ನಿರ್ಮಾಣದ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದ ಅವರು, ಬೀದಿ ದೀಪ ಸೇರಿ ಎಲ್ಲ ಕೇಬಲ್‌ಗಳನ್ನು ಭೂಗತವಾಗಿ ಯುಟಿಲಿಟಿ ಡಕ್ಟ್‌ನಲ್ಲಿ ಅಳವಡಿಸಲಾಗಿದೆ. ಇಂಧನ ಉಳಿತಾಯ ಮಾಡಲು ಬಡಾವಣೆಯಲ್ಲಿ ಬೀದಿ ದೀಪಕ್ಕಾಗಿ ಸ್ಮಾರ್ಟ್ ಸ್ಟ್ರೀಟ್ ಲೈಟಿಂಗ್ ಅಳವಡಿಸಲಾಗಿದೆ. 2014ರಿಂದಲೇ ಬಡಾವಣೆಯ ಅಭಿವೃದ್ದಿ ಕಾರ್ಯ ಕೈಗೊಂಡಿದ್ದೇವೆ ಎಂದರು.
ಬಡಾವಣೆಗೆ ಕಾವೇರಿ ನೀರು ಪೂರೈಕೆ, ಮರು ಬಳಕೆಯ ನೀರು ಸರಬರಾಜು, ಭೂಗತ ಒಳಚರಂಡಿ ಮತ್ತು ವಿದ್ಯುತ್ ಜಾಲ ಹೀಗೆ ಎಲ್ಲವನ್ನು ಎಸ್‌ಸಿಎಡಿಎ-ಮೇಲ್ವಿಚಾರಣಾ ನಿಯಂತ್ರಣ ಮತ್ತು ಡೇಟಾ ಸ್ವಾಧೀನ(ಸ್ಕಾಡಾ) ಮೂಲಕ ನಿಯಂತ್ರಿಸಲಾಗುತ್ತಿದೆ.

ಈ ಕೆಂಪೇಗೌಡ ಬಡಾವಣೆಯ ಒಟ್ಟು 4,043 ಎಕರೆಯ ಪ್ರದೇಶಗಳಲ್ಲಿ ಸೀಗೇಹಳ್ಳಿ, ಕೊಡಿಗೇಹಳ್ಳಿ, ಕನ್ನೆಳ್ಳಿ, ಮಾಂಗನಹಳ್ಳಿ, ಕೆಂಚನಪುರ, ಸೂಳಿಕೆರೆ, ರಾಮಸಂದ್ರ, ಕೊಮ್ಮಘಟ್ಟ, ಕೋಮಘಟ್ಟ ಕೃಷ್ಣಸಾಗರ, ಭೀಮನಕುಪ್ಪೆ, ಚಲ್ಲಘಟ್ಟ, ಬಹಿಸ್ಸೆ ಗ್ರಾಮಗಳ 12 ಗ್ರಾಮಗಳನ್ನು ಒಳಗೊಂಡಿದೆ. ಮೊದಲ ಹಂತದಲ್ಲಿ 2,252 ಎಕರೆಗಳಲ್ಲಿ 25ಸಾವಿರಕ್ಕೂ ಅಧಿಕ ನಿವೇಶನಗಳನ್ನು ನಿರ್ಮಿಸಲಾಗಿದೆ ಎಂದು ಅವರು ವಿವರಿಸಿದರು.
ಲೇಔಟ್‌ನಲ್ಲಿ ಸುವ್ಯವಸ್ಥಿತ ವಿಶಾಲ ರಸ್ತೆಗಳನ್ನು ನಿರ್ಮಿಸಲಾಗಿದೆ. ಇಲ್ಲಿಂದ ಬೆಂಗಳೂರು-ಮೈಸೂರು ರಸ್ತೆ ಕಡೆಗೆ , ಬೆಂಗಳೂರು-ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಬಡಾವಣೆ ಮಧ್ಯಭಾಗದಲ್ಲಿ 10.57 ಕಿ.ಮೀ. ಉದ್ದದ 100 ಮೀಟರ್ ಅಗಲದ ಮುಖ್ಯ ರಸ್ತೆ ನಿರ್ಮಿಸಲಾಗಿದೆ. ಈ ಮುಖ್ಯರಸ್ತೆಯಿಂದ ಬಡಾವಣೆಯ ಎಲ್ಲ ಒಂಬತ್ತು ಬ್ಲಾಕ್‌ಗಳಿಗೆ ಪ್ರವೇಶಿಸಬಹದು.
ನೀರಿನ ಸೂಕ್ತ ನಿರ್ವಹಣೆ: ಪ್ರತಿ ವಾರ ಸಭೆ
ಮನೆಗಳಿಂದ ಬರುವ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲದೇ ಆ ನೀರಿನ್ನು ಸಂಸ್ಕರಿಸಲು 10 ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ನೀರು ಸರಬರಾಜಿಗೆ 57.5 ಎಂಎಲ್ ಸಾಮರ್ಥ್ಯದ 4 ಜಿಎಲ್‌ಎಸ್‌ಆರ್‌ಗಳನ್ನು ನಿರ್ಮಿಸಲಾಗಿದೆ. ಸಂಸ್ಕರಿಸಿದ ನೀರು ಸರಬರಾಜಿಗೆ ಎಂಟು ಓವರ್ ಹೆಡ್ ಟ್ಯಾಂಕ್ ಸ್ಥಾಪಿಸಿದ್ದೇವೆ. ಅಷ್ಟೇ ಅಲ್ಲದೇ ತೋಟಗಾರಿಕೆ, ಫ್ಲಶಿಂಗ್ ಹಾಗೂ ಇನ್ನಿತರ ಕುಡಿಯಲು ಯೋಗ್ಯವಲ್ಲ ಬಳಕೆಗೆ ಈ ನೀರನ್ನು ಪೂರೈಕೆ ಮಾಡಲಿದ್ದೇವೆ ಎಂದು ಹೇಳಿದರು.

ಹಂತ ಹಂತವಾಗಿ ಬಡಾವಣೆ ಅಭಿವೃದ್ಧಿಯಾಗುತ್ತಿದೆ. ಈ ಕಾಮಗಾರಿ ಯೋಜನೆಯನ್ನು ಪರಿಶೀಲಿಸಲು ಪ್ರತಿ ವಾರ ಬಿಡಿಎ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಈಗಾಗಲೇ ಭೂಸ್ವಾಧೀನ ಸಮಸ್ಯೆಗಳು ಮತ್ತು ಭೂಮಿ ಸಡಿಲವಾದ ರೈತರಿಗೆ ನಿವೇಶನ ಹಂಚಿಕೆಯ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಎಂಎಆರ್ ಕಾಮಗಾರಿಗಳು, ಲೇಔಟ್ ಕಾಮಗಾರಿಗಳು ಮತ್ತು ಯುಟಿಲಿಟಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಗಡುವು ನೀಡಿದ್ದೇವೆ. ಸಕಾಲಕ್ಕೆ ಕೆಲಸ ಮುಗಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.












Click it and Unblock the Notifications