ಬೆಂಗಳೂರಲ್ಲಿ ವಿದ್ಯುತ್ ಅವಘಡ ಹೆಚ್ಚಳ: ಜೂನ್ 3ರಂದು ಕೆಸಿಆರ್‌ಸಿ ಸಭೆ

ಬೆಂಗಳೂರು, ಜೂನ್ 1: ಬೆಸ್ಕಾಂ ಸೇರಿದಂತೆ ವಿವಿಧ ಎಸ್ಕಾಂ ವ್ಯಾಪ್ತಿಗಳಲ್ಲಿ ವಿದ್ಯುತ್ ಅಪಘಾತಗಳು ಅಪಾಯಕಾರಿ ಪ್ರಮಾಣದಲ್ಲಿ ಮುಂದುವರೆಯುತ್ತಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರದ ನೇತೃತ್ವದಲ್ಲಿ ಜೂನ್ 3ರಂದು ಸೋಮವಾರ ಸಭೆ ನಡೆಯಲಿದೆ.

ದೋಷಪೂರಿತ ವಿದ್ಯುತ್ ಕಂಬ, ತುಂಡರಿಸಿದ ತಂತಿ ಮತ್ತಿತರೆ ಸಮಸ್ಯೆ ಕಂಡು ಬಂದಲ್ಲಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆ ಮಾಡಬಹುದು, ಸುರಕ್ಷತೆಯ ದೂರುಗಳಿಗೆ 94483191212ಗೆ ಕರೆ ಮಾಡಬಹುದಾಗಿದೆ.

ಮಂಜುನಾಥ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಈ ಮೂಲಕ ನಾಲ್ಕು ತಿಂಗಳಲ್ಲಿ ವಿದ್ಯುತ್ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ.

KCRC to hold meeting over electrocuted death in Bengaluru

ಮತ್ತಿಕೆರೆ ನಿವಾಸಿ ಸತೀಶ್ (23) ಮೃತ ಕಾರ್ಮಿಕ. ಈ ಸಂಬಂಧ ಬಸವೇಶ್ವರ ನಗರ ಪೊಲೀಸರು ಮನೆ ಮಾಲೀಕ ಜಯಕುಮಾರ್ ಮತ್ತು ಮೇಸ್ತ್ರಿ ರಾಮಚಂದ್ರ ಎಂಬುವವರನ್ನು ನಿರ್ಲಕ್ಷ್ಯ ಪ್ರಕರಣದಡಿ ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+