ಕಾವೇರಿ ನದಿಯನ್ನು ಮಾಲಿನ್ಯ ಮುಕ್ತಗೊಳಿಸಿ, ಸ್ವಚ್ಛತೆ ಕಾಪಾಡಿ
ಬೆಂಗಳೂರು, ನವೆಂಬರ್, 20 : ಕಾವೇರಿ ನದಿ ಸ್ವಚ್ಚತೆಗೆ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಾವೇರಿ ಜಾಗೃತಿ ತೀರ್ಥಯಾತ್ರಾ ಸಮಿತಿ ಮನವಿ ಸಲ್ಲಿಸಿದ್ದು, ಕರ್ನಾಟಕ ಮತ್ತು ತಮಿಳುನಾಡು ನಿಯೋಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ತೆರಳಿ ಕಾವೇರಿ ನದಿ ಸ್ವಚ್ಛತೆ ಬಗ್ಗೆ ಒತ್ತಾಯಿಸುವ ನಿರ್ಣಯ ತೆಗೆದುಕೊಂಡಿದೆ.
ಅಕ್ಟೋಬರ್ 27 ರಂದು ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಆಶ್ರಯದಲ್ಲಿ ತಲಕಾವೇರಿಯಿಂದ 'ಕಾವೇರಿ ಜಾಗೃತಿ ತೀರ್ಥಯಾತ್ರೆ' ಚಾಲನೆಗೊಂಡಿದ್ದು, ತಮಿಳುನಾಡಿನ ಪೂಂಪ್ ಹಾರ್ ಬಳಿ ಬಂಗಾಳಕೊಲ್ಲಿ ಸೇರುವ ಕಾವೇರಿ ನದಿ ಸಂಗಮದಲ್ಲಿ ಭಾನುವಾರ ನಡೆದ ತೀರ್ಥಯಾತ್ರಾ ಸಮಾರೋಪ ಸಮಾರಂಭದಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.[ಕರ್ನಾಟಕಕ್ಕೆ ದುಬಾರಿ ಬೇಡಿಕೆ ಇಟ್ಟ ತಮಿಳುನಾಡು]
ತಲಕಾವೇರಿಯಿಂದ ತಂದ ಕಾವೇರಿ ನೀರನ್ನು ಬಂಗಾಳಕೊಲ್ಲಿ ಸಮುದ್ರಕ್ಕೆ ವಿಸರ್ಜನೆ ಬಳಿಕ ಮಾತನಾಡಿದ ಶ್ರೀ ರಮಾನಂದ ಸ್ವಾಮೀಜಿ, 'ಎರಡೂ ರಾಜ್ಯಗಳು ನದಿ ಸ್ವಚ್ಚತೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕಾವೇರಿ ಸಂಪೂರ್ಣವಾಗಿ ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಗಟ್ಟುವ ಬಗ್ಗೆ ಸರ್ಕಾರ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಸರ್ಕಾರ ಗಂಗಾ ನದಿ ಸ್ವಚ್ಚತಾ ರೀತಿಯಲ್ಲಿ ಕಾವೇರಿ ನದಿ ಸ್ವಚ್ಚತೆಗೂ ಆದ್ಯತೆ ನೀಡಬೇಕು' ಎಂದು ಒತ್ತಾಯಿಸಿದರು.
ಕಾವೇರಿ ನದಿ ಸ್ವಚ್ಚತಾ ಆಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾತನಾಡಿ, ' ನದಿ ಸಂರಕ್ಷಣೆಗೆ ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ. ಈ ನಿಟ್ಟಿನಲ್ಲಿ ತೆರಳಿದ್ದ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.[ಕರ್ನಾಟಕದ ವಿರುದ್ಧವೇ ಹರಿಯಿತು ಕಾವೇರಿ ಅಧಿಸೂಚನೆ]
ಶೀಘ್ರದಲ್ಲೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ನಿಯೋಗ ಮೂಲಕ ಭೇಟಿ ಮಾಡಿ ಕಾವೇರಿ ನದಿ ಸ್ವಚ್ಚತೆಗೆ ಕಾಳಜಿ ವಹಿಸುವಂತೆ ಮನವಿ ಮಾಡಲಾಗುವುದು ಎಂದಿದ್ದಾರೆ. ಡಿಸೆಂಬರ್ ಎರಡನೇ ವಾರದಲ್ಲಿ ಎರಡೂ ರಾಜ್ಯಗಳ ಸಾಧುಸಂತರು ಸೇರಿದಂತೆ ಸಮಿತಿಯ ಪ್ರಮುಖರು ದೆಹಲಿಗೆ ತೆರಳಿ ಪ್ರಧಾನಿ ಅವರನ್ನು ಭೇಟಿ ಮಾಡಿ ಕಾವೇರಿ ನದಿಯ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸಲಾಗುವುದು' ಎಂದು ತಿಳಿಸಿದ್ದಾರೆ.
ಕಾವೇರಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮದ ಚಿತ್ರಣಗಳು ಮತ್ತು ನದಿ ಜಾಗೃತಿ ಯಾತ್ರೆ ದೃಶ್ಯ, ಕಾವೇರಿ ನದಿ ಕಲುಷಿಕೆಗೊಂಡಿರುವ ಚಿತ್ರಣ..

ಕಾವೇರಿ ಮಾತೆಗೆ ಪೂಜೆ
ಕಾವೇರಿ ನದಿ ಸ್ವಚ್ಛತೆಗೆ ಮುಂದಾದ ಸಾಧುಗಳು, ಜನರು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.

5 ಕಳಸದಲ್ಲಿ ತಲಕಾವೇರಿ ನೀರು
ತಲಕಾವೇರಿಯಿಂದ ತಂದ ಕಾವೇರಿ ನೀರನ್ನು ಬಂಗಾಳಕೊಲ್ಲಿ ಸಮುದ್ರಕ್ಕೆ ವಿಸರ್ಜನೆ ಮಾಡಲು ತೆರಳುತ್ತಿರುವ ಸಾಧುಗಳು ಕಾವೇರಿ ಜಾಗೃತಿ ತೀರ್ಥಯಾತ್ರ ಸಮಿತಿ

ಕಾವೇರಿ ಮಾತೆಗೆ ಪೂಜೆ
ಕಾವೇರಿಯನ್ನು ಮಾತೆ, ದೇವರೆಂದು ಪರಿಗಣಿಸಿ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ, ಕಾವೇರಿ ಮಾತೆಯ ಆಶೀರ್ವಾದಕ್ಕೆ ಪಾತ್ರರಾದ ಸಾಧುಗಳು, ಜನರು.

ಕಾವೇರಿ ಸೌಂದರ್ಯ ನೋಡಿ
ಕಾವೇರಿ ನಂದಿ ತುಂಬಿ ಹರಿಯುತ್ತಿದ್ದು, ಇದರ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಆದರೆ ಇದು ಕಲುಷಿತದ ಹಂತ ತಲುಪಿದೆ ಅನ್ನುವುದು ಮಾತ್ರ ಬೇಸರದ ಸಂಗತಿ

ಸೌಂದರ್ಯ ಕಳೆದುಕೊಂಡ ಕಾವೇರಿ ನದಿ
ಕಾವೇರಿ ಸೌಂದರ್ಯ ಸಂಪೂರ್ಣ ಹಾಳಾಗುತ್ತಿದ್ದು, ಸಂಪೂರ್ಣ ಪ್ಲಾಸ್ಟಿಕ್ ಮಯ, ಕವರ್ ಮಯವಾಗುತ್ತಿದ್ದು, ಗಬ್ಬು ನಾರುತ್ತಿದೆ. ಇದರ ಸ್ವಚ್ಚತೆಗೆ ಕಾವೇರಿ ತೀರ್ಥಯಾತ್ರಾ ಸಮಿತಿ ಪಣತೊಟ್ಟಿದೆ.

ಸಿದ್ದುಗೆ ಮನವಿ
ಕಾವೇರಿ ನದಿ ಸ್ವಚ್ಚತೆಗೆ ಯೋಜನೆ ರೂಪಿಸುವಂತೆ ಸಿದ್ದರಾಮಯ್ಯಗೆ ಕಾವೇರಿ ಜಾಗೃತಿ ತೀರ್ಥಯಾತ್ರಾ ಸಮಿತಿ ಮನವಿ ಸಲ್ಲಿಸಿದ್ದು, ಕರ್ನಾಟಕ ಮತ್ತು ತಮಿಳುನಾಡು ನಿಯೋಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿ ತೆರಳಿ ಕಾವೇರಿ ನದಿ ಸ್ವಚ್ಛತೆ ಬಗ್ಗೆ ಒತ್ತಾಯಿಸುವ ನಿರ್ಣಯ ತೆಗೆದುಕೊಂಡಿದೆ.












Click it and Unblock the Notifications