ಕೌರ್-ದಾವೂದ್ ಹೋಲಿಕೆ; ಪ್ರತಾಪ್ ಸಿಂಹ ವಿರುದ್ದ ಪೊಲೀಸರಿಗೆ ದೂರು
ಕಾರ್ಗಿಲ್ ಹುತಾತ್ಮ ಮಂದೀಪ್ ಸಿಂಗ್ ಪುತ್ರಿ ಗುರ್ಮೆಹರ್ ಕೌರ್ ರನ್ನು ಟ್ವಿಟ್ಟರಿನಲ್ಲಿ ಭೂಗತ ಪಾತಕಿ ದಾವುದ್ ಇಬ್ರಾಹಿಂಗೆ ಹೋಲಿಕೆ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಬೆಂಗಳೂರು, ಫೆಬ್ರವರಿ 28: ಕಾರ್ಗಿಲ್ ಹುತಾತ್ಮ ಕ್ಯಾಪ್ಟನ್ ಮಂದೀಪ್ ಸಿಂಗ್ ಪುತ್ರಿ ಗುರ್ಮೆಹರ್ ಕೌರ್ ರನ್ನು ಟ್ವಿಟ್ಟರಿನಲ್ಲಿ ಭೂಗತ ಪಾತಕಿ ದಾವುದ್ ಇಬ್ರಾಹಿಂಗೆ ಹೋಲಿಕೆ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಯುವ ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿದೆ.[ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ವಿವಾದ]
"ಕಾರ್ಗಿಲ್ ಹುತಾತ್ಮ ಮಂದೀಪ್ ಸಿಂಗ್ ಹಾಗೂ ಗುರ್ಮೆಹರ್ ಕೌರ್ ಅವರನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿ ಹುತಾತ್ಮ ಯೋಧನಿಗೂ ಅವರ ಮಗಳಿಗೂ ಅವಮಾನ ಮಾಡಿದ, ದೇಶದ್ರೋಹಿ ಎಂಬ ಹೇಳಿಕೆ ನೀಡಿದ ಪ್ರತಾಪ್ ಸಿಂಹ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ," ಈ ಮನವಿ ನೀಡುತ್ತಿದ್ದೇವೆ ಎಂದು ಒಕ್ಕಣೆಯಲ್ಲಿ ಹೇಳಲಾಗಿದೆ.[ಹೋರಾಟದಿಂದ ಹಿಂದೆ ಸರಿದ ಕೌರ್ ಗೆ ಪ್ರತಾಪ್ ತಿರುಗೇಟು]

ದೂರನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮೇಶ್ ಬೋರೇಗೌಡ ನೀಡಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದು ಎಫ್ಐಆರ್ ದಾಖಲಿಸಿಲ್ಲ.












Click it and Unblock the Notifications