ಕರ್ನಾಟಕದ ಈ 3 ಜಿಲ್ಲೆಗಳಲ್ಲಿ 'ಜಾಗತಿಕ ನ್ಯಾವಿನ್ಯತಾ ಜಿಲ್ಲೆಗಳ' ಸ್ಥಾಪನೆ: ಸಿದ್ದರಾಮಯ್ಯ ಘೋಷಣೆ
ಬೆಂಗಳೂರು, ನವೆಂಬರ್ 19: ಕರ್ನಾಟಕ ರಾಜ್ಯದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ನೀತಿಯ ಭಾಗವಾಗಿ ಇಲ್ಲಿನ ಮೂರು ಜಿಲ್ಲೆಗಳಲ್ಲಿ ನಾವಿನ್ಯತಾ ಜಿಲ್ಲೆಗಳನ್ನು ಸ್ಥಾಪಿಸಲಿದ್ದೇವೆ. ಭವಿಷ್ಯದಲ್ಲಿ ಇವು ಜಿಸಿಸಿಗಳ ತಾಣವಾಗಿ ಬದಲಾಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಬೆಂಗಳೂರಿನಲ್ಲಿ ಘೋಷಿಸಿದರು.
ಐಟಿ ಕೇಂದ್ರ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದ ಬೆಂಗಳೂರು ಟೆಕ್ ಶೃಂಗಸಭೆಯ 27 ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕರ್ನಾಟಕದ ಮೈಸೂರು, ಬೆಂಗಳೂರು ಹಾಗೂ ಬೆಳಗಾವಿಯನ್ನು ನಾವಿನ್ಯತಾ ಜಿಲ್ಲೆಗಳಾಗಿ ಸ್ಥಾಪಿಸಲಿದ್ದೇವೆ. ಈ ಕೇಂದ್ರಗಳನ್ನು ಸಶಕ್ತಗೊಳಿಸಲು ದೇಶದ ಮೊದಲ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ನೀತಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಇತರರಿಗೂ ಸರಿ ಸಾಟಿಯಿಲ್ಲದ ಎಂಜಿನಿಯರಿಂಗ್ ಪ್ರತಿಭೆಗಳು ಇವೆ. ಅಧಿಕ ಪ್ರಮಾಣದಲ್ಲಿ AI ವೃತ್ತಿಪರತೆ ಇದೆ. ಈ ಅಗತ್ಯ ಸಂಪನ್ಮೂಲಗಳ ಅಡಿಯಲ್ಲಿ ರಾಜ್ಯವು ಭವಿಷ್ಯದಲ್ಲಿ ಮತ್ತಷ್ಟು ಗಟ್ಟಿಕೊಳ್ಳಲಿದೆ. ಉದ್ಯಮ-ಸಿದ್ಧ ಉದ್ಯೋಗಿಗಳನ್ನು ರಚಿಸಲು ವಿನ್ಯಾಸಗೊಳಿಸಲಾದ ಉಪಕ್ರಮ ಇದಾಗಿದೆ.
ಕರ್ನಾಟಕ ಸರ್ಕಾರವು ಇಂದು ವಿವಿಧ ಪ್ರತಿಷ್ಠಿತ ಐಟಿ ಕಂಪನಿಗಳ ಮೈಕ್ರೋಸಾಫ್ಟ್, ಇಂಟೆಲ್, ಆಕ್ಸೆಂಚರ್, ಐಬಿಎಂ ಮತ್ತು ಬಿಎಫ್‌ಎಸ್‌ಐ ಕನ್ಸೋರ್ಟಿ ಜೊತೆಗೆ ಮಹತ್ವ ಒಪ್ಪಂದ ಮಾಡಿಕೊಂಡಿತು. ಇದರ ಅಡಿಯಲ್ಲಿ ರಾಜ್ಯದಲ್ಲಿ 1 ಲಕ್ಷ ಮಂದಿಗೆ ಕೌಶಲ್ಯ ಒದಗಿಸಲಿದ್ದೇವೆ ಎಂದು ಸಿಎಂ ತಿಳಿಸಿದರು.
ನಮ್ಮ ಸರ್ಕಾರ ಮೈಕ್ರೋಸಾಫ್ಟ್ ಕಂಪನಿ ಜೊತೆಗೂಡಿ ವಾಷಿಕ್ 10,000 ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ತರಬೇತಿ ನೀಡುವ ಉದ್ದೇಶವಿದೆ. ಇಂಟೆಲ್ ಜೊತೆಗೂಡಿ ಪ್ರತಿ ವರ್ಷ 20,000 ಮಂದಿಗೆ ಎಐ ತರಬೇತಿ ನೀಡಲಾಗುವುದು.
10,000 ಅಭ್ಯರ್ಥಿಗಳಿಗೆ ಅಕ್ಸೆಂಚರ್ ಸಹಕಾರದಲ್ಲಿಸೈಬರ್ ಸೆಕ್ಯುರಿಟಿ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನ ತರಬೇತಿ ನೀಡಲಾಗುವುದು. AI ಮತ್ತು ಕ್ಲೌಡ್ ಸರ್ವೀಸ್ ಬಗ್ಗೆ 50,000 ಜನರಿಗೆ ಐಬಿಎಂ ಮೂಲಕ ತರಬೇತಿ, BFSI ಕನ್ಸೋರ್ಟಿಯಂ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ 10,000 ಜನರಿಗೆ ತರಬೇತಿ ನೀಡುವ ಗುರಿ ಹೊಂದಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ಸರ್ಕಾರ ಇವುಗಳ ಮೂಲಕ ರಾಜ್ಯದ ಭವಿಷ್ಯವನ್ನು ಸಸೂತ್ರವಾಗಿ ನಿರ್ಮಿಸಲಿದೆ. ಕೌಶಲ್ಯಯುತ ಅಭ್ಯರ್ಥಿಗಳನ್ನು ನಾಡಿಗೆ ಪ್ರತಿ ವರ್ಷವು ನೀಡಲಿದೆ. ಇದೆಲ್ಲ ಸಾಕಾರಕ್ಕಾಗಿಯೇ ಸರ್ಕಾರವು ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ನೀತಿ 2024-2029 ಲೋಕಾರ್ಪಣೆ ಮಾಡಿದೆ ಎಂದರು.












Click it and Unblock the Notifications