Viral Case: ಹಣಕ್ಕಾಗಿ 6 ಗಂಡಂದಿರನ್ನು ಚೇಂಜ್ ಮಾಡಿದ ಮಹಿಳೆ, 7ನೇ ಕೇಸ್‌ ವೇಳೆ ತಗಲಾಕಿಕೊಂಡ ಚಾಲಾಕಿ, ಜಡ್ಜ್ ಹೇಳಿದ್ದೇನು?

ಬೆಂಗಳೂರು, ಜುಲೈ 29: ಮದುವೆ ಆದ ಬಳಿಕ ಪತಿ- ಪತ್ನಿ ಮಧ್ಯೆ ವಿರಸ, ಜಗಳ ಬರುವುದು ಸಾಮಾನ್ಯ. ಕೆಲವು ಪ್ರಕರಣಗಳಲ್ಲಿ ಇಂತಹ ಜಗಳಗಳು ಸುಖಾಂತ್ಯ ಕಾಣದೇ, ವಿಚ್ಚೇದನ (ಡಿವೋರ್ಸ್) ಕ್ಕಾಗಿ ಕೋರ್ಟ್ ಮೆಟ್ಟಿಲೇರುತ್ತಾರೆ. ಬಳಿಕ ಪತಿಯಿಂದ ನಿರ್ವಹಣಾ ವೆಚ್ಚ ಪಡೆದು ಪತ್ನಿಯಾದವಳು ದೂರವಿರುತ್ತಾಳೆ.ಇದು ಜನಸಾಮಾನ್ಯರಲ್ಲಿ ಮಾತ್ರವಲ್ಲದೇ, ಉದ್ಯಮಿಗಳು, ಸೆಲೆಬ್ರೆಟಿಗಳ ಜೀವನದಲ್ಲೂ ನಡೆಯುತ್ತಿದೆ.

ಆದರೆ ಇಲ್ಲೊಬ್ಬ ಮಹಿಳೆಯು ಮಹಿಳೆಯರಿಗೆ ಇರುವ ಕಾನೂನುಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಬರೋಬ್ಬರಿ ಏಳು ಮದುವೆ ಆಗಿದ್ದಾರೆ. 06ಆರು ಮಂದಿ ಬಳಿಕ ಜಗಳವಾಡಿ ವಿಚ್ಛೇದನ ಮತ್ತು ಗಂಡಂದಿರಿಂದದ ನಿರ್ವಹಣಾ ಪರಿಹಾರ ಪಡೆದಿದ್ದಾರೆ. 7ನೇ ಗಂಡನ ಜತೆ ಮತ್ತೆ ಇದೇ ಚಾಳಿ ಮುಂದುವರೆಸಿದ್ದ ಚಾಲಾಕಿ ಮಹಿಳೆಯ ಅಸಲಿ ಕಥೆ ಗೊತ್ತಾಗಿ, ನ್ಯಾಯಾಧೀಶರೇ ಅರೆಕ್ಷಣ ಬೆರಗಾದ ಘಟನೆ ನಡೆದಿದೆ.

Karnataka Woman s Seven Marriages For Money Judges Shock see Her 7th Case

ಅಸಲಿಗೆ ಆಗಿದ್ದೇನು?

ಮಹಿಳೆಯೊಬ್ಬಳು ಏಳನೇ ಪತಿಯೊಂದಿಗೆ ಜಳಗವಾಡಿ ಡಿವೋರ್ಸ್ ಪಡೆಯಲು ನ್ಯಾಯಾಲಯಕ್ಕೆ ಧಾವೆ ಹೂಡಿದ್ದರು. ಪತಿ ಮೇಲೆ ಸೆಕ್ಷನ್ 498a ದಾಖಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರಿಗೆ ಇದು ಏಳನೇ ಮದುವೆ ಎಂದು ಗೊತ್ತಾಗಿದೆ. ಇಲ್ಲೂ ಮಹಿಳೆಯು ಪತಿ ಹಿಂಸೆ ನೀಡಿದ್ದು, ಕ್ರೌರ್ಯ ಮರೆದಿದ್ದಾನೆ. ದೈಹಿಕ ಹಿಂಸೆ ನೀಡಿದ್ದಾನೆ ಎಂದೆಲ್ಲ ಅರ್ಜಿಯಲ್ಲಿ ದೂರಿದ್ದಾನೆ ಎಂದು ಆರೋಪಿಸಿದ್ದಾರೆ.

ನ್ಯಾಯಾಧೀಶರು ನಡೆಸುವ ವಿಚಾರಣೆಯ ವಿಡಿಯೋ ವೈರಲ್ ಆಗುತ್ತಿದೆ. ವಿಚಾರಣೆ ವೇಳೆ ಈಕೆ ಈ ಹಿಂದೆ ವರ್ಷಕ್ಕೆ ಒಬ್ಬರಂತೆ 06 ಮಂದಿಯನ್ನು ವಿವಾಹವಾಗಿದ್ದಾಳೆ. ಪ್ರತಿ ಮದುವೆ ಬಳಿಕ ಆರು ತಿಂಗಳ ನಂತರ ಪತಿಯ ಮೇಲೆ ಇಲ್ಲ ಸಲ್ಲದ ಹಲ್ಲೆ, ಹಿಂಸೆ, ಕಿರುಕುಳ ಆರೋಪ ಹೊರಿಸಿ, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಚ್ಛೇದನ ಪಡೆದು, ಗಂಡಂದಿರಿಂದ ದುಬಾರಿ ಮೊತ್ತ (ನಿರ್ವಹಣಾ ವೆಚ್ಚ) ಪಡೆದು ದೂರವಾಗುತ್ತಾಳೆ. ಬೇರೆ ಮದುವೆ ಆಗಿ ಮತ್ತದೇ ಕಥೆ ಈಕೆಯದು ಎಂದು ವಕೀಲರು ತಿಳಿಸಿದ್ದಾರೆ.

ಏಳನೇ ಪ್ರಕರಣದ ಮಾಹಿತಿ ಪಡೆದ ಜಡ್ಜ್

ಇದು ಏಳನೇ ಪ್ರಕರಣವಾಗಿದ್ದು, ಇಲ್ಲೂ ಸಹ ಅದೇ ರೀತಿ ಮಾಡಿದ್ದಾಳೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದರೆ ಏಳನೇ ಗಂಡ ಆಕೆಯ ಎಚ್ಚರಗೊಂಡಿದ್ದು, ಪತ್ನಿ ಮೇಲೆ ತಾನು ಸಹ ಪ್ರಕರಣ ದಾಖಲಿಸಿದ್ದಾನೆ. ಆಗ ಇವರ ಆರನೇ ಪ್ರಕರಣ ಬಗ್ಗೆ ಗೊತ್ತಿದೆ. ಇದು ಏಳನೇ ಪ್ರಕರಣವಾ? ನೀವು ಸೆಟ್ಲಮೆಂಟ್ ಮಾಡಿಕೊಳ್ಳುವುದಲ್ಲವೇ ಎಂದು ನ್ಯಾಯಾಧೀಶರು ತಮಾಷೆ ಮಾಡಿದ್ದಾರೆ.

ಎಲ್ಲ ಪ್ರಕರಣಗಳಲ್ಲಿ ಈಕೆ ಪತಿ ಮೇಲೆ ಮಾಡಿದ ಆರೋಪ, ಪಡೆದ ದುಬಾರಿ ಹಣ, ಯಾವ ಸೆಕ್ಷನ್ ಅಡಿ ಕೇಸ್ ದಾಖಲು, ಹಳೆಯ ಪತಿಯಂದಿರು ಇರುವ ಬಗ್ಗೆ ಜಡ್ಜ್ ಮಾಹಿತಿ ಪಡೆದಿದ್ದಾರೆ. ಈ ವೇಳೆ ಮಹಿಳೆಗೆ ಜಡ್ಜ್ ನೀವು ಕಾನೂನಿನ ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+