ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಖಚಿತ

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕೆ ಬೇಡವೇ ಎಂದು ನಿರ್ಣಯಿಸಲು ಸರ್ಕಾರ ರಚಿಸಿದ್ದ 9 ಜನರ ಧ್ವಜ ಸಮಿತಿಯು ನವೆಂಬರ್ 9ರಂದು ಸಭೆ ಸೇರಲಿದ್ದು, ಪ್ರತ್ಯೇಕ ಧ್ವಜ ಬೇಕೆಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.

ಧ್ವಜ ಸಮಿತಿಯ ವರದಿಯನ್ನು ಸರ್ಕಾರವು ಒಪ್ಪಿದಲ್ಲಿ ಜಮ್ಮು ಮತ್ತು ಕಾಶ್ಮೀರದ ನಂತರ ಅಧಿಕೃತ ಧ್ವಜ ಹೊಂದಿದ ದೇಶದ ಎರಡನೇ ರಾಜ್ಯ ಎಂಬ ಖ್ಯಾತಿಯನ್ನು ಕರ್ನಾಟಕ ಪಡೆಯುತ್ತದೆ. ಆದರೆ ಆ ಧ್ವಜಕ್ಕೆ ಸಂವಿಧಾನದ ಮಾನ್ಯತೆ ಸಿಗುತ್ತದೆಯೊ ಇಲ್ಲವೊ ಎನ್ನುವುದು ಮುಂದಿನ ವಿಷಯವಾಗಲಿದೆ.

Karnataka to Have its own Flag soon

ಕನ್ನಡ ಧ್ವಜದ ವಿಷಯದಲ್ಲಿ ಭಾರಿ ಪರ ವಿರೋಧ ಚರ್ಚೆಗಳು ಏರ್ಪಟ್ಟ ಹಿನ್ನೆಲೆಯಲ್ಲಿ ಸರ್ಕಾರವು ಆಡಳಿತ ಸುಧಾರಣೆ ಇಲಾಖೆ, ಗೃಹ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಂಪಿ ಕನ್ನಡ ವಿವಿ ಕುಲಸಚಿವರು, ಕಾನೂನು ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗಳು ಸೇರಿದ 9 ಜನರ ಸಮಿತಿಯೊಂದನ್ನು ರಚಿಸಿತ್ತು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಅಧ್ಯಕ್ಷರನ್ನಾಗಿ ನೇಮಿಸಿತ್ತು.

ಆ 9 ಜನರ ಸಮಿತಿಯು ನಾಡಿನ ಭಾಷೆ, ಆಚಾರ, ಕೃಷಿ, ಜನಜೀವನ, ನಂಬಿಕೆಗಳು, ಇತಿಹಾಸ, ಸಂಸ್ಕೃತಿ, ಜಾತಿ, ಧರ್ಮ ಎಲ್ಲವನ್ನೂ ಪರಿಗಣಿಸಿ ಮೂರು ಬಣ್ಣ ಹೊಂದಿರುವ ದ್ವಜವನ್ನು ಕನ್ನಡ ದ್ವಜವಾಗಿ ಬಳಸಲು ಶಿಫಾರಸು ಮಾಡಲಿದೆ.

ಈಗಿರುವ ಕನ್ನಡ ಧ್ವಜವನ್ನು ರಾಜ್ಯದ ಜನರ ಅಭಿಮಾನದ ಸಂಕೇತವಾಗಿ ಬಳಸುತ್ತಿದ್ದೇವೆಯೇ ವಿನಃ ದ್ವಜಕ್ಕೆ ಯಾವುದೇ ಕಾನೂನಾತ್ಮಕ ಮಾನ್ಯತೆಗಳಿಲ್ಲ. ಆದರೆ ಸಮಿತಿಯ ವರದಿ ಅನುಮೋದನೆಗೊಂಡ ನಂತರದ ಧ್ವಜಕ್ಕೆ ಕಾನೂನಾತ್ಮಕ ಒಪ್ಪಿಗೆ ಇರಲಿದೆ.

'ರಾಷ್ಟ್ರಧ್ವಜಕ್ಕೆ ಅಪಚಾರವಾಗದೆ ನಾಡಧ್ವಜವನ್ನು ಹೊಂದುವುದು ಸಂವಿಧಾನದ ಉಲ್ಲಂಘನೆ ಆಗುವುದಿಲ್ಲ' ಎಂದು ಕೆಲವು ಹಿರಿಯ ಕಾನೂನು ಪಂಡಿತರು ಹೇಳಿರುವುದು ಕನ್ನಡಿಗರ ಸ್ವತಂತ್ರ್ಯ ಕನ್ನಡ ಧ್ವಜದ ಆಸೆಗೆ ಮತ್ತಷ್ಟು ಬಲ ತುಂಬಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+